Advertisement

ಅಧಿಕಾರಿ ಮನೆಯಲ್ಲಿ ವಿದೇಶಿ ಬಾತ್‌ಟಬ್‌!

02:58 PM Mar 17, 2022 | Kavyashree |

ವಿಜಯಪುರ: ನಿರ್ಮಿತಿ ಕೇಂದ್ರದ ಅಧಿಕಾರಿ ಮನೆ ಮೇಲೆ ಬುಧವಾರ ಬೆಳಗ್ಗೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಐಷಾರಾಮಿ ವಿದೇಶಿ ಬಾತ್‌ ಟಬ್‌, 10ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ.

Advertisement

ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥಸಾ ಮುಲಜಿ ಕಚೇರಿ, ಕಚೇರಿಯ ಸ್ಟೋರ್‌ ರೂಂ, ಮನೆಗಳ ಮೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೇ ಕಚೇರಿಯ ಓರ್ವ ಸಿಬ್ಬಂದಿ ಮನೆ ಹಾಗೂ ಬಾಗಲಕೋಟೆ ನಗರದಲ್ಲಿರುವ ಗೋಪಿನಾಥಸಾ ಸಂಬಂ ಧಿಕರ ಎರಡು ನಿವಾಸಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ಧಾರೆ.

ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಗೋಪಿನಾಥಸಾ ಮಲಜಿ ನಿವಾಸ, ದರ್ಗಾ ಪ್ರದೇಶದಲ್ಲಿರುವ ಕಚೇರಿ ಹಾಗೂ ಸ್ಟೋರ್‌ ನಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸೊಲ್ಲಾಪುರ ರಸ್ತೆಯಲ್ಲಿರುವ ಗೋಪಿನಾಥ ಮನೆಯಲ್ಲಿ ಐಷಾರಾಮಿ ವಸ್ತುಗಳು, ಚಿನ್ನದ ಒಡವೆಗಳು, ಬೆಲೆ ಬಾಳುವ ಗೃಹ ಬಳಕೆಯ ಐಷಾರಾಮಿ ವಸ್ತುಗಳು, 10ಕ್ಕೂ ಅಧಿಕ ಬ್ಯಾಂಕ್‌ ಪಾಸ್‌ ಬುಕ್‌, ಇತರೆ ದಾಖಲಾತಿ ವಶಕ್ಕೆ ಪಡದು ಪರಿಶೀಲನೆ ನಡೆಸಿದ್ದಾರೆ.

ಗೋಪಿನಾಥ ಪುತ್ರಿ, ಪತ್ನಿಯ ಬ್ಯಾಂಕ್‌ ದಾಖಲಾತಿಗಳನ್ನು ಸಹ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ಐಷಾರಾಮಿ ವಸ್ತುಗಳು ಮಾತ್ರವಲ್ಲದೇ ಬಾತ್‌ ರೂಂನಲ್ಲಿ ವಿದೇಶಿ ಮಾದರಿಯ ಸುಮಾರು 3 ಲಕ್ಷ ರೂ. ಬೆಲೆ ಬಾಳುವ ಬಾತ್‌ಟಬ್‌ ಇರುವುದನ್ನು ಪತ್ತೆ ಹಚ್ಚಿದ್ದಾರೆ. ದಾಳಿ ಮುಕ್ತಾಯದ ಬಳಿಕ ಅಕ್ರಮ ಆಸ್ತಿ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್‌ ಹಾಗೂ ತಂಡದಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next