Advertisement

ವಿಶೇಷ ಅಗತ್ಯವುಳ್ಳ ಮಕ್ಕಳು ವಿದೇಶಿ ದಂಪತಿಯ ಮಡಿಲಿಗೆ!

01:01 AM Sep 23, 2021 | Team Udayavani |

ಮಂಗಳೂರು: ಇದೇ ಮೊದಲ ಬಾರಿಗೆ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಅಗತ್ಯ(ಸ್ಪೆಷಲ್‌ ನೀಡ್‌)ವುಳ್ಳ ಮಕ್ಕಳಿಬ್ಬರು ವಿದೇಶಿ ದಂಪತಿಗಳ ಮಡಿಲು ಸೇರಲು ಸಿದ್ಧವಾಗಿದ್ದಾರೆ.

Advertisement

ಪುತ್ತೂರಿನ “ಶ್ರೀ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯಧಾಮ ದತ್ತು ಕೇಂದ್ರ’ವು ಜಿಲ್ಲೆಯ ಏಕೈಕ ದತ್ತು ಕೇಂದ್ರ. ಅಲ್ಲಿರುವ 6 ವರ್ಷದೊಳಗಿನ 25 ಮಕ್ಕಳ ಪೈಕಿ 7 ಮಕ್ಕಳು ವಿಶೇಷ ಅಗತ್ಯವುಳ್ಳವರು. ಕಡಿಮೆ ತೂಕ (ಲೋ ಬರ್ತ್‌ ವೈಟ್‌)ವುಳ್ಳ 3 ವರ್ಷದ ಮಗುವನ್ನು ದತ್ತು ಪಡೆಯಲು ಅಮೆರಿಕದ ದಂಪತಿ, ಕಿವಿ ಕೇಳಿಸದ 3 ವರ್ಷದ ಮಗುವನ್ನು ದತ್ತು ಪಡೆಯಲು ಇಟೆಲಿಯ ದಂಪತಿ  ನೋಂದಣಿ ಮಾಡಿಕೊಂಡಿದ್ದಾರೆ.

ಭಾರತೀಯರ ಹಿಂದೇಟು:

ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿರು ವವರನ್ನು ವಿಶೇಷ ಅಗತ್ಯವುಳ್ಳ ಮಕ್ಕಳೆಂದು ಪರಿಗಣಿಸಲಾಗುತ್ತದೆ. ಭಾರತೀಯರು ಆರೋಗ್ಯಪೂರ್ಣ ಮಕ್ಕಳನ್ನು ದತ್ತು ಪಡೆಯುವಲ್ಲಿ ತೋರುವ ಆಸಕ್ತಿಯನ್ನು ವಿಶೇಷ ಅಗತ್ಯದ ಮಕ್ಕಳ ಬಗYೆ ತೋರುತ್ತಿಲ್ಲ. ಅಂತಹ ಮಕ್ಕಳನ್ನು ಕೂಡ ದತ್ತು ಪಡೆಯಲು ಭಾರತೀಯರಿಗೆ ಮೂರು ಬಾರಿ ಅವಕಾಶ ನೀಡಲಾಗುತ್ತದೆ. ಯಾರೂ ಮುಂದೆ ಬಾರದಿದ್ದರೆ ಅಂತಾರಾಷ್ಟ್ರೀಯ ದತ್ತು ಪ್ರಕ್ರಿಯೆ ನಡೆಯುತ್ತದೆ.

