Advertisement

ಚುನಾವಣೆಗೆ ಜಂಬೋ “ಕೈ ‘ಕಾರ್ಯಕಾರಿ ಸಮಿತಿ ರಚನೆ

09:33 AM Oct 17, 2017 | |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಘಟಾನುಘಟಿ ನಾಯಕರನ್ನೊಳಗೊಂಡ ರಾಜ್ಯ ಕಾರ್ಯಕಾರಿ ಸಮಿತಿ ರಚನೆ ಮಾಡಿದೆ. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿ.ಕೆ. ಜಾಫ‌ರ್‌ ಷರೀಫ್, ಜನಾರ್ದನ ಪೂಜಾರಿ ಸೇರಿದಂತೆ ಘಟಾನುಘಟಿ ನಾಯಕರ ತಂಡ ರಚಿಸಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆದೇಶ ಹೊರಡಿಸಿದ್ದಾರೆ.

Advertisement

ಸಿಡಬ್ಲ್ಯೂಸಿ ಸದಸ್ಯರು ಹಾಗೂ ಎಐಸಿಸಿ ಪದಾಧಿಕಾರಿಗಳಾದ ಆಸ್ಕರ್‌ ಫ‌ರ್ನಾಂಡಿಸ್‌, ಬಿ.ಕೆ.ಹರಿಪ್ರಸಾದ್‌, ಕೆ.ಎಚ್‌.ಮುನಿಯಪ್ಪ, ಸತೀಶ್‌ ಜಾರಕಿಹೊಳಿ ಹಾಗೂ ಸೂರಜ್‌ ಹೆಗಡೆ, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ, ದೇಶಪಾಂಡೆ, ಮಾರ್ಗರೇಟ್‌ ಆಳ್ವ, ವೀರಪ್ಪ ಮೋಯ್ಲಿ, ಕೆ.ರೆಹಮಾನ್‌ ಖಾನ್‌, ಸಿ.ಎಂ.ಇಬ್ರಾಹಿಂ, ಅಂಬರೀಶ್‌, ಸಿದ್ದು ನ್ಯಾಮಗೌಡ, ತಾರಾದೇವಿ ಸಿದ್ದಾರ್ಥ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಹಾಲಿ ಸಂಸದರಾದ ಎಸ್‌.ಪಿ. ಮುದ್ದಹನುಮೇಗೌಡ, ಜೈರಾಮ್‌ ರಮೇಶ್‌, ಪ್ರಕಾಶ್‌ ಹುಕ್ಕೇರಿ, ಡಿ.ಕೆ. ಸುರೇಶ್‌, ಧ್ರುವ ನಾರಾಯಣ, ಬಿ.ವಿ.ನಾಯ್ಕ, ಬಿ.ಎನ್‌. ಚಂದ್ರಪ್ಪ, ಕೆ.ಸಿ.ರಾಮಮೂರ್ತಿ, ಪ್ರೊ. ರಾಜೀವ್‌ ಗೌಡ ಹಾಗೂ ರಾಜ್ಯ ಸರ್ಕಾರದ ಎಲ್ಲ ಸಚಿವರು ಮತ್ತು ಕೆಪಿಸಿಸಿ ಮುಂಚೂಣಿ ಘಟಕದ ಅಧ್ಯಕ್ಷರಾದ ಯುವ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ಲಕ್ಷ್ಮೀ ಹೆಬ್ಟಾಳ್ಕರ್‌, ಪ್ಯಾರೇ ಜಾನ್‌, ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ, ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇವರಲ್ಲದೆ, ಉತ್ತರ ಕನ್ನಡದಿಂದ ಶಾರದಾ ಮೋಹನ್‌ ಶೆಟ್ಟಿ, ಮಾಜಿ ಮೇಯರ್‌ ಪದ್ಮಾವತಿ-ಬೆಂಗಳೂರು, ಶರಣಪ್ಪ ಸುಣಗಾರ-ವಿಜಯಪುರ, ಬಿ.