ಚನ್ನಪಟ್ಟಣ: ಕುಮಾರಸ್ವಾಮಿ ಅವರು ಈಗಾಗಲೇ ಎರಡು ಬಾರಿ ವಿಫಲವಾಗಿರುವ ನಾಯಕ. ಅವರನ್ನು ಜನತೆ ತಿರಸ್ಕಾರ ಮಾಡಿದ್ದಾರೆ. ಅವರಿಗೆ ಬಹುಮತ ನೀಡಿಲ್ಲ. ಅದೇ ಪ್ರಕ್ರಿಯೆ 2023ಕ್ಕೂ ಮುಂದುವರಿಯಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರ ಇದ್ದಾಗ ಸರಿಯಾದ ಆಡಳಿತ ನೀಡಲಿಲ್ಲ. ಅದರೆ, ಮತ್ತೆ 2023ಕ್ಕೆ ಬಹುಮತ ಪಡೆಯುತ್ತೇನೆ ಎನ್ನುತ್ತಿದ್ದಾರೆ. ಅವರು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. 2018ರಲ್ಲಿ ಚನ್ನಪಟ್ಟಣದ ಅವರ ಕಾರ್ಯಕರ್ತರು ಅವರನ್ನ ಕರೆದುಕೊಂಡು ಬಂದರು. ಕುಮಾರಸ್ವಾಮಿ ಸುಳ್ಳು ಹೇಳಿ ಗೆದ್ದು ಬಿಟ್ಟರು. ಆದರೆ, 2023ರ ಪರಿಸ್ಥಿತಿ ಆ ರೀತಿ ಇಲ್ಲ. ಕುಮಾರಸ್ವಾಮಿ ಇವತ್ತು ಲೀಡರ್ಗಳ ಮನೆಗಳಿಗೆ ಹೋಗ್ತಿದ್ದಾರೆ. ವಾಪಸ್ ಬನ್ನಿ ವಾಪಸ್ ಬನ್ನಿ ಎಂದು ಹೋಗ್ತಿದ್ದಾರೆ. ಕುಮಾರಸ್ವಾಮಿ ಕಳೆದ ನಾಲ್ಕುವರೆ ವರ್ಷದಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಅಭಿವೃದ್ಧಿ ಇಟ್ಟುಕೊಂಡು ಚುನಾವಣೆ: ಕುಮಾರಸ್ವಾಮಿ ಭಾವನಾತ್ಮಕ ವಿಚಾರದ ಮೇಲೆ ಚುನಾವಣೆ ಮಾಡುತ್ತಾರೆ. ನಾವು ಅಭಿವೃದ್ಧಿ ಇಟ್ಟುಕೊಂಡು ಚುನಾ ವಣೆ ಮಾಡುತ್ತೇವೆ. ಕುಮಾರಸ್ವಾಮಿಯ ಯಾವುದೇ ಗಿಮಿಕ್ 2023ರಲ್ಲಿ ವರ್ಕ್ ಆಗಲ್ಲ. ಅವರು ಯಾರ ಮನೆಗೆ ಹೋಗಿದ್ದಾರೋ ಆ ಲೀಡರ್ಗಳು ಮಾನಸಿಕ ವಾಗಿ ನಮ್ಮ ಜೊತೆ ಇದ್ದಾರೆ. ನಮಗೆ ಅವರೆಲ್ಲರ ಬೆಂಬಲ ಇದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಜನರ ಒಲವಿದೆ. ಜಾತ್ಯಾತೀತವಾಗಿ ಜನರು ಬಿಜೆಪಿ ಕಡೆ ಜನ ಮನಸ್ಸು ಮಾಡಿದ್ದಾರೆ. ಈ ದಿಕ್ಕಿನಲ್ಲಿ ಪಕ್ಷವು ಈ ಭಾಗದಲ್ಲಿ ಸಂಘಟನೆಗೆ ಸಾಕಷ್ಟು ತಂತ್ರಗಾರಿಕೆ ಮಾಡುವ ಅವಶ್ಯವಿದೆ. ಈ ಸಂಬಂಧ ವರಿಷ್ಠರೊಂದಿಗೆ ಸಮಾಲೋಚನೆ ಮಾಡುವುದಾಗಿ ಹೇಳಿದರು.
ಅಸಂಬದ್ಧ ವಿಚಾರ: ಸರ್ಕಾರದ ಹಣದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದ್ದು, ಅವರು ಹೇಳಿರುವುದು ಅಸಂಬದ್ಧ ವಿಚಾರವಾಗಿದೆ. ಸರ್ಕಾರ ಏಕೆ ಹಣ ಖರ್ಚು ಮಾಡಿದೆ. ಏರ್ಪೊàರ್ಟ್ ನವರು ಮಾಡ ಬೇಕಿತ್ತು ಅಂತಾರೆ. ಇವತ್ತು ಕರ್ನಾಟಕದ ಕೇಂದ್ರ ಬಿಂದು ಬೆಂಗಳೂರು. ಅದಕ್ಕೆ ಕೆಂಪೇಗೌಡರ ದೂರದೃಷ್ಟಿ ಕಾರಣ. ಹೀಗಾಗಿ, ಸರ್ಕಾರ ವಿವೇಚನೆಯಿಂದ ಹಣ ಖರ್ಚು ಮಾಡಿದೆ. ಅವರಿಗೆ ರಾಜಕೀಯ ಹಿನ್ನಡೆಯಾಗುತ್ತಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಜನಾಂಗ ಬಿಜೆಪಿ ಕಡೆವಾಲುತ್ತಿದೆ. ಈ ಅತಂಕ ಕುಮಾರಸ್ವಾಮಿಗಿದೆ. ಇದಲ್ಲದೆ, ರಾಮನಗರ – ಚನ್ನಪಟ್ಟಣದಲ್ಲಿ ಕಾಂಗ್ರೆಸ್ – ಬಿಜೆಪಿ ದೋಸ್ತಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅರೋಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ನಮ್ಮದು ಒಂದು ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ನಂತೆಯೇ ಜೆಡಿಎಸ್ ಕೂಡ ವಿರೋಧಿ ನಮಗೆ. ನಮ್ಮಲ್ಲಿ ಯಾವುದೇ ರೀತಿಯ ಒಳ ಒಪ್ಪಂದ ಇಲ್ಲ ಕುಮಾರಸ್ವಾಮಿಗೆ ಈಗ ಭಯ ಇದೆ ಎಂದು ವ್ಯಾಖ್ಯಾನಿಸಿದರು.