ಜಮ್ಮು: ಭಾರತ ಮತ್ತು ಪಾಕಿಸ್ಥಾನ ನಡುವಿನ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿಯಲ್ಲಿರುವ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು, ಪೂಂಛ್ ಜಿಲ್ಲೆಯ ಅರಣ್ಯ ಪ್ರದೇಶಕ್ಕೂ ವ್ಯಾಪಿಸಿ, ಆ ವಲಯದಲ್ಲಿ ಹುದುಗಿಸಲಾಗಿದ್ದ ನೆಲಬಾಂಬ್‌ಗಳ ಸ್ಫೋಟಕ್ಕೂ ಕಾರಣವಾಗಿದೆ.
ಸೋಮವಾರದಂದು, ಎಲ್‌ಒಸಿ ಬಳಿಯ ಮೆಂಧಾರ್ ಸೆಕ್ಟರ್‌ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು, ನಿಧಾನವಾಗಿ ಮೆಂಧಾರ್ ಸೆಕ್ಟರ್‌ನಲ್ಲಿರುವ ಅರಣ್ಯಕ್ಕೂ ವ್ಯಾಪಿಸಿತು. ಸೇನೆಯ ಕಾರ್ಯಾಚರಣೆಯಿಂದ ಬುಧವಾರದಂದು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಆದರೂ ಬೆಂಕಿಯ ಉಷ್ಣತೆಯಿಂದಾಗಿ ಧರಮ್‌ಶಾಲಾ ಬ್ಲಾಕ್ ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ನುಸುಳುಕೋರರ ಬೇಟೆಗಾಗಿ ನೆಲದಲ್ಲಿ ಹುದುಗಿಸಲಾಗಿದ್ದ ಸುಮಾರು 6 ನೆಲಬಾಂಬ್ಗಳು ಸ್ಫೋಟಗೊಂಡಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೆರಡು ಕಡೆ ಕಾಳ್ಗಿಚ್ಚು: ಗಡಿ ಪ್ರದೇಶಕ್ಕೆ ಹತ್ತಿರದಲ್ಲಿರುವ ರಜೌರಿ ಜಿಲ್ಲೆಯ ಸುಂದರ್‌ಬಂಡಿ ಪ್ರಾಂತ್ಯದಲ್ಲಿನ ಗಂಭೀರ್, ನಿಕ್ಕಾ, ಪಂಜಗ್ರಾಯೆ, ಬ್ರಹಾಮನ, ಮೊಘಾಲಾ ಎಂಬ ಸ್ಥಳಗಳಲ್ಲಿನ ಅರಣ್ಯ ಪ್ರದೇಶದಲ್ಲೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದಲ್ಲದೆ, ಕಾಲೋಕೋಟೆಯ ಕಲಾರ್, ರಂಥಲ್, ಚಿನ್ನಿ ಅರಣ್ಯ ಪ್ರದೇಶಗಳಲ್ಲೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ನೌಕಾ ನಿಗ್ರಹ ಕ್ಷಿಪಣಿಯ ಚೊಚ್ಚಲ ಪರೀಕ್ಷೆ ಯಶಸ್ವಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