ಜಿ. ಗೋವಿಂದಪ್ಪ-ಚಿತ್ರದುರ್ಗ, ಎಂ.ರಾಮಚಂದ್ರಪ್ಪ-ಬೆಂಗಳೂರು, ಎಚ್‌.ಎಂ.ರೇವಣ್ಣ- ಬೆಂಗಳೂರು, ಬಿ.ಶಿವಣ್ಣವರ- ಹಾವೇರಿ, ದೊಡ್ಡಸ್ವಾಮಿ ಗೌಡ- ಮೈಸೂರು, ಡಾ.ಲೋಹಿತ್‌ ನಾಯ್ಕರ್‌-ಹುಬ್ಬಳ್ಳಿ ಧಾರವಾಡ, ಎಸ್‌.ಆರ್‌. ಮೋರೆ-ಹುಬ್ಬಳ್ಳಿ 
ಧಾರವಾಡ, ರಾಮಲಿಂಬಾಜಿ ಮಾನೆ-ಬೆಳಗಾವಿ, ಪುಟ್ಟರಂಗ ಶೆಟ್ಟಿ -ಚಾಮರಾಜನಗರ, ಮಂಜುನಾಥ- ಮೈಸೂರು, ತುಳಸಿರಾಮ್‌-ಬೆಂಗಳೂರು ನಗರ, ಶಾಂತಾರಾಮ್‌ ಹೆಗಡೆ-ಉತ್ತರ ಕನ್ನಡ, ಜೆ.ಅಲೆಕ್ಸಾಂಡರ್‌-ಬೆಂಗಳೂರು ಸಿಟಿ, ಅಭಯ ಚಂದ್ರ ಜೈನ್‌ -ದಕ್ಷಿಣ ಕನ್ನಡ, ಪರಸ್ಮಾಲ್‌ ಸುಖಾನಿ-ರಾಯಚೂರು, ಎ.ಬಿ.ಪಾಟೀಲ್‌-ಬೆಳಗಾವಿ, ಶಾಮನೂರು ಶಿವಶಂಕರಪ್ಪ-ದಾವಣಗೆರೆ, ಡಾ. ಎ.ಬಿ. ಮಾಲಕರೆಡ್ಡಿ-ಯಾದಗಿರಿ, ಸಲೀಂ ಅಹಮದ್‌-ಹಾವೇರಿ, ಅಬ್ದುಲ್‌ ವಹಾಬ್‌-ಬಳ್ಳಾರಿ , ಸಿ.ಎಂ.ಇಬ್ರಾಹಿಂ-ಶಿವಮೊಗ್ಗ, ಮೊಹಮದ್‌ ಜಾಹೇದ್‌ -ಕಲಬುರಗಿ, ಹಸಂಪೀರ್‌ ವಾಲೀಕಾರ-ವಿಜಯಪುರ, ಧರ್ಮಸೇನಾ-ಮೈಸೂರು, ಪ್ರಕಾಶ್‌ ರಾಠೊಡ-ವಿಜಯಪುರ, ಶಿವರಾಜ ತಂಗಡಗಿ-ಕೊಪ್ಪಳ, ಕರಿಯಣ್ಣ-ಶಿವಮೊಗ್ಗ, ಅಂಜನಮೂರ್ತಿ-ಬೆಂಗಳೂರು ಗ್ರಾ., ನರಸಿಂಹರಾವ್‌ ಸೂರ್ಯವಂಶಿ-ಬೀದರ್‌, ಆರ್‌.ಬಿ. ತಿಮ್ಮಾಪುರ-ಬಾಗಲಕೋಟೆ, ಎಚ್‌. ಹನುಮಂತಪ್ಪ-ಚಿತ್ರದುರ್ಗ, ಬಲದೇವ ಕೃಷ್ಣ-ಶಿವಮೊಗ್ಗ, ಶಾಮ್‌ ಭೀಮ್‌ ಘಾಟೆ ಬೆಳಗಾವಿ, ಪುಂಡಲಿಕ ರಾವ್‌-ಬೀದರ್‌, ಸುಮಾ ವಸಂತ-ಕೊಡಗು, ವಿ.ಎಸ್‌.ಉಗ್ರಪ್ಪ-ತುಮಕೂರು, ಕೆ.ಎನ್‌. ರಾಜಣ್ಣ-ತುಮಕೂರು, ಡಾ. ಪ್ರೇಮಚಂದ್ರ ಸಾಗರ್‌-ಬೆಂಗಳೂರು ನಗರ, ಸಿ.ನಾರಾಯಣ ಸ್ವಾಮಿ-ಬೆಂಗಳೂರು ನಗರ ಜಿಲ್ಲೆಯಿಂದ ಕಾರ್ಯಕಾರಿ ಸಮಿತಿಗೆ ನೇಮಕ ಮಾಡಲಾಗಿದೆ.

