Advertisement

ಬಡವರಿಗೆ ಶೀಘ್ರ ಮನೆ ನೀಡಲು ಒತ್ತಾಯ

05:08 PM Feb 27, 2018 | Team Udayavani |

ಸುರಪುರ: ಸರಕಾರ ಜಾರಿಗೆ ತಂದಿರುವ ಅನ್‌ ಲಿಮಿಟೇಷನ್‌ ಯೋಜನೆ ಬರುವ ಮಾರ್ಚ್‌ 8ಕ್ಕೆ ಮುಗಿಯಲಿದೆ. ಅದರೊಳಗೆ ತಾಲೂಕಿನ ಎಲ್ಲ ಮನೆ ರಹಿತರಿಗೆ ಮನೆ ಮಂಜೂರು ಮಾಡಲೆಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಕಾರ ಒತ್ತಾಯಿಸಿದರು. ಪ್ರಾಂತ ರೈತ ಸಂಘದಿಂದ ಸುರಪುರ ತಾಲೂಕು ಪಂಚಾಯತ್‌ ಕಚೇರಿ ಎದುರು ಮನೆ ರಹಿತರೊಂದಿಗೆ ಹಮ್ಮಿಕೊಂಡ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ತಾಲೂಕಿನ 9 ಗ್ರಾಪಂಗಳಿಗೆ ಎಸ್ಸಿ ಮತ್ತು ಎಸ್ಟಿ ಜನಾಂಗದ ಮನೆ ಇಲ್ಲದವರಿಗೆ ಮನೆ ನೀಡುವ ಯೋಜನೆಯಾದ ಅನ್‌ ಲಿಮಿಟೇಷನ್‌ ಯೋಜನೆ ಅಡಿಯಲ್ಲಿ ಮನೆ ನೀಡಲು ಹಲವು ತಿಂಗಳ ಹಿಂದೆ ಮನವಿ ಸಲ್ಲಿಸಲಾಗಿತ್ತು ಮತ್ತು ಖಾಲಿ ಜಾಗದ ನಂಬರ, ಆಧಾರ ಕಾರ್ಡ್‌,ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಎಲ್ಲ ದಾಖಲೆಗಳನ್ನು ನೀಡಲಾಗಿದೆ. ಆದರೆ ಯಾವ ಅಧಿಕಾರಿಗಳು ನಮ್ಮ ಬೇಡಿಕೆ ಈಡೇರಿಕೆಗೆ ಗಮನಿಸುತ್ತಿಲ್ಲ. ಗ್ರಾಪಂ ಪಿಡಿಒ ಮತ್ತು ತಾಲೂಕು ಪಂಚಾಯತ್‌ ಇಒ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದರು.
 
ಸತ್ಯಾಗ್ರದಲ್ಲಿ ಸಂಘದ ತಾಲೂಕಾಧ್ಯಕ್ಷ ಧರ್ಮಣ್ಣ ದೊರಿ, ಬಸವರಾಜ ಐಕೂರು, ರಾಮನಗೌಡ ಗೂಗಲ್‌, ಸಂಗಮೇಶ ರುಕ್ಮಾಪುರ, ನಿಂಗಣ್ಣ ಬೈಲಾಪುರ, ಶಬ್ಬಿರಖಾನ ಅಡ್ಡೊಡಗಿ, ಮಲ್ಲನಗೌಡ ಗೌಡಗೇರಾ, ಮುದಕಪ್ಪ ಕುಪಗಲ್‌, ಚಂದ್ರಾಮಗೌಡ, ಭೀಮಬಾಯಿ ಗೌಡಗೇರಾ, ನಾಗಮ್ಮ, ದೇವಮ್ಮ ಬೈಲಾಪುರ, ಸೊಮವ್ವ ಬಿರಾದಾರ, ಬಸವರಾಜ ಹೊಸಮನಿ, ಸಿದ್ದಲಿಂಗಯ್ಯ ವಗ್ಗಾ, ಹಣಮಂತ್ರಾಯ ಗುಜ್ಜಲ, ಶಿವರಾಯ ದೊರಿ, ಮಹಿಬೂಬ ಸುರಪುರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next