ಉತ್ತರಪ್ರದೇಶ: ವಾಹನಗಳ ಸಂಚಾರ ದಟ್ಟಣೆಯ ನಡುವೆಯೇ ವಿದೇಶಿ ಮಹಿಳೆಯೊಬ್ಬಳು ಕಾರಿನ ಬಾನೆಟ್, ಟಾಪ್ ಮೇಲೆ ಹತ್ತಿ ಕುಳಿತುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Monsoon; ಒಂದು ವಾರ ವಿಳಂಬವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು: ಐಎಂಡಿ
ಉತ್ತರಪ್ರದೇಶದ ವಾರಣಾಸಿಯ ಮಾಂಡುವಾಡಿಹ್ ಕ್ರಾಸ್ ರೋಡ್ ನಲ್ಲಿ ಸಂಚಾರ ದಟ್ಟಣೆಯಿಂದ ನಿಧಾನವಾಗಿ ತೆರಳುತ್ತಿರುವ ಕಾರಿನ ಬಾನೆಟ್ ಹತ್ತಿ, ನಂತರ ಟಾಪ್ ಮೇಲೆ ಕುಳಿತುಕೊಂಡು ಅನುಚಿತವಾಗಿ ವರ್ತಿಸುತ್ತಿರುವ ವಿದೇಶಿ ಮಹಿಳೆಯ ವರ್ತನೆಯನ್ನು ಜನರು ವೀಕ್ಷಿಸುತ್ತಿರುವುದು ವಿಡಿಯೋದಲ್ಲಿದೆ.
ಘಟನೆಯ ಕುರಿತು ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಮಹಿಳೆಯ ವಿಚಿತ್ರ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಆಕೆಯ ಯಾವ ಉದ್ದೇಶದಿಂದ ಈ ರೀತಿ ವರ್ತಿಸುತ್ತಿದ್ದಳು ಎಂಬುದು ತಿಳಿದು ಬಂದಿಲ್ಲ ಎಂದು ವರದಿ ತಿಳಿಸಿದೆ.
Related Articles
ಈ ಪ್ರಕರಣಕ್ಕೂ ಮೊದಲು ಮಂಗಳವಾರ ವಿದೇಶಿ ಮಹಿಳೆಯೊಬ್ಬಳು ರಸ್ತೆಯ ಮಧ್ಯೆ ದಿಢೀರನೆ ಆಗಮಿಸಿ ಬೈಕ್ ಸವಾರರ ನಡುವೆ ಅಸಭ್ಯವಾಗಿ ನರ್ತಿಸಿರುವ ಘಟನೆ ನಡೆದಿತ್ತು.