ಹೋಬರ್ಟ್: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಟಿಮ್ ಪೇನ್ ಶುಕ್ರವಾರ ತಮ್ಮ ಕ್ರಿಕೆಟ್ ಬಾಳ್ವೆಗೆ ವಿದಾಯ ಘೋಷಿಸಿದರು.
ಕ್ವೀನ್ಸ್‌ಲ್ಯಾಂಡ್ ವಿರುದ್ಧ “ಬೆಲ್ಲೆರೀವ್ ಓವಲ್’ನಲ್ಲಿ ನಡೆದ “ಶೆಫೀಲ್ಡ್ ಶೀಲ್ಡ್’ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಪೇನ್ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
ಟಾಸ್ಮೇನಿಯಾದ ಟಿಮ್ ಪೇನ್ ಆಸ್ಟ್ರೇಲಿಯ ಪರ 35 ಟೆಸ್ಟ್ ಆಡಿದ್ದಾರೆ. 23 ಟೆಸ್ಟ್ ಗಳಲ್ಲಿ ನಾಯಕತ್ವ ವಹಿಸಿದ್ದಾರೆ. 2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸ್ಟೀವನ್ ಸ್ಮಿತ್ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ನಿಷೇಧಕ್ಕೊಳಗಾದ ಬಳಿಕ ಟಿಮ್ ಪೇನ್ ಅವರಿಗೆ ನಾಯಕತ್ವ ವಹಿಸಲಾಗಿತ್ತು.
ಬಳಿಕ ಇವರೂ ವಿವಾದವೊಂದರಲ್ಲಿ ಸಿಲುಕಿ 2021ರಲ್ಲಿ ಆಸೀಸ್ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು.