Advertisement
ಚುನಾವಣೆಯಲ್ಲಿ ಸಮುದಾಯಕ್ಕೆ ಟಿಕೆಟ್ ನೀಡದೆ ಕಡೆಗಣಿಸುವ ಪಕ್ಷಗಳಿಗೆ ಬೆಂಬಲವಿಲ್ಲ ಎಂದು ಘೋಷಿಸಿದ ಅವರು, ನಾವು ಕೇಳುವ ಹಕ್ಕು ಭಿಕ್ಷೆಯಲ್ಲ. ಸಂವಿಧಾನ ಬದ್ಧ ಹಕ್ಕಾಗಿದೆ. ದೇಶದ ಸಂವಿಧಾನವೇ ಸಮುದಾಯಕ್ಕೆ ಧ್ವನಿಯಾಗಿದೆ. ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ ಹೊಂದಿರುವ ಕೊರಚ, ಕೊರಮ ದೇವ ಸಮುದಾಯಕ್ಕೆ ರಾಜ್ಯ ಸರ್ಕಾರ ಕೂಡಲೇ ಅಲೆಮಾರಿ ನಿಗಮ ಸ್ಥಾಪಿಸುವ ಮೂಲಕ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
Related Articles
ಅಧ್ಯಕ್ಷ ಕಮಲಾಕರ ಎಲ್. ಮಾನೆ ಸಮಾಜ ಸಂಘಟನೆಗೆ ಆದ್ಯತೆ ನೀಡಿ ಎಂದು ಹೇಳಿದರು.
Advertisement
ಗುತ್ತಿಗೆದಾರ ಪ್ರಕಾಶ ಬಿ. ಫುಲಾರ, ತಾಯಪ್ಪ ಗುತ್ತೇದಾರ, ಜೇವರ್ಗಿ ತಾಪಂ ಇಒ ಪ್ರಭು ಸಿ. ಮಾನೆ, , ಜಿಲ್ಲಾ ಕೊರಮ ಸಮಾಜದ ಗೌರವಾಧ್ಯಕ್ಷ ಬಸಣ್ಣಾ ಭಜಂತ್ರಿ, ಜಿಲ್ಲಾಧ್ಯಕ್ಷ ಗಿರೀಶ ಭಜಂತ್ರಿ, ಸಮಾಜದ ತಾಲೂಕು ಗೌರವಾಧ್ಯಕ್ಷ ಅಣ್ಣಪ್ಪ ಜಾಧವ್, ಸೂರ್ಯಕಾಂತ ಜಾಧವ್ ಮಾರುತಿ ಜಾಧವ್, ಪ್ರಧಾನ ಕಾರ್ಯದರ್ಶಿ ಲೋಕೇಶ ಜಾಧವ್, ಕಾಶಿನಾಥ ಜಾಧವ್, ಸುರೇಶ ಜಾಧವ್, ಹಣಮಂತ ಜಾಧವ್, ಕಲ್ಯಾಣಿ ಜಾಧವ್, ರಮೇಶ ಜಾಧವ್, ಮಲ್ಲಿಕಾರ್ಜುನ ಜಾಧವ್, ಭಜರಂಗ ಎಸ್. ಮಾನೆ, ಬಾಲಾಜಿ ಎ. ಜಾಧವ್ ಮತ್ತಿತರರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಗುರುಭವನ ವರೆಗೆ ನುಲಿಯ ಚಂದಯ್ಯನವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ನಂತರ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ವಿವಿಧ ಜಿಲ್ಲೆಯ ತಾಲೂಕು ಪದಾಧಿ ಕಾರಿಗಳು ಭಾಗವಹಿಸಿದ್ದರು. ಇದೆ ವೇಳೆ ಕೊರಚ, ಕೊರಮ ಸಂಘದ ಸದಸ್ಯತ್ವ ರಾಜ್ಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರಮೇಶ ಜಾಧವ ನಿರೂಪಿಸಿದರು. ಪ್ರದೀಪ ತಳಕೇರಿ ಭಾವಗೀತೆ ಹಾಡಿದರು.