ಗುರುಗ್ರಾಮ್: ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಿದ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಗುರುಗ್ರಾಮ್ ನಲ್ಲಿ ನಡೆದಿದೆ.
ಗುರುಗ್ರಾಮದ ಸೆಕ್ಟರ್ 69 ರಲ್ಲಿ ಟುಲಿಪ್ ಚೌಕ್ ಬಳಿಯ ರಸ್ತೆಯಲ್ಲಿ ಬುಧವಾರ ಸಂಜೆ 6 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬ ಬೆತ್ತಲಾಗಿ ಓಡಿದ್ದಾನೆ. ಸಾರ್ವಜನಿಕರ ಮುಂದೆ, ಟ್ರಾಫಿಕ್ ನಡುವೆ ವ್ಯಕ್ತಿ ಬೆತ್ತಲಾಗಿ ಓಡಾಡಿದ್ದನ್ನು ನೋಡಿ ,ಭೀತಿಯಿಂದಲೇ ಜನ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ
ಪೊಲೀಸರು ಬಂದದ್ದನ್ನು ನೋಡಿದ ಬಳಿಕ ವ್ಯಕ್ತಿ ಗ್ರಾಮದತ್ತ ಓಡಿ ಹೋಗಿದ್ದಾನೆ. ಗ್ರಾಮಸ್ಥರನ್ನು ಆತನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಆ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Related Articles
ನೈಜೀರಿಯನ್ ರಾಷ್ಟ್ರದ ಪ್ರಜೆಯಾಗಿರುವ ವ್ಯಕ್ತಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಮಾನಸಿಕ ಆರೋಗ್ಯ ಸರಿಯಾಗಿದ್ದರೆ, ಆತನ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬಾದಶಹಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮದನ್ ಲಾಲ್ ಹೇಳಿದ್ದಾರೆ.