Advertisement
ತಾಲೂಕಿನ ಹೊಸಹಳ್ಳಿ, ಹೊನ್ನೇಬಾಗಿ, ಗೊಲ್ಲರಹಟ್ಟಿ, ಬುಳ್ಳೇನಹಳ್ಳಿ, ಮಂಚೇಕಟ್ಟೆ, ಬಗ್ಗನಹಳ್ಳಿ, ಸೊಂಡೇ ನಹಳ್ಳಿ ಸೇರಿದಂತೆ ವಿವಿಧ ಗ್ರಾಮದಲ್ಲಿನ ಸುಮಾರು 3,600 ಎಕರೆ ಜಮೀನನ್ನು ಅರಣ್ಯ ಇಲಾಖೆಯ ಕೋರಿಕೆಯಂತೆ ಹೈಕೋರ್ಟ್ ಅರಣ್ಯ ಇಲಾಖೆಗೆ ಸದರಿ ಜಮೀನನ್ನು ವಶಪಡಿಸಿಕೊಳ್ಳಲು ಆದೇಶ ನೀಡಿದೆ ಎಂಬ ಅತಂಕ ಇಲ್ಲಿನ ನಿವಾಸಿಗಳಲ್ಲಿ ಸೃಷ್ಟಿಯಾಗಿದ್ದು, ಜಮೀನುಗಳ ದಾಖಲಾತಿಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುತ್ತಿದ್ದಾರೆ.
Related Articles
Advertisement
ನೂರಾರು ಜನ ಸಚಿವರಿಗೆ ಮನವಿ: ಕೆಲ ದಿನಗಳ ಹಿಂದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಿಲಿಟರಿ ಶಿವಣ್ಣ ನೇತೃತ್ವದಲ್ಲಿ 600ಕ್ಕೂ ಹೆಚ್ಚು ರೈತರು ಸಚಿವ ಜೆ.ಸಿ.ಮಾಧುಸ್ವಾಮಿ ಬಳಿ ತೆರಳಿ ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿರುವ ಜಾಗವನ್ನು ಉಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದು, ಸಚಿ ವರು ಅರ್ಹ ಫಲಾನುಭವಿಗಳ ಜಮೀನು ವಶವಾಗು ವುದಿಲ್ಲ ಎಂದು ಸಚಿವರು ರೈತರಿಗೆ ಅಭಯ ನೀಡಿದ್ದಾರೆ.
ವಶವಾದರೇ ಸಾವಿರಾರು ಮಂದಿ ಬೀದಿಪಾಲು: ಸಾವಿರಾರು ಎಕರೆ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾದರೆ, ನೂರಾರು ಕುಟುಂಬಗಳು ಬೀದಿಪಾಲಾಗುತ್ತವೆ. ಈ ಭಾಗದ ಬಹುತೇಕ ಜನರು ಕೃಷಿಯನ್ನು ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದು, ಜೀವನಕ್ಕೆ ಜಮೀನುಗಳನ್ನೇನಂಬಿಕೊಂಡಿದ್ದಾರೆ. ಅಲ್ಪ ಲಾಭದ ಕೃಷಿಯಲ್ಲಿಯೇಜೀವನ ಕಟ್ಟಿಕೊಂಡಿದ್ದಾರೆ. ಸಾಲ ಮಾಡಿ ಜಮೀನುಗಳಲ್ಲಿ ಬೋರ್‌ವೆàಲ್ ಹಾಕಿಸಿಕೊಂಡಿದ್ದಾರೆ.
ಬೆಳಗ್ಗೆಯಿಂದ ಸಂಜೆಯ ವರೆಗೆ ತಮ್ಮ ಜಮೀನುಗಳಲ್ಲಿ ದುಡಿದರು ಜೀವನ ಕಷ್ಟಕರವಾಗಿದೆ. ಜಮೀನು ವಶಪಡಿಸಿಕೊಳ್ಳುವ ಅತಂಕದಲ್ಲಿ ಮತ್ತೆ ಸಾಲ ಮಾಡಿಜಮೀನಿನ ರಕ್ಷಣೆಗೆ ಕೋಟ್‌ಗಳ ಮೊರೆ ಹೋಗಲು ತೀರ್ಮಾನಿಸಿದೆ. ರೈತರೇ ದೇಶದ ಬೆನ್ನೆಲುಬು ಎನ್ನುವಸರ್ಕಾರಗಳು ರೈತರ ಜಮೀನನ್ನು ಉಳಿಸಿಕೊಡದಿದ್ದರೆ,ರೈತರ ಜೀವ, ಜೀವನಕ್ಕೆ ಕುತ್ತು ಬರುವುದರಲ್ಲಿ ಅನುಮಾನವಿಲ್ಲ.
ಅತಂಕ ಬೇಡ: ನ್ಯಾಯಾಲಯ ಹಾಗೂ ಸರ್ಕಾರದ ಹಂತದಲ್ಲಿ ಜಮೀನು ವಶಪಡಿಸಿಕೊಳ್ಳುವ ಬಗ್ಗೆ ಹಾಗೂ ಅರಣ್ಯ ಇಲಾಖೆ ಜೊತೆ ಪತ್ರ ವ್ಯವಹಾರ, ಮಾತುಕತೆ ನಡೆಯುತ್ತಿದೆ. ರೈತರು ದುಡುಕಿ ಹಣಕಳೆದುಕೊಂಡರೇ ಮತ್ತೆ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ.ಆತಂಕವಿಲ್ಲದೆ, ಕೆಲಸ ಕಾರ್ಯಗಳಲ್ಲಿ ರೈತರು ತೊಡಗಿಕೊಳ್ಳುವುದು ಉತ್ತಮ.
ಈ ಪ್ರದೇಶದ ರೈತರಿಗೆ ನ್ಯಾಯ ಸಿಗಬೇಕು. ಕೂಲಿ ಕೆಲಸ ಮಾಡುವ ಜನರು ಇಲ್ಲಿ ಹೆಚ್ಚಾಗಿದ್ದಾರೆ. ಜಮೀನುಕಳೆದುಕೊಂಡರೆ, ಅವರಿಗೆ ಗತಿಯೇ ಇಲ್ಲ. ಸಚಿವರು ಈ ವಿಷಯವನ್ನು ಗಂಭೀರವಾಗಿಪರಿಗಣಿಸಿದ್ದಾರೆ. ಈ ಭಾಗದ ರೈತರಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. -ಮಿಲಿಟರಿ ಶಿವಣ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ
ಆರಣ್ಯ ಇಲಾಖೆ ಜಮೀನನ್ನು ವಶಪಡಿಸಿಕೊಳ್ಳುವ ಬಗ್ಗೆ ಗ್ರಾಮೀಣರಿಗೆ ಅತಂಕವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಕೆಲವರು ಈ ವಿಷಯವನ್ನು ಇಟ್ಟುಕೊಂಡುಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ. ರೈತರುಅತಂಕ ಪಡುವ ಅವಶ್ಯವಿಲ್ಲ. ಸರ್ಕಾರದ ಮಟ್ಟದಲ್ಲಿದಾಖಲಾತಿಗಳನ್ನು ತರಿಸಿಕೊಂಡು ಆರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಲಾಗಿದೆ. -ಜೆ.ಸಿ.ಮಾಧುಸ್ವಾಮಿ, ಸಚಿವ
-ಚೇತನ್