Advertisement
ದೇಶದಲ್ಲಿ ಉತ್ತಮ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಹೊಂದಿರುವ ಕಾರುಗಳಲ್ಲಿ ಫೋರ್ಡ್ ಫಿಗೋ ಕೂಡಾ ಒಂದು. ಕೆಲವೇ ದಿನಗಳ ಹಿಂದೆ ಇದು ಬಿಡುಗಡೆಯಾಗಿದ್ದು, ಸದ್ದು ಮಾಡಿದೆ. ಹೊಸ ಫೀಚರ್‌ಗಳನ್ನು ಅಲ್ಪಸ್ವಲ್ಪ ಬಾಡಿ ಬದಲಾವಣೆಗಳನ್ನು ಹೊಂದಿದ್ದು, ಈಗಾಗಲೇ ಕಾರು ಪ್ರೇಮಿಗಳು ಉತ್ಸಾಹ ತೋರಿದ್ದಾರೆ. ಫೋರ್ಡ್ ಫಿಗೋದಲ್ಲಿ ಅಂಥದ್ದೇನಿದೆ ವಿಶೇಷ ಎಂಬುದನ್ನು ನೋಡೋಣ ಬನ್ನಿ..
2018ರ ಫೋರ್ಡ್ ಫಿಗೋಕ್ಕಿಂತ 2019ರ ಫೇಸ್‌ಲಿಫ್ಟ್ ಮಾಡೆಲ್ ಒಂದಷ್ಟು ಬದಲಾವಣೆಗಳನ್ನು ಕಂಡಿದೆ. ಇದರಲ್ಲಿ ಮುಂಭಾಗದ ವಿನ್ಯಾಸ ತುಸು ಬದಲಾಗಿದೆ. ಅಂದರೆ ಹೆಡ್‌ಲೈಟ್ ಸ್ಟೈಲ್ ಬದಲಾಗಿದೆ. ಬಂಪರ್ ವಿನ್ಯಾಸ ಆಸ್ಪೈರ್‌ನಂತೆಯೇ ಇದೆ. ಟೈಟಾನಿಯಂ ಬ್ಲೂ ಮಾಡೆಲ್‌ನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ತುಸು ನೀಲಿ ಬಣ್ಣ ಆಕರ್ಷಕವಾಗಿದೆ. ಒವಿಆರ್‌ಎಮ್‌ಗಳು ಕಪ್ಪು ಬಣ್ಣದ್ದಾಗಿವೆ. ನಾಲ್ಕೂ ವಿಂಡೋಗಳಿಗೆ ಸ್ಟಿಕ್ಕರ್ ಹಾಕಲಾಗಿದೆ. ಜತೆಗೆ ಟಾಪ್‌ಎಂಡ್ ಮಾಡೆಲ್ ಆದ ಟೈಟಾನಿಯಂ ಬ್ಲೂನಲ್ಲಿ ದೊಡ್ಡ 195/77 ಆರ್ 15 ಟಯರ್ ಇದ್ದರೆ, ಅದಕ್ಕಿಂತ ಕೆಳಗಿನ ಮಾಡೆಲ್‌ಗಳಲ್ಲಿ 14 ಇಂಚಿನ 175/65 ಟಯರ್‌ಗಳನ್ನು ಅಳವಡಿಸಲಾಗಿದೆ. ಇದು ಹಿಂದಿನ ಫೋರ್ಡ್ ಫಿಗೋಗಳಿಗಿಂತ ದೊಡ್ಡ ಟಯರ್ ಆಗಿದ್ದು ಹೆಚ್ಚಿನ ಗ್ರಿಪ್, ವೇಗಕ್ಕೆ ಸಹಕಾರಿಯಾಗಿದೆ. ಇದಕ್ಕೆ ಹೊರತಾಗಿ ಮುಂಭಾಗದಲ್ಲಿ ಪ್ರಕಾಶಮಾನವಾದ ಎಲ್‌ಇಡಿಗಳನ್ನು ಅಳವಡಿಸಲಾಗಿದೆ. ನ್ಪೋರ್ಟಿ ಲುಕ್‌ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಒಳಾಂಗಣ
ಒಳಾಂಗಣದಲ್ಲಿ ಟಚ್‌ಸ್ಕ್ರೀನ್ ಇರುವ ಇನ್ಫೋಎಂಟರ್‌ಟೈನ್‌ಮೆಂಟ್ ಸಿಸ್ಟಂ ಇದ್ದು 7 ಇಂಚಿನ ಟಚ್‌ಸ್ಕ್ರೀನ್ ಹೊಂದಿದೆ. ಹಿಂದಿನ ಮಾಡೆಲ್ ಕಾರುಗಳಿಗಿಂತ ಇದರ ಸಾಫ್ಟ್ವೇರ್ ಸುಧಾರಣೆಯಾಗಿದ್ದು ಅತಿ ವೇಗವಾಗಿ ಕಾರ್ಯನಿರ್ವಹಣೆ ಮಾಡುವಂತೆ ಮಾಡಲಾಗಿದೆ. ಸೀಟಿನ ಫ್ಯಾಬ್ರಿಕ್‌ಗಳನ್ನು ಉತ್ತಮಪಡಿಸಲಾಗಿದೆ. ಡೋರ್‌ಸೈಡ್ ಪ್ಯಾನೆಲ್‌ಗಳ ಬದಿ ನೀಲಿ ಬಣ್ಣವಿದ್ದು ಆಕರ್ಷಕವಾಗಿದೆ. ಮುಂಭಾಗದಲ್ಲಿ ಎರಡು ನೀರಿನ ಬಾಟಲಿ ಇಡುವಂತೆ ವಿನ್ಯಾಸ ಮಾಡಲಾಗಿದೆ. ಆದರೆ ಹಿಂಭಾಗದಲ್ಲಿ ಈ ಅನುಕೂಲ ಇಲ್ಲ. ಡೋರ್ ಹ್ಯಾಂಡಲ್‌ಗೆ ಕ್ರೋಂ ಪ್ಲೇಟ್‌ಗಳನ್ನು ಅಳವಡಿಸಲಾಗಿದೆ.
