Advertisement
ಡಿ.6ರಂದು ಸಕಲೇಶಪುರ ತಾಲೂಕಿನ ರಾಜೇಂದ್ರಪುರದ ಬಳಿ ಕಾಫಿ ತೋಟದ ರೈಟರ್ ಯೋಗೀಶ್ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ, ರೈತರ ದಿನಾಚರಣೆಯ ದಿನವಾದ ಶನಿವಾರವೇ ಕೃಷಿ ಕಾರ್ಮಿಕ ಶಿವಪ್ಪ (65) ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಕಾಡಾನೆ ಉಪಟಳ ತಡೆಯದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಕಾಡಾನೆಗಳಿಂದ ಸಾವು ಸಂಭವಿಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಅಷ್ಟಿಷ್ಟು ಪರಿಹಾರ ಕೊಟ್ಟು ಹೋಗುತ್ತಾರೆ.
Related Articles
ಕುಟುಂಬಕ್ಕೆ ಉದ್ಯೋಗ ನೀಡ ಬೇಕು ಹಾಗೂ ಈ ಭಾಗದಲ್ಲಿರುವ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವ ನಿರ್ಧಾರ
ಪ್ರಕಟಿಸಬೇಕು. ಅಲ್ಲಿಯವರೆಗೂ ಶವ ಎತ್ತುವುದಿಲ್ಲ ಎಂದು ಪಟ್ಟುಹಿಡಿದರು. ನಂತರ ಶಾಸಕ ಎಚ್.ಕೆ. ಕುಮಾರಸ್ವಾಮಿ ಪ್ರತಿಭಟನಾಕಾರರ ಮನವೊಲಿಸಿ, ಮೃತದೇಹ ಸ್ಥಳಾಂತರ ಮಾಡಿಸಿದರು.
Advertisement
ಡಿಸೆಂಬರ್ 6ರಂದು ರಾಜೇಂದ್ರಪುರ ಬಳಿ ಕಾಫಿ ತೋಟದಲ್ಲಿ ರೈಟರ್ ಆಗಿದ್ದ ರಾಜೇಶ್ ಎಂಬಾತ ಸಲಗನ ದಾಳಿಗೆ ಬಲಿಯಾಗಿದ್ದರು.ಅದಾದ ನಂತರ ಸ್ಥಳೀಯರು ಪ್ರತಿಭಟನೆ ತೀವ್ರಗೊಳಿಸಿದ್ದರಿಂದ ನಂತರ ಎರಡು ಪುಂಡಾನೆ ಹಿಡಿದು ಸ್ಥಳಾಂತರಿಸಲಾಗಿತ್ತು.
ಆದರೂ ಕಾಡಾನೆಗಳ ದಾಳಿ.