Advertisement

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

05:41 PM Mar 24, 2023 | Team Udayavani |

ರಬಕವಿ-ಬನಹಟ್ಟಿ: ಬೆಂಗಳೂರಿನಲ್ಲಿ ನೇಕಾರರ ಕುರುವಿನಶೆಟ್ಟಿ ಸಮಾಜದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ೧೦೦೮ ಶಿವಶಂಕರ ಮಹಾಸ್ವಾಮೀಜಿ ಮತ್ತು ಹಟಗಾರ ಸಮಾಜದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚನ್ನಬಸವ ದೇವರು ಆಳಂದ ಇವರ ನೇತೃತ್ವದಲ್ಲಿ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಮುಂದೆ ನೇಕಾರರಿಗೆ ರಾಜ್ಯದ 5 ಕಡೆ ಬಿಜೆಪಿಯಿಂದ ಎಂಎಲ್‌ಎ ಟಿಕೆಟ್ ನೀಡಬೇಕು ಹಾಗೂ ತೇರದಾಳ ಮತಕ್ಷೇತ್ರದಲ್ಲಿ ನೇಕಾರರಿಗೆ ಟಿಕೆಟ್ ನೀಡಬೇಕೆಂದು ಪ್ರತಿಭಟನೆ ನಡೆಸಲಾಯಿತು.

Advertisement

ನಂತರ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನಕುಮಾರ ಕಟೀಲ್, ರಾಜ್ಯ ಉಪಾಧ್ಯಕ್ಷರಾದ ನಿರ್ಮಲಕುಮಾರ ಸುರಾನಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು.

ನೇಕಾರರಿಗೆ ಮತಷ್ಟು ಬಲ : ಬಿಜೆಪಿ ಪಕ್ಷದಿಂದ ನೇಕಾರರಿಗೆ ಟಿಕೆಟ್ ನೀಡಬೇಕು ಎಂದು ತೇರದಾಳ ಮತಕ್ಷೇತ್ರದಲ್ಲಿ ಶಾಸಕ ಸಿದ್ದು ಸವದಿ ವಿರುದ್ಧ ಪ್ರಭಲ ಬೇಡಿಕೆಯಾಗಿದ್ದು, ಹಟಗಾಋ ಸಮುದಾಯದಿಂದ ರಾಜೇಮದ್ರ ಅಂಬಲಿ ಹಾಗೂ ಕುರುಹಿನಶೆಟ್ಟಿ ಸಮಾಜದಿಂದ ಮನೋಹರ ಶಿರೋಳ ಪ್ರಬಲ ಆಕಾಂಕ್ಷಿಗಳಾಗಿದ್ದು ಇವರ ಪರವಾಗಿ ಸ್ವಾಮೀಜಿಗಳು ನಿಂತಿರುವುದು ನೇಕಾರರ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಈ ಸಂದರ್ಭದಲ್ಲಿ ಸಮುದಾಯದ ಹಿರಿಯರಾದ ಶೇಖರ ಮಾಲಾಪುರ, ಡಾ. ಪಂಡಿತ ಪಟ್ಟಣ, ರಮೇಶ ಕೊಣೂರ, ರಾಮಣ್ಣ ಹುಲಕುಂದ, ಸಿದ್ದು ಮುನ್ನೋಳ್ಳಿ, ಸುರೇಶ ಬೀಳಗಿ, ಶಶಿಕಾಂತ ಹುನ್ನೂರ, ರಾಜೇಂದ್ರ ಅಂಬಲಿ, ಬ್ರಿಜಮೋಹನ್ ಡಾಗಾ, ಪ್ರವೀಣ ಕೋಲಾರ, ರಮೇಶ ಮಂಡಿ, ಕುಮಾರ ಕದಂ ಸೇರಿದಂತೆ ಅನೇಕರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next