Related Articles
ಸಣ್ಣ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಫಿಗೋ ಅತ್ಯಂತ ಪವರ್‌ಫುಲ್ ಎಂಜಿನ್ ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಇದರ ಎಂಜಿನ್ ಹೆಸರು ಮಾಡಿದೆ. 1.2 ಲೀಟರ್‌ನ 3 ಸಿಲಿಂಡರ್‌ನ ಎಂಜಿನ್ 96 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಿದರೆ, ಹಾಗೆಯೇ 4 ಸಿಲಿಂಡರ್‌ನ 1.5 ಲೀಟರ್‌ನ ಡೀಸೆಲ್ ಎಂಜಿನ್ 100 ಎಚ್.ಪಿ ಶಕ್ತಿ ಉತ್ಪಾದನೆ ಮಾಡುತ್ತದೆ. ಡೀಸೆಲ್‌ನಲ್ಲಿ 1.2 ಲೀಟರ್‌ನ ಎಂಜಿನ್ ಕೂಡ ಲಭ್ಯವಿದೆ. ಇದು 96 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಡೀಸೆಲ್, ಪೆಟ್ರೋಲ್ ಮಾದರಿಯ ಎಂಜಿನ್‌ಗಳಲ್ಲಿ ಬಿಎಚ್‌ಪಿಗಳನ್ನು ಈ ವರ್ಷದ ಆವೃತ್ತಿಗಳಲ್ಲಿ ಏರಿಸಲಾಗಿದೆ. ಆಟೋಮ್ಯಾಟಿಕ್ ಆವೃತ್ತಿಯಲ್ಲಿ 123 ಬಿಎಚ್‌ಪಿಯ ಎಂಜಿನ್ ಲಭ್ಯವಿದೆ.
Advertisement
ಸುರಕ್ಷತೆಗೆ ಗರಿಷ್ಠ ಆದ್ಯತೆ ಫೋರ್ಡ್ ಫಿಗೋ ಗರಿಷ್ಠ ಸುರಕ್ಷತೆ ಹೊಂದಿರುವ ಕಾರುಗಳಲ್ಲಿ ಒಂದು. ಒಟ್ಟು 6 ಏರ್‌ಬ್ಯಾಗ್‌ಗಳನ್ನು ಇದು ಹೊಂದಿದೆ. ಪ್ರಯಾಣಿಕರು ಕೂರುವಲ್ಲಿ ಮತ್ತು ಬದಿಗೆ ಕೂಡ ಏರ್‌ಬ್ಯಾಗ್ ಇರುವ ಕಾರು ಇದು. ಇದರೊಂದಿಗೆ ಎಬಿಎಸ್, ಇಬಿಡಿ ಕೂಡ ಲಭ್ಯವಿದೆ. ಯಾರಿಗೆ ಬೆಸ್ಟ್
ಉತ್ತಮ ಮೈಲೇಜ್ ನೀಡುವ ಡೀಸೆಲ್ ಕಾರುಗಳಲ್ಲಿ ಫೋರ್ಡ್ ಫಿಗೋ ಕೂಡ ಒಂದು. ಪುಟ್ಟ ಫ್ಯಾಮಿಲಿಗೆ ಇದು ಉತ್ತಮ ಕಾರು. ಫೋರ್ಡ್ ಉತ್ತಮ ಡ್ರೈವಿಂಗ್ ಅನುಭವ ಕೊಡುತ್ತದೆ. 5.15ರಿಂದ 8.09 ಲಕ್ಷ ರೂ.ವರೆಗೆ ಎಕ್ಸ್‌ಷೋ ರೂಂ ಬೆಲೆಯನ್ನು ಹೊಂದಿದೆ. – ಈಶ