Advertisement

ಬೀದರನಲ್ಲಿ ರಾಜ್ಯ ಯುವಜನ ಮೇಳ ಆಯೋಜಿಸಲು ಒತ್ತಾಯ

05:15 PM Sep 15, 2022 | Team Udayavani |

ಬೀದರ: ಬೀದರನಲ್ಲಿ ರಾಜ್ಯ ಯುವಜನ ಮೇಳ ಆಯೋಜನೆ ಸೇರಿದಂತೆ ಯುವ ಸಂಘ- ಸಂಸ್ಥೆಗಳ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು ಎಂದು ರಾಜ್ಯ ಯುವ ಸಂಘ-ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ.

Advertisement

ಒಕ್ಕೂಟದ ಗೌರವಾಧ್ಯಕ್ಷ ವಿಜಯಕುಮಾರ ಸೋನಾರೆ, ಅಧ್ಯಕ್ಷ ಶಿವಕುಮಾರ ಎಚ್‌.ಎಂ., ಕಾರ್ಯಾಧ್ಯಕ್ಷ ಪ್ರಕಾಶ ಅಂಗಡಿ ಮತ್ತು ಪ್ರಧಾನ ಕಾರ್ಯದರ್ಶಿ ಪಣೀಂದ್ರ ಪ್ರಸಾದ ಮತ್ತಿತರರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಕಳೆದ ಒಂದು ದಶಕದಿಂದ ರಾಜ್ಯದ ಯುವಕ ಸಂಘಗಳು ಇಲಾಖೆಯಿಂದ ಯಾವುದೇ ಪ್ರೋತ್ಸಾಹ, ಅನುದಾನವಿಲ್ಲದೇ ನಿಷ್ಕ್ರಿಯವಾಗಿದ್ದು, ಸಂಸ್ಥೆಗಳನ್ನು ಕ್ರಿಯಾಶೀಲಗೊಳಿಸಲು ಬಹುದಿಗಳ ಬೇಡಿಕೆಗಳನ್ನು ಈಡೇರಿಸಿ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದ್ದಾರೆ.

2018ನೇ ಸಾಲಿನಲ್ಲಿ ಸ್ಥಗಿತಗೊಳಿಸಿದ್ದ ರಾಜ್ಯ ಯುವಜನ ಮೇಳವನ್ನು ಪುನಃ ಬೀದರ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಬೇಕು. ನಿಂತು ಹೋಗಿರುವ ಜಿಲ್ಲಾ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಕಾರ್ಯವನ್ನು ಮುಂದುವರೆಸಬೇಕು. ಈ ಹಿಂದೆ ಇಲಾಖೆಯಲ್ಲಿದ್ದ ಗ್ರಾಮೀಣ ಕ್ರೀಡೋತ್ಸವವನ್ನು ಪುನರಾರಂಭಿಸಬೇಕು. ಯುವಕರಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಯುವ ಸಮ್ಮೇಳನಗಳನ್ನು ಮುಂದುವರೆಸಬೇಕು. ಜಿಲ್ಲಾಮಟ್ಟದ ಜನಪದ ಕಲೆಗಳ ತರಬೇತಿ ಶಿಬಿರವನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮೂರ ಶಾಲೆಗೆ ನಮ್ಮೂರ ಯುವಜನರು ಎಂಬ ಕಾರ್ಯಕ್ರಮವನ್ನು ಈ ಮೊದಲಿನಂತೆ ಯುವಕ ಸಂಘಗಳಿಗೆ ನೀಡಬೇಕು. ನೋಂದಾಯಿತ ಯುವಕ ಸಂಘಗಳಿಗೆ ಈ ಹಿಂದಿನಂತೆ ಕ್ರೀಡಾ ಉಪಕರಣಗಳನ್ನು ನೀಡಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು. ರಾಜ್ಯ-ರಾಷ್ಟ್ರ ಯುವ ಹಾಗೂ ಕ್ರೀಡಾ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ಬಸ್‌ಪಾಸ್‌ ಹಾಗೂ ವಿಮಾ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next