Advertisement

ಮಹಿಳಾ ನಿರುದ್ಯೋಗ ನಿವಾರಣೆಗೆ ಪಣ: ಸಂಯುಕ್ತಾ

02:00 PM May 14, 2019 | pallavi |

ಗಜೇಂದ್ರಗಡ: ಆರ್ಥಿಕ ಬಲ ಇಲ್ಲದಿದ್ದಲ್ಲಿ ಮಹಿಳೆಯರು ದುರ್ಬಲರಾಗುತ್ತಾರೆ. ಸಾರ್ವಜನಿಕ ಕೆಲಸದಲ್ಲಿ ಪುರುಷರಷ್ಟು ಸರಿಸಮಾನವಾಗಿ ಮಹಿಳೆಯರಿಗೆ ಇಂದಿಗೂ ಅವಕಾಶ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ನಿರುದ್ಯೋಗ ನಿವಾರಣೆಗೆ ಪ್ರತಿಯೊಂದು ಮಹಿಳಾ ಮಂಡಳಗಳು ಪಣ ತೊಡಬೇಕಿದೆ ಎಂದು ಅಕ್ಕನ ಬಳಗ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.

Advertisement

ಪಟ್ಟಣದ ಮೈಸೂರ ಮಠದ ಯಾತ್ರಿ ನಿವಾಸದಲ್ಲಿ ಅಕ್ಕನ ಬಳಗ ಹಾಗೂ ಪ್ರಗತಿ ಫೌಂಡೇಶನ್‌ ವತಿಯಿಂದ ನಡೆದ ಉಚಿತ ಬ್ಯೂಟಿ ಪಾರ್ಲರ್‌, ಹೊಲಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಅವಶ್ಯಕತೆ ಇಲ್ಲ ಎಂಬ ಭಾವನೆ ಇಂದಿಗೂ ಇದೆ. ಸಾಮಾಜಿಕ ವ್ಯವಸ್ಥೆ ನಿರ್ವಹಣೆ ಮಾಡುವುದಕ್ಕಿಂತ ಕುಟುಂಬದ ನಿರ್ವಹಣೆ ಮಾಡುವ ಹೊಣೆಗಾರಿಕೆ ಮಹಿಳೆಯರಿಗೆ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗುತ್ತಿದೆ. ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಉದ್ಯೋಗಾವಕಾಶ ಮುಕ್ತವಾಗಿ ಸಿಗುವಂತಾಗಬೇಕೆಂದರು.

ಹೆಣ್ಣು-ಗಂಡು ನಡುವೆ ತಾರತಮ್ಯ ಇದೆ. ಲಿಂಗ ಅಸಮಾನತೆ ಇಂದಿಗೂ ಚಾಲ್ತಿಯಲ್ಲಿದೆ. ಹಳ್ಳಿಗಳಲ್ಲಿ ಮಹಿಳೆಯರನ್ನು ಕೀಳಾಗಿ ಕಾಣಲಾಗುತ್ತಿದೆ. ಲಿಂಗ ಸಮಾನತೆ ಮನಸ್ಥಿತಿ ಬೆಳೆಸಬೇಕಾಗಿದೆ. ಮಹಿಳೆಯರಿಗಾಗಿ ವಿಶೇಷ ಉದ್ಯೋಗ ಮೇಳಗಳನ್ನು ಏರ್ಪಡಿಸಬೇಕಿದೆ. ಸ್ವಸಹಾಯ ಸಂಘಗಳು ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಮುಂದಾಗಬೇಕು. ಅಂದಾಗ ಮಾತ್ರ ನಿರುದ್ಯೋಗ ನಿವಾರಣೆ ಸಾಧ್ಯ ಎಂದರು.

ಪ್ರಗತಿ ಫೌಂಡೇಶನ್‌ ಅಧ್ಯಕ್ಷೆ ವಿಜಯಲಕ್ಷಿ ್ಮೕ ಗೋನಾಳ ಮಾತನಾಡಿ, ಅವಕಾಶಗಳು ಪದೇ ಪದೇ ಬರುವುದಿಲ್ಲ. ಬಂದಾಗ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ನಾವು ಕಲಿತು ಮತ್ತಷ್ಟು ಜನರಿಗೆ ಕಲಿಸುವ ಬದುಕಿನ ಗುರಿಯತ್ತ ಉತ್ತೇಜನ ನೀಡುವ ಕಾರ್ಯಕ್ಕೆ ತರಬೇತಿ ಪಡೆದವರೆಲ್ಲ ಪ್ರಯತ್ನಿಸಬೇಕು. ಯಾವುದೇ ಶಿಕ್ಷಣದ ತರಬೇತಿ ಪ್ರಮಾಣ ಪತ್ರಗಳು ತಮ್ಮ ಅರ್ಹತೆಯನ್ನು ಸಾಕ್ಷಿಕರಿಸುತ್ತವೆ ಎಂದರು.

Advertisement

ಅನುಸುಯಾ ವಾಲಿ, ಶೈಲಾ ಪಟ್ಟಣಶೆಟ್ಟಿ, ಸುವರ್ಣಾ ನಂದಿಹಾಳ, ಗಿರಿಜಾ ಬಳಿಗೇರ, ಲಲಿತಾ ಪಾಟೀಲ, ಲೀಲಾವತಿ ಸವಣೂರ, ಸುಧಾ ಇಂಜನಿ, ಶೋಭಾ ಗುಡೂರ, ಲೀಲಾ ಜಕ್ಕನಗೌಡ್ರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next