Advertisement

ಕಾಂಗ್ರೆಸ್-ಬಿಜೆಪಿ ಎರಡೂ ಪರ್ಸೆಂಟೆಜ್ ಪಕ್ಷಗಳು: ಮಾಜಿ ಸಿಎಂ ಕುಮಾರಸ್ವಾಮಿ

01:35 PM Oct 19, 2021 | Team Udayavani |

ಕಲಬುರಗಿ: ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪರ್ಸೆಂಟೆಜ್ ಪಕ್ಷಗಳು. ಜನರ ಹಣ ಲೂಟಿ ಮಾಡುವುದರಲ್ಲೇ ಎರಡು ಪಕ್ಷಗಳಿಗೆ ಆಸಕ್ತಿ ಜಾಸ್ತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಸಿಂದಗಿ ಉಪ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರ್ಸೆಂಟೆಜ್ ತೆಗೆದುಕೊಳ್ಳುವುದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಮುಂದಿವೆ ಎಂದರು.

ಕೆಪಿಸಿಸಿ ಅಧ್ಯಕ ಡಿ.ಕೆ.ಶಿವಕುಮಾರ ವಿರುದ್ಧದ ಅದೇ ಪಕ್ಷದ ನಾಯಕರು ಮಾಡಿದ ಪರ್ಸೆಂಟೆಜ್ ಆರೋಪದ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರಕ್ರಿಯಿಸಿದ ಕುಮಾರಸ್ವಾಮಿ, ಈ ಹಿಂದೆ ಸ್ವತಃ ಪ್ರಧಾನಿ ಮೋದಿ ಅವರೇ ಹತ್ತು ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿದ್ದರು. ಅದಕ್ಕೆ ಉತ್ತರವಾಗಿ ಕಾಂಗ್ರೆಸ್ ನವರು ಬಿಜೆಪಿ ಸರ್ಕಾರವನ್ನು ಇಪ್ಪತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೇಳಿದ್ದರು. ಹೀಗಾಗಿ ಪರ್ಸೆಂಟೆಸ್ ಲೆಕ್ಕವೆಲ್ಲವೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಿಟ್ಟರುವುದು ಎಂದು ವ್ಯಂಗ್ಯವಾಡಿದರು.

ಎರಡು ಪಕ್ಷಗಳ ಜನರ ತೆರಿಗೆ ಹಣ ಲೂಟಿ ಹೊಡೆಯುವುದರಲ್ಲಿ ತೊಡಗಿವೆ. ಪರ್ಸೆಂಟೆಸ್ ಪಡೆಯುವುದರಿಂದ‌ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಪೊಲೀಸ್ ಕಟ್ಟಡ ಮೂರೇ ವರ್ಷದಲ್ಲಿ ಕುಸಿಯುವ ಹಂತಕ್ಕೆ ತಲುಪಿದೆ. ಇದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಿರ್ಮಾಣದ ಮಾಡಿದ ಕಟ್ಟಡ ಅಲ್ವೇ ಎಂದು ಕಿಡಿಕಾರಿದರು‌.

ಆರಂಭ ಮಾಡುವುದೇ ಸಿದ್ದರಾಮಯ್ಯ:  ಕುಮಾರಸ್ವಾಮಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅವರು, ಸಿದ್ದರಾಮಯ್ಯನವರೇ ನಮ್ಮ ತಂಟೆಗೆ ಬಂದಿದ್ದಾರೆ. ವಿವಾದಗಳನ್ನೆಲ್ಲ ಅವರೇ ಪ್ರಾರಂಭ ಮಾಡುತ್ತಾರೆ. ಅದನ್ನು ಮುಕ್ತಾಯ ಮಾಡುವ ಪ್ರಸಂಗವನ್ನು ನನಗೆ ತಂದಿಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

Advertisement

ಉಪ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದಾರೆ ಎಂದು ಆರಂಭ ಮಾಡಿದ್ದು ಯಾರು?. ಕಾಲು ಕೆರೆದುಕೊಂಡು ಹೋಗುವುದಕ್ಕೆ ನನಗೆ ಬೇರೆ ಕೆಲಸ ಇಲ್ವಾ?. ಅವರು ನನ್ನ ಸುದ್ದಿಗೆ ಬರದೇ ಇದ್ದರೆ ನಾನ್ಯಾಕೆ ಅವರ ತಂಟೆಗೆ ಹೋಗುತ್ತೇನೆ?. ನಾವು ಕಾಂಗ್ರೆಸ್ ನಾಯಕರ ತರ ವೈಯಕ್ತಿಕವಾಗಿ ಚರ್ಚೆ ಮಾಡಿ ಮತ ಪಡೆಯುವ ಅವಶ್ಯಕತೆ ಇಲ್ಲ. ನಮ್ಮ ಅಭಿವೃದ್ಧಿ ಕಾರ್ಯ ಹೇಳಿಕೊಂಡು ಮತ ಪಡೆಯುತ್ತೇವೆ‌ ಎಂದರು.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ಹೇಳಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕುಮಾರಸ್ವಾಮಿ, ದೇವರಿದ್ದಾನೆ ನೋಡಿಕೊಳ್ಳುತ್ತಾನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next