Advertisement

ಕಳೆದ ಬಾರಿಯ ಸೋಲಿಗೆ ನೈತಿಕ ಹೊಣೆ ನನ್ನದೇ: ಮಾಜಿ ಸಚಿವ ಡಾ.ಎಚ್‌. ಸಿ.ಮಹದೇವಪ್ಪ

02:41 PM Nov 29, 2022 | Team Udayavani |

ತಿ.ನರಸೀಪುರ: ಕಳೆದ 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ ನೈತಿಕ ಹೊಣೆ ನನ್ನದೇ, ಯಾವ ಕಾರ್ಯ ಕರ್ತ ರು ಅಥವಾ ಮುಖಂಡರು ಸೋಲಿಗೆ ಜವಾ ಬ್ದಾರರಲ್ಲ ಎಂದು ಮಾಜಿ ಸಚಿವ ಡಾ.ಎಚ್‌. ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.

Advertisement

ತಾಲೂಕಿನ ಕಲಿಯೂರು ಗ್ರಾಮದಲ್ಲಿ ನಡೆದ ಪಂಚಾಯಿತಿ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರ ಸಭೆ ಯಲ್ಲಿ ಅಭಿಪ್ರಾಯ ಆಲಿಸಿ ಮಾತನಾಡಿದರು. ವ್ಯಾಪಕ ಅಪಪ್ರಚಾರದೊಂದಿಗೆ ಚುನಾ ವಣೆಯ ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಜೊತೆ ಬಿಜೆಪಿ ಶಾಮೀಲಾದ ಹಿನ್ನೆಲೆಯಲ್ಲಿ ನನಗೆ ಸೋಲಾಯಿತು. ಕ್ಷೇತ್ರದಲ್ಲಿ ಅಭಿ ವೃದ್ಧಿಗೆ ದುಡಿದರೂ ಸೋತಿದ್ದ ನಾನೇ ಜವಾಬ್ದಾರ. ಅದಕ್ಕಾಗಿ ಕಾರ್ಯಕರ್ತರು ಮತ್ತು ಮುಖಂಡರನ್ನು ದೂಷಿಸುವುದು ಬೇಡ ಎಂದು ಜನರಲ್ಲಿ ಮನವಿ ಮಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನ್ಯಾ. ನಾಗಮೋಹನ ದಾಸ್‌ ಸಮಿತಿ ರಚಿಸಿದ್ದರು. ಅವರ ವರದಿಯನ್ನು ಆಧರಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಿದ್ದು ತಾವೇ ಎಂದು ಪ್ರಚಾರವನ್ನು ಪಡೆದುಕೊಳ್ಳುತ್ತಿದೆ. ಎಸ್‌ ಸಿ ಮತ್ತು ಎಸ್‌ ಟಿ ಸಮುದಾಯಗಳು ಒಂದಾಗುವ ಬಗ್ಗೆ ವಾಲ್ಮೀಕಿ ಶ್ರೀಗಳು ಬರೆದಿರುವ ಪುಸ್ತಕವನ್ನು ಎಲ್ಲರೂ ಓದಿ ಒಂದುಗೂಡಬೇಕೆಂದು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಬಾಲಚಂದ್ರ, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಮಾಲಂಗಿ ಜೆ.ಶಿವಸ್ವಾಮಿ, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಂ.ಎಸ್‌.ಶಿವಮೂರ್ತಿ, ಪಿಎಸಿಸಿಎಸ್‌ ಮಾಜಿ ಅಧ್ಯಕ್ಷ ತೊಟ್ಟವಾಡಿ ರವಿ, ತಾಪಂ ಮಾಜಿ ಸದಸ್ಯೆ ಚಿನ್ನಮ್ಮ ಸಿದ್ದರಾಜು, ಕೆಪಿಸಿಸಿ ಹಿಂ.ವರ್ಗಗಳ ಸಂಚಾಲಕ ಎಂ.ಬಿ.ಚಂದ್ರ ಶೇಖರ್‌, ಗ್ರಾಪಂ ಸದಸ್ಯರಾದ ಶಿವಣ್ಣ, ಎಂ.ಎಸ್‌.ನಟರಾಜಮೂರ್ತಿ, ಮಮತಾ, ನಂಜುಂಡಸ್ವಾಮಿ ಇತರರು ಇದ್ದರು.°

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next