Advertisement

ಭಾರತದ ಮಾರುಕಟ್ಟೆಯಲ್ಲಿ ಫಿಗೋ ಆಟೋಮ್ಯಾಟಿಕ್‌ ಕಾರು ಬಿಡುಗಡೆ

12:40 PM Jul 23, 2021 | Team Udayavani |

ನವದೆಹಲಿ: ಕೆಲ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಫೋರ್ಡ್‌ ಫಿಗೋ ಹ್ಯಾಚ್‌ ಬ್ಯಾಕ್‌ ಕಾರಿನ ಆಟೋಮ್ಯಾಟಿಕ್‌ ಗೇರ್‌ ಮಾದರಿಯ ಕಾರು ಪುನಃ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.1.2 ಲೀ. ಪೆಟ್ರೋಲ್‌ ಇಂಜಿನ್‌ ಹೊಂದಿರುವ ಈ ಕಾರು,6 ಸ್ಪೀಡ್‌ ಆಯ್ಕೆಗಳನ್ನು ಒಳಗೊಂಡಿದೆ.

Advertisement

ಇಂಟೀರಿ ಯರ್ಸ್‌ನಲ್ಲಿ 7 ಇಂಚಿನ ಟಚ್‌ ಸ್ಕ್ರೀನ್‌, ಆಟೋ ಎಸಿ, ಎಲೆಕ್ಟ್ರಿಕಲ್‌ ಒಆರ್‌ವಿಎಂಗಳು, ಪುಶ್‌ ಬಟನ್‌ ಸ್ಟಾರ್ಟ್‌ ಇತ್ಯಾದಿ ಸೌಕರ್ಯಗಳಿವೆ. ಸುರಕ್ಷತೆಗಾಗಿ 6 ಏರ್‌ ಬ್ಯಾಗ್‌, ಎಬಿಎಸ್‌-ಇಬಿಡಿ- ಇಎಸ್‌ಸಿ ಸೌಲಭ್ಯ, ಟ್ರಾಕ್ಷನ್‌ ಕಂಟ್ರೋಲ್‌ಗ‌ಳಿವೆ. ಎಕ್ಸ್‌ ಶೋರೂಂ ಬೆಲೆ7.75 ಲಕ್ಷ ರೂ.ಗಳಿಂದ8.20 ಲಕ್ಷ ರೂವರೆಗೆ ಇದೆ.

“ಕ್ಲಬ್‌ ಹೌಸ್‌’ ಇನ್ನು ಎಲ್ಲರಿಗೂ ಮುಕ್ತ
ಕೇವಲ ಆಹ್ವಾನದ ಮೇರೆಗಷ್ಟೇ ಬಳಸಬಹುದಾಗಿದೆ. ಆಡಿಯೋ ಆಧಾರಿತ ‌ “ಕ್ಲಬ್‌ ಹೌಸ್‌’ ಅಪ್ಲಿಕೇಶನ್‌, ಇನ್ನು ಎಲ್ಲರಿಗೂ ಮುಕ್ತವಾಗಿ ಸಿಗಲಿದೆ ಎಂದು ಇದರ ನಿರ್ಮಾತೃ ಸಂಸ್ಥೆ ಪ್ರಕಟಿಸಿದೆ.

ಇತರ ಆ್ಯಪ್ ಗಳಂತೆ ಈ ಅಪ್ಲಿಕೇಶನ್‌ನನ್ನೂ ಉಚಿತವಾಗಿ ಡೌನ್‌ಲೋಡ್‌ ಮಾಡಿ ಬಳಸಬಹುದಾಗಿದೆ ಎಂದು ಕಂಪನಿ ಹೇಳಿದೆ. “ನೀವು ಈಗಾಗಲೇ ಕ್ಲಬ್‌ಹೌಸ್‌ ಬಳಕೆದಾರರಾಗಿದ್ದರೆ ನೀವು ನಿಮ್ಮ ಪೋಸ್ಟ್‌ ಅನ್ನು ಮುಕ್ತವಾಗಿ ಪ್ರಕಟಿಸಬಹುದು. ಒಂದು ವೇಳೆ ನೀವು ಸೃಜನಶೀಲ ವ್ಯಕ್ತಿಯಾಗಿದ್ದರೆ ನಿಮ್ಮ ಕಂಟೆಂಟ್‌ ಅನ್ನು ನಿಮ್ಮ ಪ್ರೇಕ್ಷಕರಿಗೆ ಹಂಚಿಕೊಳ್ಳಬಹುದು’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next