ಲಕ್ಷ್ಮೇಶ್ವರ: ಪ್ರತಿಯೊಬ್ಬರಲ್ಲಿ ಒಂದೊಂದು ಹವ್ಯಾಸ ಇರುತ್ತದೆ. ಕೆಲವರಲ್ಲಿರುವ ಕ್ರೀಡೆ, ಸಂಗೀತ, ಕಲೆ, ಸಾಹಿತ್ಯ, ಓದು ಸೇರಿ ಅನೇಕ ಹವ್ಯಾಸಗಳನ್ನೇ ಬಹುತೇಕರು ವೃತ್ತಿಯನ್ನಾಗಿಸುತ್ತಾರೆ. ಆದರೆ ವೃತ್ತಿಯನ್ನೇ ಹವ್ಯಾಸವಾಗಿಸಿಕೊಂಡು ಅದರಲ್ಲಿಯೇ ಕಾಯಾವಾಚಾಮನಸಾ ಪೂರ್ವಕ ತೊಡಗಿಸಿಕೊಳ್ಳುವವರು ಅಪರೂಪ. ಅದರಲ್ಲೂ ಸರ್ಕಾರಿ ನೌಕರರನ್ನು ಕಾಣುವುದು ವಿಶೇಷ.
ಅರಣ್ಯ ಇಲಾಖೆಯ ಗದಗ ವಿಭಾಗದ ಶಿರಹಟ್ಟಿ ವಲಯದ ಶೆಟ್ಟಿಕೆರಿ-ಕುಂದ್ರಳ್ಳಿ ಭಾಗದ ಅರಣ್ಯ ಗಸ್ತು ಪಾಲಕ ಪ್ರಕಾಶ ಗಾಣಿಗೇರ ಅರಣ್ಯ ಸಂರಕ್ಷಣೆ ಜತೆಗೆ ಇಲ್ಲಿರುವ ಅತ್ಯಪರೂಪದ ಪ್ರಾಣಿ-ಪಕ್ಷಿಗಳ ಛಾಯಾಚಿತ್ರ ಸೆರೆ ಹಿಡಿಯುವ ಮೂಲಕ ಈ ಭಾಗದ ಜನರಲ್ಲಿ ಪ್ರಾಣಿ-ಪಕ್ಷಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಪಕ್ಷಿಗಳು ಬರುವ ಶೆಟ್ಟಿಕೇರಿ ಕಪ್ಪತಗುಡ್ಡ ಸೆರಗಿನ ಅರಣ್ಯ, ಗುಡ್ಡ ಚಾಚಿಕೊಂಡಿರುವ ಕುಂದ್ರಳ್ಳಿ, ನಾದಿಗಟ್ಟಿ, ಅಕ್ಕಿಗುಂದ ಸುತ್ತಮುತ್ತಲ ಭಾಗದಲ್ಲಿ ಅಪರೂಪವಾದ ಪ್ರಾಣಿ-ಪಕ್ಷಿಗಳಿವೆ ಎಂಬುದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಮೂಲಕ ಈ ಪ್ರದೇಶದ ಮಹತ್ವ ತಿಳಿಸುತ್ತಿದ್ದಾರೆ.
ಅರಣ್ಯ ಗಸ್ತು ಕೆಲಸದ ವೇಳೆಯಲ್ಲಿ ಕಾಣಸಿಗುವ ಅಪರೂಪದ ಪ್ರಾಣಿ-ಪಕ್ಷಿಗಳ ಬಗ್ಗೆ ತಿಳಿಯಬೇಕು ಮತ್ತು ಇತರರಿಗೆ ತಿಳಿಸಬೇಕು ಎಂದು ಹಾಗೂ ಈ
ವಿಶೇಷ ಜೀವ ಸಂಕಲವನನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶ ನನ್ನದಾಗಿದೆ. ಫೋಟೋ ಕ್ಲಿಕ್ಕಿಸಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ಮಾಹಿತಿ ಪಡೆಯುತ್ತಿದ್ದೇನೆ. ಈ ಹವ್ಯಾಸ ನನ್ನ ವೃತ್ತಿಯನ್ನು ಅತ್ಯಂತ ಪ್ರೀತಿ, ಕಾಳಜಿ, ಆಸಕ್ತಿ, ಆನಂದದಿಂದ ಮಾಡುವಂತಾಗಿದೆ. ಯಾರಾದರೂ ಪ್ರಾಣಿ-ಪಕ್ಷಿಗಳ ಬಗ್ಗೆ ಕೇಳಿದರೆ ವಿಶೇಷವಾಗಿ ವಿವರಿಸಿ ಹೇಳಲು ಸಾಧ್ಯವಾಗಿರುವುದು ಹೆಮ್ಮೆಯಾಗಿದೆ.
