Advertisement

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್

10:36 PM Mar 31, 2023 | Team Udayavani |

ಹಾವೇರಿ:ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.ಹಾನಗಲ್ ಪಟ್ಟಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ 76 ರ ಹರೆಯದ ಹಿರಿಯ ನಾಯಕ ಮನೋಹರ ತಹಶೀಲ್ದಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಏಪ್ರಿಲ್ 7 ರಂದು ಹಾನಗಲ್ ಪಟ್ಟಣಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದ್ದು ಈ ವೇಳೆ ಪಕ್ಷ ಸೇರ್ಪಡೆಯಾಗಲಿದ್ದಾರೆ.

Advertisement

ಇವತ್ತು ನನ್ನ ರಾಜಕೀಯ ತೀರ್ಮಾನದ ಎರಡನೇ ಘಟ್ಟ.1969ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಸ್ನೇಹಿತರು ಸೇರಿ ಅಂದು ಕಾಂಗ್ರೆಸ್ ಉಳಿವಿಗೆ ನಿರ್ಧಾರ ಮಾಡಿದ್ದೆ. ಎನ್ ಎಸ್ ಯುಐ ಮೂಲಕ ಕಾಂಗ್ರೆಸ್ ಗೆ ಬಂದೆ. ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಅಖಂಡ ಧಾರವಾಡ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷನಾಗಿ 11 ವರ್ಷ ಸೇವೆ ಮಾಡಿದ್ದೇನೆ. 1978 ರಲ್ಲಿ ಮೊದಲ ಸಲ ಶಾಸಕನಾದೆ. 1989 ರಲ್ಲಿ ಎರಡನೇ ಸಲ 1999ರಲ್ಲಿ ಮೂರನೇ ಸಲ,
2013 ರಲ್ಕಿ ನಾಲ್ಕನೇ ಸಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಉಪ ಸಭಾಪತಿಯಾಗಿ, ಸಚಿವನಾಗಿ ಕೆಲಸ ಮಾಡಿದ್ದೆ, ಕಾಂಗ್ರೆಸ್ ನನ್ನ ತಾಯಿ ಇದ್ದಂಗೆ ತಾಯಿಗೆ ಎಂದು ದ್ರೋಹ ಮಾಡಬಾರದು ಎಂದುಕೊಂಡಿದ್ದೆ. ತಾಯಿ ಎದೆ ಹಾಲು ವಿಷ ಆದಾಗ ಮಗು ಬದುಕಲು ಸಾಧ್ಯವಿಲ್ಲ.ನಾನು ಶಾಸಕನಿದ್ದಾಗಲೇ, ದೂರದ ಹುಬ್ಬಳ್ಳಿಯಿಂದ ಬಂದವರಿಗೆ ಮಣೆ ಹಾಕಿದರು. ಹುಟ್ಟಿದ್ದು ಕಾಂಗ್ರೆಸ್ ನಲ್ಲಿ ಸಾಯೋದು ಕಾಂಗ್ರೆಸ್ ನಲ್ಲಿ ಅಂದುಕೊಂಡಿದ್ದೆ. ನನಗೆ ನೋವು ಕೊಟ್ಟರೂ ಪಕ್ಷಕ್ಕಾಗಿ ಕೆಲಸ ಮಾಡಿದೆ. ಉಪಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಹೊರಗಿನವರು, ಒಳಗಿನವರು ಯಾರು ಇರಲಿಲ್ಲ.ಎಂಎಲ್ ಸಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು.ಸೂಟ್ ಕೇಸ್ ತಗೊಂಡು ಹಿಂದೆ ಸರದಿದ್ದಾರೆ ಎಂದು ಅಪಪ್ರಚಾರ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ನನ್ನನ್ನ ಕೊಂಡುಕೊಳ್ಳುವ ಗಂಡಸು ಭೂಮಿಯ ಮೇಲೆ ಹುಟ್ಟಿಲ್ಲ.ಅವರಿಗೆ ತಾಕತ್ ಇದ್ದರೆ ನನ್ನನ್ನ ಸ್ಪರ್ಧೆ ಯಿಂದ ಹಿಂದೆ ಸರಿಸಲಿ.ನನಗಾದ ಅನ್ಯಾಯಕ್ಕೆ ಅಲ್ಲಿಂದ ಸಿಡಿದು ಹೊರ ಬಂದಿದ್ದೇನೆ. ಕೈ ಮುಗಿದು ಕಾಲಿಗೆ ಬಿದ್ದು ಟಿಕೆಟ್ ಕೇಳಿದೆ. ಅವರಿಗೆ ಕರುಣೆ ಇಲ್ಲ, ಹೃದಯ ಇಲ್ಲ, ಅವರ ಮನಸ್ಸು ಮರಗಲೆ ಇಲ್ಲ. ಇದು ನನ್ನ ಕೊನೆ ಚುನಾವಣೆ ಒಂದು ಅವಕಾಶ ಕೊಡಿ ಎಂದು ಕೇಳಿದೆ. ಗಲ್ಲಿಗೆ ಹಾಕುವವನಿಗೆ ಕೊನೆ ಆಸೆ ಏನು ಅಂತಾ ಕೇಳುತ್ತಾರೆ.ಆದರೆ ನನಗೆ ಹಾಗೂ ಕೇಳಲಿಲ್ಲ, ಸೌಜನ್ಯಕ್ಕೂ ಕೇಳಲಿಲ್ಲ. ಚೆಂಡಿಗೆ ಕೈ ಹಾಕಿ ಹೊರ ಹಾಕಿದರು. ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತೀದ್ದೇನೆ.

ನನ್ನ ಮುಂದೆ ಬಹಳಷ್ಟು ಪಕ್ಷಗಳಿದ್ದವು. ನೀವೆ ನನಗೆ ಸುಪ್ರೀಂ, ನೀವು ನನಗೆ ಬಿ ಫಾಮ್೯ ಕೊಡೊರು.ಪಕ್ಷೇತರ ಯಾಕಾಗಬಾರದು ಎನ್ನುವ ಚಿಂತನೆ ಬಂತು. ಆಗ ನಾನು ಒಂಟಿ ಸಿಪಾಯಿ ಆಗುತ್ತೇನೆ. ಪಕ್ಷೇತರ ಬೇಡ, ಪಕ್ಷದಿಂದ ನಿಲ್ಲುವ ತೀರ್ಮಾನ ಮಾಡಿದೆವು. ಜೆಡಿಎಸ್ ಆಯ್ಕೆ ಮಾಡಿದ್ರೆ ಒಳ್ಳೆಯದು ಅಂತ ಹೇಳಿದರು. ಏಪ್ರಿಲ್ 7 ರಂದು ಪಂಚರತ್ನ ಯಾತ್ರೆ ಹಾನಗಲ್ ಗೆ ಬರುತ್ತದೆ.ನೀವು ಒಪ್ಪಿಗೆ ಕೊಟ್ಟರೆ, ನಾವು ನೀವು ಸೇರಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಏಪ್ರಿಲ್ 7 ಕ್ಕೆ ಪಂಚರತ್ನ ಯಾತ್ರೆ ಸ್ವಾಗತಿಸೋಣ. ಅಂದು ಎಲ್ಲರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರೋಣ. ಮತ್ತೆ ಶಾಸಕನಾಗುವ ಹುಚ್ಚು ನನ್ನಲ್ಲಿ ಇರಲಿಲ್ಲ. ಸ್ವಾಭಿಮಾನಕ್ಕಾಗಿ ನಿಂತಿದ್ದೇನೆ, ತಾಲೂಕಿನವರೇ ಮುಂದಿನ‌ ಶಾಸಕರಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next