ಎಸ್‌.ಎಂ.ಆನಂದ-ಹಾಸನ, ಮಂಜುನಾಥ ಭಂಡಾರಿ- ಶಿವಮೊಗ್ಗ, ದಾಸೇಗೌಡ-ಮೈಸೂರು, ಮರಿಚಿನ್ನಮ್ಮ-ತುಮಕೂರು, ಇಕ್ಬಾಲ್‌ ಅಹಮದ್‌ ಸರಡಗಿ-ಕಲಬುರಗಿ, ಪ್ರೊ. ಐ.ಜಿ.ಸನದಿ-ಹಾವೇರಿ, ಫಿರೋಜ್‌ ಸೇಠ್-ಬೆಳಗಾವಿ, ಬಿ. ನಾರಾಯಣ ರಾವ್‌-ಬೀದರ್‌, ಮಾಲಿಕಯ್ಯ ಗುತ್ತೇದಾರ-ಕಲಬುರಗಿ, ವೆಂಕಟರಮಣಪ್ಪ- ತುಮಕೂರು, ಬಿ.ಸಿ.ಪಾಟೀಲ್‌-ಹಾವೇರಿ, ಕೆ. ಶಿವಮೂರ್ತಿ- ದಾವಣಗೆರೆ, ಎಚ್‌ .ಸಿ. ರುದ್ರಪ್ಪ-ತುಮಕೂರು, ಕಡೂರು ನಂಜಪ್ಪ-ಚಿಕ್ಕಮಗಳೂರು, ರಘು ಆಚಾರ್‌-ಮೈಸೂರು, ಸೌಂದರ್ಯ ಮಂಜಪ್ಪ-ಬೆಂಗಳೂರು, ಉಮಾಶ್ರೀ- ಬಾಗಲಕೋಟೆ, ಜಯಮಾಲಾ-ಬೆಂಗಳೂರು, ರಮ್ಯಾ-ಮಂಡ್ಯ, ಗುರಮ್ಮ ಸಿದ್ದರೆಡ್ಡಿ-ಬೀದರ್‌, ಸವಿತಾ
ಪೂಣಚ್ಚ-ಕೊಡಗು, ಬಲ್ಲಾಳ-ದ.ಕನ್ನಡ, ಕೆ.ಎಂ. ನಾಗರಾಜ-ಬೆಂಗಳೂರು, ಡ್ಯಾವಿಡ್‌ ಸಿಮೆನ್‌-ಕಲಬುರಗಿ, ಹಸನಸಾಬ್‌ ದೋತಿಹಾಳ್‌-ಕೊಪ್ಪಳ, ಸಿ.ಆರ್‌. ನಾರಾಯಣಪ್ಪ-ಬೆಂಗಳೂರು ಸಿಟಿ, ಜಮೀರ್‌ ಪಾಷಾ-ಬೆಂಗಳೂರು ಸಿಟಿ, ಟಿ.ವಿ. ಮಾರುತಿ-ಬೆಂಗಳೂರು ಸಿಟಿ, ಸುಂದರ್‌ ಪಾಂಡಿಯನ್‌ -ಬೆಂಗಳೂರು ಸಿಟಿ, ರಫಿಕ್‌ ಖಾನಪುರಿ-ಬೆಳಗಾವಿ, ಎಚ್‌.ವೈ. ಮೇಟಿ-ಬಾಗಲಕೋಟೆ, ಸಿ.ಎಸ್‌.ಶಿವಳ್ಳಿ-ಧಾರವಾಡ ಗ್ರಾಮೀಣ, ಮಂಜುನಾಥ ಕುನ್ನೂರ್‌-ಹಾವೇರಿ, ಶರಣಪ್ಪ ಮಟ್ಟೂರು-ರಾಯಚೂರು, ಮಲ್ಲಿಕಾರ್ಜುನ ನಾಗಪ್ಪ-ಕೊಪ್ಪಳ, ಅಜಯ್‌ ಸಿಂಗ್‌-ಕಲಬುರಗಿ, ರಾಜಶೇಖರ ಪಾಟೀಲ್‌-ಬೀದರ್‌, ರಹೀಂ ಖಾನ್‌-ಬೀದರ್‌, ಪರಮೇಶ್ವರ ನಾಯ್ಕ-ಬಳ್ಳಾರಿ, ಎನ್‌. ಎಂ.ನಬಿ ಬಳ್ಳಾರಿ, ಇ.ತುಕಾರಾಂ ಬಳ್ಳಾರಿ, ವಿನಯ ಕುಮಾರ ಸೊರಕೆ-ಉಡುಪಿ, ಕೆ.ಆರ್‌.ಪೇಟೆ ಕೃಷ್ಣ-ಮಂಡ್ಯ, ಚಂದ್ರಲೇಖಾ-ಹಾಸನ, ಜಾನ್‌ ರಿಚರ್ಡ್‌ ಲೋಬೊ-ದಕ್ಷಿಣ ಕನ್ನಡ, ರಾಜು ಅಲಗೂರ್‌-ವಿಜಯಪುರ, ಬಿ.ಆರ್‌.ಯಾವಗಲ್‌-ಗದಗ, ಬಿ.ಎಸ್‌.ಪಾಟೀಲ್‌-ಹುಬ್ಬಳ್ಳಿ ಧಾರವಾಡ, ಪಿ.ಎಂ. ಅಶೋಕ್‌ -ಬೆಳಗಾವಿ, ಪ್ರೇಮಾ ಕಾರ್ಯಪ್ಪ-ಬೆಂಗಳೂರು, ಧನಂಜಯ ಕುಮಾರ್‌ -ಮಂಗಳೂರು ಇವರನ್ನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಜಿಲ್ಲಾಧ್ಯಕ್ಷರ ಬದಲಾವಣೆ
