Advertisement

ಮಾಜಿ ಕ್ರಿಕೆಟಿಗರು, ಅಂಪೈರ್‌ಗಳಿಗೆ ಪಿಂಚಣಿ ದುಪ್ಪಟ್ಟು: ಬಿಸಿಸಿಐ

11:20 PM Jun 14, 2022 | Team Udayavani |

ಮುಂಬಯಿ: ಭಾರತದ ಮಾಜಿ ಟೆಸ್ಟ್‌, ಪ್ರಥಮ ದರ್ಜೆ ಕ್ರಿಕೆಟಿಗರು ಹಾಗೆಯೇ ನಿವೃತ್ತ ಅಂಪಾಯರ್‌ಗಳಿಗೆ ನೀಡುವ ಪಿಂಚಣಿಯನ್ನು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ದುಪ್ಪಟ್ಟುಗೊಳಿಸಿದೆ.

Advertisement

ಇದು 2022ರ ಜೂನ್‌ ತಿಂಗಳಿಂದ ಜಾರಿಗೆ ಬರಲಿದೆ.ಇದಕ್ಕೆ ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಧನ್ಯವಾದ ಸಲ್ಲಿಸಿದೆ. ಬೆಲೆಯೇರುತ್ತಿರುವ ಈ ಕಾಲದಲ್ಲಿ ಮಾಜಿ ಆಟಗಾರರು ಕಷ್ಟದಲ್ಲಿದ್ದರು. ಇಂತಹ ಹೊತ್ತಿನಲ್ಲಿ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ ಶ್ಲಾಘನೀಯ ಎಂದು ಐಸಿಎ ಅಧ್ಯಕ್ಷ ಅಶೋಕ್‌ ಮಲ್ಹೋತ್ರ ಅವರು ಹೇಳಿದ್ದಾರೆ.

ಈ ಹಿಂದೆ 15 ಸಾವಿರ ರೂ. ಪಡೆಯುತ್ತಿದ್ದ ಮಾಜಿ ಪ್ರಥಮ ದರ್ಜೆ ಕ್ರಿಕಿಟಿಗರು ಇನ್ನು 30 ಸಾವಿರ ರೂ. ಪಡೆಯಲಿದ್ದಾರೆ. ಈ ಹಿಂದೆ 37,500 ರೂ. ಪಡೆಯುತ್ತಿದ್ದ ಮಾಜಿ ಟೆಸ್ಟ್‌ ಆಟಗಾರರು ಇನ್ನು 60 ಸಾವಿರ ರೂ. ಪಡೆಯಲಿದ್ದಾರೆ. ಈ ಹಿಂದೆ 50 ಸಾವಿರ ರೂ. ಪಡೆಯುತ್ತಿದ್ದವರು 70 ಸಾವಿರ ರೂ. ಪಡೆಯಲಿದ್ದಾರೆ.

ಈ ಹಿಂದೆ 30 ಸಾವಿರ ರೂ. ಪಡೆಯುತ್ತಿದ್ದ ವನಿತಾ ಕ್ರಿಕೆಟಿಗರು ಇನ್ನು 52,500 ರೂ. ಪಡೆಯಲಿದ್ದರೆ 2003ಕ್ಕಿಂತ ಮೊದಲು ನಿವೃತ್ತಿಯಾದ ಪ್ರಥಮ ದರ್ಜೆ ಕ್ರಿಕೆಟಿಗರು ಹಿಂದೆ 22,500 ಪಡೆಯುತ್ತಿದ್ದರೆ ಇನ್ನು ಮುಂದೆ 45 ಸಾವಿರ ರೂ. ಪಡೆಯಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next