ಪ್ರತಿ ವರ್ಷ ಡಿ. 4ರಂದು “ನೌಕಾ ದಿನ’ದ ಅಂಗವಾಗಿ ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿ ಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ನೌಕಾಪಡೆಯು ರಾಜಧಾನಿಯ ಹೊರಗೆ ಅಂದರೆ, ಆಂಧ್ರ ಪ್ರದೇಶದ ವಿಶಾಖಪಟ್ಟಣ ದಲ್ಲಿ ರವಿವಾರ ನೌಕಾದಿನ ಆಚರಿಸುತ್ತಿದೆ.
ವಿಶಾಖಪಟ್ಟಣದಲ್ಲಿ ಏಕೆ?
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಲ್ಲಿ ನೌಕಾ ಪಡೆಯು ನೌಕಾದಿನದಂದು ತನ್ನ “ಕಾರ್ಯಾಚರಣೆಯ ಸಾಮರ್ಥ್ಯ’ವನ್ನು ಪ್ರದರ್ಶಿಸಲು ನಿರ್ಧರಿಸಿದೆ. ಹೀಗಾಗಿ, ವಿಶಾಖಪಟ್ಟಣದ ಆರ್.ಕೆ. ಬೀಚ್‌ನಲ್ಲಿ ಸಾಮರ್ಥ್ಯ ಪ್ರದರ್ಶನ ಆಯೋಜಿಸಿದೆ. ಡಿ. 2ರಂದು ಇದರ ಪೂರ್ವಾಭ್ಯಾಸವೂ ನಡೆದಿದೆ.
ವಿಶೇಷವೇನು?
ಬೀಚ್‌ರಸ್ತೆಯಲ್ಲಿನ “ವಿಕ್ಟರಿ ಎಟ್ ಸೀ’ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭ.
ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿಗಳು, ವಿಮಾನಗಳು ಮತ್ತು ಎಲ್ಲ ನೌಕಾ ಕಮಾಂಡ್‌ಗಳ ವಿಶೇಷ ಪಡೆಗಳಿಂದ ಸಾಮರ್ಥ್ಯ ಪ್ರದರ್ಶನ.
Related Articles
ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗಿ.
ನೌಕಾ ದಿನದ ಹಿನ್ನೆಲೆ
1971ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ನಡೆದ “ಆಪರೇಷನ್ ಟ್ರೈಡೆಂಟ್’ನಲ್ಲಿ ಭಾರತದ ನೌಕಾಪಡೆಯ ಶೌರ್ಯವನ್ನು ಸ್ಮರಿಸುವ ಸಲು ವಾಗಿ ಪ್ರತಿ ವರ್ಷ ಡಿ.4ರಂದು ನೌಕಾ ದಿನವನ್ನಾಗಿ ಆಚರಿ ಸಲಾಗುತ್ತಿದೆ. ಯುದ್ಧದ ವೇಳೆ ನೌಕಾಪಡೆಯು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ದಾಳಿ ನಡೆಸಿ ಹಲವಾರು ನೌಕೆಗಳಿಗೆ ಹಾನಿ ಉಂಟುಮಾಡಿತ್ತು. ಈ ಕಾರ್ಯಾಚರಣೆಯಲ್ಲಿ 300 ಯೋಧರು ಹುತಾತ್ಮರಾಗಿ, 700 ಮಂದಿ ಗಾಯಗೊಂಡಿದ್ದರು.