ಸ್ಪರ್ಧೆ ಮಾಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅಂಬರೀಷ್ ಭರವಸೆ ನೀಡಿದರು.
Advertisement
ನಗರದ ರೇಸ್ಕೋರ್ಸ್ ರಸ್ತೆಯಲ್ಲಿ ಇರುವ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿಅಂಬರೀಷ್ ಬೆಂಬಲಿಗರ ಸಭೆ ನಡೆಯುತಿತ್ತು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಚಿವರ ನಿವಾಸದಲ್ಲಿ ಸಭೆ ನಡೆಸುವಂತಿಲ್ಲ ಎಂದು ಹೇಳಿದ್ದರಿಂದ ಕಾರ್ಯಕರ್ತರನ್ನು ಹಾಗೂ ಅಭಿಮಾನಿಗಳನ್ನು ಖಾಸಗಿ ಹೊಟೇಲ್ಗೆ ಕರೆದೊಯ್ದು ಮಾತನಾಡಿದರು.