ವಿಜಯಪುರ: ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಳಿ ಈ ಹಿಂದೆ ಕಾರು ಚಾಲಕನಾಗಿದ್ದ, ಸದ್ಯ ಆಟೋ ಓಡಿಸುತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಆಲಕುಂಟೆ ನಗರದಲ್ಲಿ ತಲೆಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಲಾದ ವ್ಯಕ್ತಿಯನ್ನು ಜಾಡರ ಓಣಿ ನಿವಾಸಿ ಮಲ್ಲಿಕಾರ್ಜುನ ದೊಡಮನಿ (43) ಎಂದು ಗುರುತಿಸಲಾಗಿದೆ.
ಸಂಸದ ರಮೇಶ ಜಿಗಣಜಿಗಿ ಬಳಿ ಕಾರು ಚಾಲಕನಾಗಿದ್ದ ಮಲ್ಲಿಕಾರ್ಜುನ, ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದ. ಬಳಿಕ ಆಟೋ ಚಲಾಯಿಸಿಕೊಂಡು ಜೀವನ ನಡೆಸುತ್ತಿದ್ದ. ಇತ್ತೀಚೆಗೆ ಕೆಲಸಕ್ಕೆ ಹೋಗದೇ ಸುಮ್ಮನೆ ಅಲೆಯುತ್ತಿದ್ದ.
ಇದನ್ನೂ ಓದಿ:ರಾಹುಲ್ ಗಾಂಧಿ ಪಪ್ಪು ಅಲ್ಲ, ಆತ ಬುದ್ದಿವಂತ: ಮಾಜಿ ಗವರ್ನರ್ ರಘುರಾಮ್ ರಾಜನ್
Related Articles
ಬುಧವಾರ ರಾತ್ರಿ ತನ್ನ ಅಕ್ಕ ಶಾಂತವ್ವಳನ್ನು ಆಕೆಯ ಮನೆಗೆ ಬಿಡಲು ಹೋಗಿದ್ದ, ಅಲ್ಲಿಂದ ಹಿಂದೆ ತೆರಳುವಾಗ ಹತ್ಯೆ ಮಾಡಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಹಣಕಾಸಿನ ವ್ಯವಹಾರದಿಂದ ಹತ್ಯೆ ಆಗಿರಬಯದೆಂದು ಕುಟುಂಬದವರು ಶಂಕಿಸಿದ್ದಾರೆ.
ಸ್ಥಳಕ್ಕೆ ಎಎಸ್ಪಿ ಶಂಕರ ಮಾರಿಹಾಳ, ಆದರ್ಶನಗರ ಪಿಎಸೈ ಯತೀಶ್, ಶ್ವಾನದಳದ ತಂಡದೊಂದಿಗೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.