ಬೆಂಗಳೂರು: ಮಾಜಿ ಡಿಸಿಎಂ ಜಿ.ಪರಮೇಶ್ವರ್ ನಿವಾಸ ಮತ್ತು ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ.
ಸದಾಶಿವ ನಗರದಲ್ಲಿರುವ ಪರಮೇಶ್ವರ್ ನಿವಾಸ, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು. ಡಿಗ್ರಿ ಕಾಲೇಜು ಸೇರಿದಂತೆ ಹಲವು ಕಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅದರ ಜೊತೆಗೆ ಪರಮೇಶ್ವರ್ ಆಪ್ತನ ಮನೆ ಮೇಲೂ ದಾಳಿ ನಡೆಸಲಾಗಿದೆ.
ಈ ಬಗ್ಗೆಪ್ರತಿಕ್ರಿಯೆ ನೀಡಿದ ಅವರು ಐಟಿ ದಾಳಿ ನಡೆದಿರುವುದು ಸಂತೋಷ, ನಮ್ಮ ತಪ್ಪುಗಳಿದ್ದರೆ ದಾಳಿ ನಡೆಯಲಿ ಎಂದು ಕೊರಟಗೆರೆಯಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ ಆರ್ ಎಲ್ ಜಾಲಪ್ಪ ಅವರ ಮಗನ ನಿವಾಸದ ಮೇಲೆ, ನೆಲಮಂಗಲ ಪುರಸಭಾ ಸದಸ್ಯ ಸೇರಿದಂತೆ ರಾಜ್ಯದ ವಿವಿದೆಡೆ ಇಂದು ಬೆಳಗ್ಗೆಯಿಂದಲೇ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಶೀಲನೆಯಲ್ಲಿ ತೊಡಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರನ್ನೇ ಐಟಿ ಅಧಿಕಾರಿಗಳು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಇದರಲ್ಲಿ ಸರ್ಕಾರದ ಕುತಂತ್ರವೂ ಅಡಗಿದೆ ಎಂದು ತಿಳಿಸಿದ್ದಾರೆ.