Advertisement

ಸಿದ್ದುಗೆ ಸೋಲಿನ ಸಪ್ಪಳ ಕೇಳಿಸಿದ್ದ ಕೊಪ್ಪಳ 

02:05 AM Mar 21, 2019 | |

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರ ಹಲವು ಕಾರಣಗಳಿಂದ ವಿಶೇಷವಾಗಿದೆ. 1991ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕೊಪ್ಪಳದಿಂದ ಸ್ಪರ್ಧೆ ಮಾಡಿ ಸೋತಿದ್ದನ್ನು ಈ ಭಾಗದ ಜನ ಇಂದಿಗೂ ಮೆಲುಕು ಹಾಕುತ್ತಾರೆ.

Advertisement

ಆಗ ರಾಜ್ಯದಲ್ಲಿ ಜನತಾದಳ ಹಾಗೂ ಕಾಂಗ್ರೆಸ್‌ನದ್ದೇ ಆರ್ಭಟ. ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧೆ ಮಾಡಿದರೂ ಗೆಲುವು ಖಚಿತ ಎಂಬ ಮಾತು ಸಾಮಾನ್ಯವಾಗಿತ್ತು. ಅದರಲ್ಲೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಪ್ತ ಎಚ್‌.ಜಿ.ರಾಮುಲು ಅವರು ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಭದ್ರಕೋಟೆಯನ್ನಾಗಿ ಮಾಡಿದ್ದರು. ಆ ವೇಳೆ, ಜನತಾದಳದ ರಾಯ ನಾಯಕ ಎಚ್‌.ಡಿ.ದೇವೇಗೌಡ ಅವರು ಕೊಪ್ಪಳ ಲೋಕಸಭೆಗೆ 1989ರಲ್ಲಿ ಬಸವರಾಜ ಪಾಟೀಲ್‌ ಅನ್ವರಿ ಅವರನ್ನು ಕಣಕ್ಕಿಳಿಸಿದ್ದರು. ಅದೃಷ್ಟವಶಾತ್‌ ಬಸವರಾಜ ಪಾಟೀಲ್‌ ಅನ್ವರಿ ಗೆಲುವು ಸಾ ಧಿಸುವ ಮೂಲಕ ದಕ್ಷಿಣ ಭಾರತದಲ್ಲಿಯೇ ಏಕೈಕ ಜನತಾದಳ ಸಂಸದ ಎಂಬ ಪ್ರಖ್ಯಾತಿ ಪಡೆದಿದ್ದರು. ನಂತರ, 1991ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆಗೆ ಜೆಡಿಎಸ್‌ನಲ್ಲಿದ್ದ ಬಸವರಾಜ ಪಾಟೀಲ್‌ ಅನ್ವರಿಯವರು ಏಕಾಏಕಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರಿಂದ ಕೊಪ್ಪಳ ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳಬೇಕೆಂದು ಪ್ರಯತ್ನ ಮಾಡಿದ್ದ ದೇವೇಗೌಡರು ಈ ಕ್ಷೇತ್ರದಲ್ಲಿ ಪ್ರಬಲ ನಾಯಕನನ್ನೇ ಕಣಕ್ಕಿಳಿಸಬೇಕೆಂದು ನಿರ್ಧರಿಸಿ, ತಮ್ಮ ಶಿಷ್ಯ ಸಿದ್ದರಾಮಯ್ಯ ಅವರನ್ನೇ ಕಣಕ್ಕಿಳಿಸಿದ್ದರು.

ಕ್ಷೇತ್ರದಲ್ಲಿ ಲಿಂಗಾಯತ, ಕುರುಬ ಸಮುದಾಯದ·ಮತಗಳು ಹೆಚ್ಚಿದ್ದರಿಂದ ಸಿದ್ದರಾಮಯ್ಯ ಅವರನ್ನೇ
ಕಣಕ್ಕಿಳಿಸಲಾಗಿತ್ತು. ಆದರೆ, ಜೆಡಿಎಸ್‌ ತೊರೆದು ಕೈ ಸೇರಿದ್ದ ಬಸವರಾಜ ಪಾಟೀಲ್‌ ಅನ್ವರಿ ಮತ್ತೆ ಸ್ಪರ್ಧೆ ಮಾದ್ದರು. ಕಾಂಗ್ರೆಸ್‌ ವಿರುದ್ಧವೇ ಸ್ಪಧಿ ಸಿದ್ದ ಸಿದ್ದರಾಮಯ್ಯ ಅವರು ಪಾಟೀಲ್‌ ವಿರುದ್ಧ  11,197 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಅನ್ವರಿ 2,41,176 ಮತ ಪಡೆದಿದ್ದರೆ, ಸಿದ್ದರಾಮಯ್ಯ 2,29,979 ಪಡೆದಿದ್ದರು. ಹಲವು ದಿನಗಳ ಹಿಂದೆ ಕೊಪ್ಪಳದಿಂದ ಸಿದ್ದು ಸ್ಪರ್ಧೆ ಮಾಡ್ತಾರೆ ಎಂಬ ಮಾತಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಸ್ಪರ್ಧಿಸಲ್ಲ ಎಂದು ಅವರೇ ಸ್ಪಷ್ಟಪಡಿಸಿದರು.

ಸಿದ್ದು ಸೋಲಿಸಿದ್ದ ರಾಯರಡ್ಡಿ?
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ದಳದ ಶಾಸಕರಾಗಿದ್ದ ಬಸವರಾಜ ರಾಯರಡ್ಡಿ ಅಂದು ಪ್ರಭಾವಿ ನಾಯಕರಾಗಿದ್ದರೂ ಸಿದ್ದರಾಮಯ್ಯ ಸೋಲುಂಡರು. ಇಲ್ಲಿ ಲಿಂಗಾಯತ ಮತ್ತು ಕುರುಬ ಸಮುದಾಯ ಮತಗಳೇ ನಿರ್ಣಾಯಕ ಎನ್ನುವ ಮಾತಿನ ಜೊತೆಗೆ, ರಾಯರಡ್ಡಿ ಅವರು ಲಿಂಗಾಯತ ಸಮುದಾಯದ ಪರವಾಗಿ “ಕೈ’ ಅಭ್ಯರ್ಥಿ, ಅನ್ವರಿಗೆ ಪರೋಕ್ಷವಾಗಿ ಬೆಂಬಲಿಸಿದರು ಎಂಬ ಮಾತುಗಳು ಚರ್ಚೆಗೆಡೆಮಾಡಿ ಕೊಟ್ಟಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next