ದ.ಕ: ವಾರ್ಷಿಕ ಸರಾಸರಿ  136 ಮಕ್ಕಳ ದತ್ತು:

Advertisement

ದ.ಕ. ಜಿಲ್ಲೆಯ ದತ್ತು ಕೇಂದ್ರದಿಂದ 2010ರಿಂದ ಇದುವರೆಗೆ ಒಟ್ಟು 136 ಮಕ್ಕಳನ್ನು ದತ್ತು ನೀಡಲಾಗಿದ್ದು ಅದರಲ್ಲಿ ಒಂದು ವಿಶೇಷ ಮಗುವನ್ನು ಭಾರತೀಯರಿಗೆ ದತ್ತು ನೀಡಲಾಗಿದೆ. ಕಳೆದ ವರ್ಷ 12 ಮಕ್ಕಳನ್ನು ದತ್ತು ನೀಡಲಾಗಿತ್ತು. ಈ ವರ್ಷ ಇದುವರೆಗೆ 4 ಮಕ್ಕಳನ್ನು ದತ್ತು ನೀಡಲಾಗಿದೆ. ವರ್ಷಕ್ಕೆ ಸುಮಾರು ಸರಾಸರಿ 10-12 ಮಕ್ಕಳನ್ನು ದತ್ತು ನೀಡಲಾಗುತ್ತಿದೆ.

ಉಡುಪಿ: 3 ಮಕ್ಕಳು ಅಮೆರಿಕಕ್ಕೆ  :

ಉಡುಪಿ ಸಂತೆಕಟ್ಟೆಯ ಕೃಷ್ಣಾಶ್ರಮ ದತ್ತು ಕೇಂದ್ರದಿಂದ ಈ ವರ್ಷ ಇದುವರೆಗೆ ಒಟ್ಟು 7 ಮಕ್ಕಳನ್ನು ದತ್ತು ನೀಡಲಾಗಿದೆ. ಸಂಸ್ಥೆಯು ಮಕ್ಕಳ ದತ್ತು ಪ್ರಕ್ರಿಯೆಯನ್ನು 2008ರಲ್ಲಿ ಆರಂಭಿಸಿದ್ದು ಇದುವರೆಗೆ 80 ಮಕ್ಕಳನ್ನು ದತ್ತು ನೀಡಲಾಗಿದೆ. ಮೂರು ವರ್ಷಗಳಲ್ಲಿ ಮೂವರು ವಿಶೇಷ ಅಗತ್ಯದ ಮಕ್ಕಳನ್ನು ಅಮೆರಿಕದ ಪ್ರಜೆಗಳಿಗೆ ನೀಡಲಾಗಿದೆ. ಐವರು ವಿಶೇಷ ಅಗತ್ಯದ ಮಕ್ಕಳನ್ನು ಭಾರತೀಯರೇ ಪಡೆದುಕೊಂಡಿದ್ದಾರೆ.

7 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣ ವಿಶೇಷ ಅಗತ್ಯದ ಮಕ್ಕಳನ್ನು  ನಮ್ಮ ದೇಶದವರು ದತ್ತು ಪಡೆಯಲು ಮುಂದೆ ಬರದಿದ್ದಾಗ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ) ಮಾರ್ಗಸೂಚನೆಯಂತೆ ಅಂತಾರಾಷ್ಟ್ರೀಯ ದತ್ತು ಸ್ವೀಕಾರ ಏಜೆನ್ಸಿ (ಆಫಾ) ಮೂಲಕ ಅಂತಾರಾಷ್ಟ್ರೀಯ ದತ್ತು ಪ್ರಕ್ರಿಯೆ ನಡೆಯುತ್ತದೆ. ಅಮೆರಿಕ, ಇಟೆಲಿಯ ದಂಪತಿ ನೋಂದಣಿ ಮಾಡಿಕೊಂಡಿದೆ. ಮ್ಯಾಚಿಂಗ್‌ ಆಗಿದೆ. ಅಂತಾರಾಷ್ಟ್ರೀಯ ದತ್ತು ಸ್ವೀಕಾರ ಪ್ರಕ್ರಿಯೆ 7 ತಿಂಗಳಲ್ಲಿ ಪೂರ್ಣಗೊಳ್ಳುವ  ಸಾಧ್ಯತೆ ಇದೆ. ಮಂಜುಳಾ,  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ದ.ಕ.

-ಸಂತೋಷ್‌ ಬೊಳ್ಳೆಟ್ಟು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next