ಎಚ್.ಡಿ.ಕೋಟೆ: ಗ್ರಾಮದಲ್ಲಿ ಪ್ರತ್ಯಕ್ಷಗೊಂಡು ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಗಳ ಪೈಕಿ 2 ಚಿರತೆ ಮರಿಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿವೆ.
ತಾಲೂಕಿನ ಬೀಚನಹಳ್ಳಿ ಕಬಿನಿಜಲಾಶಯದ ಬಳಿಯ ಹಳೆ ವರ್ಕ್‌ಶಾಪ್ ಬಳಿಯಲ್ಲಿ ಬೆಳೆದಿರುವ ಕೃತಕ ಅರಣ್ಯದ ಮಾದರಿಯ ಪೊದೆಯ ಸಮೀಪದಲ್ಲಿ ಆಗಾಗ ಪ್ರತ್ಯಕ್ಷಗೊಂಡು ಚಿರತೆಗಳು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದವು. ಭಯಭೀತರಾಗಿದ್ದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಬೋನಿಗೆ ಬಿದ್ದ ಚಿರತೆ ಮರಿಗಳು ಒಂದು ಹೆಣ್ಣು ಮತ್ತೂಂದು ಗಂಡು ಮರಿಯಾಗಿದ್ದು 1 ವರ್ಷ ವಯಸ್ಸಿನದ್ದಾಗಿವೆ.
ಮನವಿಗೆ ಸ್ಪಂದನೆ: ಜನರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚಿರತೆಗಳ ಹೆಜ್ಜೆ ಗುರುಗಳ ಆಧಾರದ ಮೇಲೆ ಚಿರತೆಗಳು ವಾಸ್ತವ್ಯಹೂಡಿರುವುದನ್ನು ಖಾತರಿ ಪಡಿಸಿಕೊಂಡು ಚಿರತೆ ಸೆರೆಗೆ ತಂತ್ರ ರೂಪಿಸಿದ್ದರು. ಚಿರತೆಗಳು ಸಂಚರಿಸಬಹುದಾದ ಸ್ಥಳಗಳನ್ನೇಆಯ್ಕೆ ಮಾಡಿಕೊಂಡ ಅರಣ್ಯ ಇಲಾಖೆ ಅಲ್ಲಿ ಬೋನು ಇರಿಸಿ ಚಿರತೆ ಸೆರೆಗೆ ಮುಂದಾಗಿದ್ದರು.
ಆರೋಗ್ಯವಾಗಿವೆ: ರಾತ್ರಿ ವೇಳೆ ಬೋನಿನೊಳಗೆ ಮೇಕೆ ಇರಿಸಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಿತ್ತು. ಅದರಂತೆಯೇ ಕಳೆದ ರಾತ್ರಿ ಆಹಾರ ಅರಸಿ ಬಂದ 2ಚಿರತೆಮರಿಗಳು ಮೇಕೆ ಭಕ್ಷಿಸುವ ಭರದಲ್ಲಿ ತಮಗರಿವಿಲ್ಲದಂತೆ ಬೋನಿನೊಳಗೆ ಬಂಧಿಯಾಗಿವೆ. ಬಂಧಿಯಾದ 2 ಚಿರತೆಗಳೂ ಆರೋಗ್ಯವಂತಾಗಿವೆ.
ಜನಸಾಗರ: ಭಾನುವಾರ ಮುಂಜಾನೆ ಚಿರತೆಗಳು ಸೆರೆ ಸಿಕ್ಕ ವಿಷಯ ಎಲ್ಲೆಡೆ ಹರಡುತ್ತಿದ್ದಂತೆಯೇ ಚಿರತೆ ದೃಶ್ಯ ಕಣ್ತುಂಬಿ ಕೊಳ್ಳಲು ಅಪಾರ ಪ್ರಮಾಣದ ಜನ ಸಾಗರವೇ ಸ್ಥಳಕ್ಕೆ ಆಗಮಿ ಸಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಕೊಂಚ ಪ್ರಯಾಸ ಪಡಬೇಕಾದ ಸ್ಥಿತಿ ತಲೆದೋರಿತ್ತು. ಬಂಧಿಯಾದ ಚಿರತೆಗಳನ್ನು ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಂಡು ನಾಗರಹೊಳೆ ಅರಣ್ಯದಲ್ಲಿ ಬಿಡುಗಡೆ ಗೊಳಿಸುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಸದ್ಯದ ಸ್ಥಿತಿಯಲ್ಲಿ ಒಂದೇ ಬೋನಿನಲ್ಲಿ 2ಚಿರತೆಗಳು ಬಂಧಿಯಾಗಿರುವುದು ಜನರಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆಯಾದರೂ ಬಂಧಿಯಾಗಿರುವ ಮರಿಗಳಜತೆಗೆ ಇನ್ನಿತರ ಚಿರತೆಗಳೂ ವಾಸ್ತವ್ಯ ಹೂಡಿದ್ದು, ದೊಡ್ಡಚಿರತೆಗಳನ್ನು ಸೆರೆ ಹಿಡಿಯಬೇಕಿತ್ತು ಅನ್ನುವ ಅಳಲುತೋಡಿಕೊಂಡರು. ಉಳಿದ ಚಿರತೆಗಳ ಸೆರೆಗೆ ಕ್ರಮ ಕೈಗೊಳ್ಳುವಭರವಸೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು,ಬೋನಿನೊಳಗೆ ಕೊಂಚ ಗಾಯ ಮಾಡಿಕೊಂಡಿದ್ದ ಚಿರತೆಗಳಿಗೆ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲು ಚಿಂತನೆ ನಡೆಸಿದ್ದಾರೆ.