ಬೆಂಗಳೂರು: ನಗರದಲ್ಲಿ ವಿದೇಶಿಗರು ಕುಡಿದ ಮತ್ತಿನಲ್ಲಿ ಪೊಲೀಸರಿಗೆ ತೀವ್ರ ಕಿರಿ ಕಿರಿ ಉಂಟು ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಶನಿವಾರ ನಸುಕಿನ ವೇಳೆ ನಡೆದಿದೆ.
ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ 2 ಗಂಟೆ ವೇಳೆ ಪ್ರಕರಣ ನಡೆದಿದ್ದು, ಎಂ.ಜಿ.ರೋಡ್ನಿಂದ ಪಾರ್ಟಿ ಮುಗಿಸಿ ಬರುತ್ತಿದ್ದ ವೇಳೆ ಪೊಲೀಸರು ತಡೆದಿದ್ದು ಈ ವೇಳೆ 7 ಮಂದಿ ವಿದೇಶಿಗರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ತಮಿಳು ನಾಡಿದ ನೊಂದಣಿಯ ವಾಹನದಲ್ಲಿ ವಿದೇಶಿಗರು ಪ್ರಯಾಣಿಸುತ್ತಿದ್ದು ಕಾರಿನ ಚಾಲಕ ಸುಂದರೇಶನ್ ಎಂಬಾತನೂ ಮದ್ಯ ಸೇವಿಸಿರುವುದು ತಪಾಸಣೆ ವೇಳೆ ಕಂಡು ಬಂದಿದೆ.
ನಾನಾ ತರಹ ಕಿರಿಕ್ ಮಾಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟಾಟಾಸುಮೋವನ್ನು ಜಪ್ತಿ ಮಾಡಿದ್ದಾರೆ.
7 ಮಂದಿಯ ಪೈಕಿ ಇಬ್ಬರು ಮಹಿಳೆಯರು,ಮೂವರು ಪುರುಷರು ಇಟಲಿಯವರಾಗಿದ್ದು ಅವರೊಂದಿಗೆ ತಮಿಳು ನಾಡಿನ ಮತ್ತು ಕೇರಳದ ಇಬ್ಬರು ಯುವತಿಯರು ಜೊತೆಗಿದ್ದರು ಎಂದು