Advertisement

ಸೊರಬ ಮಾರ್ಗವಾಗಿ ರೈಲ್ವೆ ಸಂಪರ್ಕಕ್ಕೆ ಒತ್ತಾಯ

08:39 PM Jan 22, 2022 | Girisha |

ಸೊರಬ: ತಾಲೂಕಿನ ಅಭಿವೃದ್ಧಿ ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸೊರಬ ಮಾರ್ಗವಾಗಿ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೊರಬ- ಆನವಟ್ಟಿ ಬ್ಲಾಕ್‌ ಜೆಡಿಎಸ್‌ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಗ್ರೇಡ್‌-2 ತಹಶೀಲ್ದಾರ್‌ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಜೆಡಿಎಸ್‌ ಮುಖಂಡ ಚಂದ್ರೇಗೌಡ ಬಾಸೂರು ಮಾತನಾಡಿ, ನೂತನವಾಗಿ ಶಿವಮೊಗ್ಗದಿಂದ ಶಿಕಾರಿಪುರ ಮಾರ್ಗವಾಗಿ ರಟ್ಟೆಹಳ್ಳಿಯಿಂದ ಹಾನಗಲ್‌- ಬಂಕಾಪುರ ಮಾರ್ಗವಾಗಿ ಪುಣೆ- ಬೆಂಗಳೂರು ರೈಲ್ವೆ ಮಾರ್ಗದ ಯಲವಗಿ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೆ ಮಾರ್ಗವು ಸೊರಬದ ಮೂಲಕ ಹಾದುಹೋಗುವಂತೆ ಆಗಬೇಕು. ಸೊರಬ ಮೂಲಕ ರೈಲ್ವೆ ಮಾರ್ಗ ಹಾದು ಹೋದರೆ ತಾಲೂಕಿನ ಪ್ರಯಾಣಿಕರಿಗೆ ಹಾಗೂ ಈ ಪ್ರದೇಶದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಹುಬ್ಬಳ್ಳಿ ಮೂಲಕ ಮುಂಬೈ ಮತ್ತಿತರ ಉತ್ತರ ಭಾರತದ ಭಾಗಗಳಿಗೆ ರಫ್ತು ಮಾಡಲು ಅನುಕೂಲವಾಗಲಿದೆ ಹಾಗೂ ಈ ಮಾರ್ಗ ಅತ್ಯಂತ ಸಮೀಪದ ಮತ್ತು ಕಡಿಮೆ ವೆಚ್ಚದ ಮಾರ್ಗವಾಗಿದ್ದರಿಂದ ಈ ಭಾಗದ ರೈತರಿಗೆ ವರದಾನವಾಗಲಿದೆ ಎಂದರು.

ಇಲಾಖೆಯಿಂದ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ತಾಲೂಕನ್ನು ಸಂಪರ್ಕಿಸಿ ಸೊರಬ- ಆನವಟ್ಟಿ- ಹಾನಗಲ್‌ ಬಂಕಾಪು‌ ಮಾರ್ಗವಾಗಿ ಪುಣೆ- ಬೆಂಗಳೂರು ರೈಲ್ವೆ ಮಾರ್ಗದ ಯಲವಗಿ ರೈಲು ನಿಲ್ದಾಣಕ್ಕೆ ಹೋಗುವಂತೆ ಸಮೀಕ್ಷೆ ನಡೆಸಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸೊರಬ ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ, ಆನವಟ್ಟಿ ಬ್ಲಾಕ್‌ ಅಧ್ಯಕ್ಷ ಶಿವಪ್ಪ ವಕೀಲರು, ಬಸವನಗೌಡ ತತ್ತೂರು, ಅಣ್ಣಪ್ಪ ವಕೀಲರು ಸಾಗರ, ಮನೋಹರ ಕುಗ್ವೆ, ನಂದಿಶ್‌ ಗೌಡ, ಹನುಮಂತಪ್ಪ, ಪುಂಡಲಿಕಪ್ಪ, ಗಣಪತಿ, ನಾಗರಾಜ್‌, ಭಾರತಿ ಶೆಣೈ, ಪ್ರಶಾಂತ ಇತರರು ಪ್ರತಿಭಟನೆಯಲ್ಲಿ ಇದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next