Advertisement

ಬಿಸಿಯೂಟ ಯೋಜನೆ ವಿಸ್ತರಣೆಗೆ ಒತ್ತಾಯ

11:53 AM May 30, 2018 | Team Udayavani |

ಬೆಂಗಳೂರು: ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಸಿಯೂಟ ಯೋಜನೆ ಜಾರಿ ಮಾಡಬೇಕು ಎಂದು ಕಲಬುರಗಿ ವಿಭಾಗೀಯ ಅನುದಾನರಹಿತ ಶಾಲೆಗಳ ಒಕ್ಕೂಟದ ನಿರ್ದೇಶಕ ಶಿವನಗೌಡ ಮಾಲಿ ಪಾಟೀಲ್‌ ಮನವಿ ಮಾಡಿದರು. ಮಂಗಳವಾರ ಪ್ರಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಗ್ರಾಮಾಂತರ ಪ್ರದೇಶ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅನುದಾನ ರಹಿತ ಶಾಲೆಗಳನ್ನೇ ಅವಲಂಭಿಸಿದ್ದಾರೆ. ಹಳ್ಳಿಗಾಡು ಪ್ರದೇಶದಿಂದ ಶಾಲೆಗಳಿಗೆ ಬರುವ ಮಕ್ಕಳಲ್ಲಿ ಬಡಮಕ್ಕಳೇ ಹೆಚ್ಚಿದ್ದು, ಹಸಿವು ಕಾರಣ ಸರಿಯಾಗಿ ಕಲಿಕೆಯ ಕಡೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸರ್ಕಾರ ಬಿಸಿಯೂಟ ಯೋಜನೆಯನ್ನು ಅನುದಾನ ರಹಿತ ಶಾಲೆಗಳಿಗೂ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next