ಬೆಂಗಳೂರು: 2018ರ ಚುನಾವಣೆ ದೃಷ್ಠಿಯಲ್ಲಿ ಜಿಲ್ಲಾಮಟ್ಟದಲ್ಲಿ ಪಕ್ಷವನ್ನು ಬಲ ಪಡಿಸಲು ರಾಜ್ಯ ಕಾಂಗ್ರೆಸ್‌ 15 ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನು ಬದಲಾಯಿಸಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರ ಸೂಚನೆ ಮೇರೆಗೆ ಕೆಪಿಸಿಸಿ ನೀಡಿದ್ದ ಜಿಲ್ಲಾಧ್ಯಕ್ಷರ ಬದಲಾವಣೆಯ ಪಟ್ಟಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗ್ರೀನ್‌ ಸಿಗ್ನಲ್‌ ನೀಡಿದ್ದು, ಜಿಲ್ಲಾಧ್ಯಕ್ಷರ ಬದಲಾವಣೆಯ ಆದೇಶ ಹೊರಡಿಸಿದ್ದಾರೆ. ಚಿಕ್ಕೋಡಿ ಜಿಲ್ಲಾಧ್ಯಕ್ಷರಾಗಿ ಲಕ್ಷ್ಮಣರಾವ್‌ ಚಿಂಗ್ಲೆ, ಬೆಳಗಾವಿ-ವಿನಯ ನಾವಲಗಟ್ಟಿ, ಬಳ್ಳಾರಿ ನಗರ-ರಫಿಕ್‌, ದಕ್ಷಿಣ ಕನ್ನಡ-ಕೆ. ಹರೀಶ್‌ ಕುಮಾರ್‌, ಕಲಬುರಗಿ- ಜಗದೇವ ಗುತ್ತೇದಾರ, ಹಾವೇರಿ -ಸೈಯದ್‌ ಅಜ್ಜಂಪೀರ್‌ ಖಾದ್ರಿ, ಕೊಡಗು-ಎಂ.ಬಿ. ಶಿವಮುದ್ದಪ್ಪ, ಉಡುಪಿ-ಜನಾರ್ದನ ಥೋನ್ಸೆ, ರಾಮನಗರ-ಎಸ್‌.ಗಂಗಾಧರ, ಬೆಂಗಳೂರು ಉತ್ತರ-ಎಂ. ರಾಜಕುಮಾರ್‌, ಬೆಂಗಳೂರು ಸೆಂಟ್ರಲ್‌-ಜಿ. ಶೇಖರ್‌, ಬೆಂಗಳೂರು ಸೌಥ್‌-ಜಿ. ಕೃಷ್ಣಪ್ಪ, ಹುಬ್ಬಳ್ಳಿ ಸಿಟಿ-ಅಲ್ತಾಫ‌ ಹಳ್ಳೂರ, ಬೀದರ್‌-ಬಸವರಾಜ್‌ ಜಾಬ್‌ ಶೆಟ್ಟಿ, ಚಿಕ್ಕಬಳ್ಳಾಪುರ-ಜಿ. ಕೇಶವ ರೆಡ್ಡಿ ಅವರನ್ನು ನೂತನ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.  ಆದರೆ, ಗೊಂದಲ ಇರುವ ಹಾಸನ, ಬಳ್ಳಾರಿ ಗ್ರಾಮೀಣ ಹಾಗೂ ವಿಜಯಪುರ ಜಿಲ್ಲಾಧ್ಯಕ್ಷರನ್ನು ಬದಲಾಯಿಸಲಾಗಿಲ್ಲ. ಹೀಗಾಗಿ, ಜಿಲ್ಲಾಧ್ಯಕ್ಷರ ನೇಮಕ ವಿಷಯದಲ್ಲಿ ಪಕ್ಷದ ನಾಯಕರಲ್ಲಿ ಇನ್ನೂ ಗೊಂದಲ ಮುಂದುವರೆದಿರುವುದು ಕಂಡು ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next