ಪ್ರಕಾಶ ಗಾಣಿಗೇರ, ಅರಣ್ಯ ಗಸ್ತು ಪಾಲಕ
ಶೆಟ್ಟಿಕೆರಿ ವಲಯ: ಈ ವಲಯದ 30 ಕಿ.ಮೀ ವ್ಯಾಪ್ತಿ ವನ್ಯ ಪ್ರಾಣಿಗಳು ಸಂಚರಿಸುವ ಪ್ರದೇಶವೆಂದು ಗುರುತಿಸಿ ಅಲ್ಲಲ್ಲಿ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಇದೇ ಪ್ರದೇಶದಲ್ಲಿ 2016ರಿಂದ ಅರಣ್ಯ ಗಸ್ತು ಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ ಗಾಣಿಗೇರ ಅರಣ್ಯ ಕಾಯುವ ಜತೆಗೆ ಪ್ರಾಣಿ ಪಕ್ಷಿಗಳ ಛಾಯಾಚಿತ್ರ ಸೆರೆ ಹಿಡಿದು ಸಾರ್ವಜನಿಕರಿಗೆ, ಇಲಾಖೆಗೆ ಮತ್ತು ಪ್ರಾಣಿ-ಪಕ್ಷಿ ತಜ್ಞರಿಗೆ ಇಲ್ಲಿನ ಪ್ರಾಣಿ, ಪಕ್ಷಿ ಸಂಪತ್ತನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
Related Articles
ಅರಣ್ಯದಲ್ಲಿ ಗಸ್ತು ತಿರುಗುವ ಇವರಿಗೆ ಇಲ್ಲಿನ ಪ್ರಾಣಿ-ಪಕ್ಷಿಗಳೇ ಗೆಳೆಯರಂತಾಗಿದ್ದಾರೆ. ಮೊದಲು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಇವರಲ್ಲಿ ಹೆಚ್ಚಿನ ಆಸಕ್ತಿ, ಹವ್ಯಾಸ ಬೆಳೆದಿದ್ದರಿಂದ ಸಾವಿರ ರೂ. ಖರ್ಚು ಮಾಡಿ ಕ್ಯಾಮೆರಾ ಖರೀದಿಸಿ ಇದುವರೆಗೂ ಅನೇಕ ಪ್ರಾಣಿ-ಪಕ್ಷಿಗಳ, ಅರಣ್ಯ, ನಿಸರ್ಗದ ಚಿತ್ರಗಳನ್ನು ಸೆರೆಹಿಡಿದು ಶಹಬ್ಟಾಸ್ ಎನಿಸಿಕೊಂಡಿದ್ದಾರೆ.
ಪರ್ವತ ಹೆಬ್ಟಾತು, ಇಂಡಿಯನ್ ಪಿಟ್, ಸ್ಪಾಟ್‌ಬಿಲ್ ಪೆಲಿಕಾನ್, ಊಲಿನೆಕ್ಡ್ ಸ್ಟಾರ್ಕ್, ಪೆಂಟೆಡ್ ಸ್ಟಾರ್ಕ್, ನವರಂಗ, ಸ್ಪೂನ್ ಬಿಲ್ (ಹೆಜ್ಜಾರ್ಲೆ) ಚಮಚ ಕೊಕ್ಕರೆ, 70 ವಿವಿಧ ಬಗೆಯ ಅಪರೂಪದ ಪಕ್ಷಿಗಳು, ಜಿಂಕೆ, ಕೃಷ್ಣಮೃಗ, ಕತ್ತೆ ಕಿರುಬ, ತೋಳ, ಪುನುಕುಬೆಕ್ಕು, ನೀರುನಾಯಿ, ಉಡ, ನರಿ, ಕಾಡುಬೆಕ್ಕು, ಮುಳ್ಳುಹಂದಿ ಸೇರಿ 12 ಬಗೆಯ ಪ್ರಾಣಿಗಳು, 25 ತರಹದ ಪತಂಗಗಳು, ನಾಗರ, ಹೆಬ್ಟಾವು ಸೇರಿ 8 ಬಗೆಯ ಹಾವುಗಳು, 3 ಬಗೆಯ ಆಮೆ ಸೇರಿ ಹಲವಾರು ಪ್ರಾಣಿ-ಪಕ್ಷಿಗಳ ಛಾಯಾಚಿತ್ರ ಸೆರೆಹಿಡಿದಿದ್ದಾರೆ. ಅವರ ಕೆಲಸದಿಂದಲೇ ಶೆಟ್ಟಿಕೆರೆಯಲ್ಲಿ ನೀರುನಾಯಿಯಂತ ಪ್ರಾಣಿ, ವಿಶೇಷ ಪಕ್ಷಿಗಳಿವೆ ಎಂದೂ ಮತ್ತು ಈ ಪ್ರದೇಶ ವನ್ಯಜೀವಿಗಳ ವಲಯ ಎಂದು ವಿಶೇಷ ಗಮನ ಹರಿಸಲಾಗಿದೆ.
ಇದನ್ನೂ ಓದಿ: 31 ನೇ ವಯಸ್ಸಿನಲ್ಲಿ ನಿಧನರಾದ ಮಲಯಾಳಂ ನಿರ್ದೇಶಕ ಜೋಸೆಫ್ ಮನು