Advertisement

55 ವರ್ಷಗಳಲ್ಲಿ ಮೊದಲ ಸಲ ಭಾರತ ಟೆನಿಸ್‌ ತಂಡ ಪಾಕಿಸ್ಥಾನಕ್ಕೆ

11:38 PM Jul 27, 2019 | Sriram |

ಹೊಸದಿಲ್ಲಿ: ಕಳೆದ 55 ವರ್ಷಗಳ ಭಾರತ ಟೆನಿಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತಂಡವೊಂದು ಪಾಕಿಸ್ಥಾನಕ್ಕೆ ತೆರಳಿ ಟೆನಿಸ್‌ ಆಡಲು ಸಜ್ಜಾಗಿದೆ. ಡೇವಿಸ್‌ ಕಪ್‌ ಏಶ್ಯ-ಓಸಿಯಾನಿಯ ಗುಂಪು-1ರ ಸ್ಪರ್ಧೆಯ ಅಂಗವಾಗಿ ಭಾರತ ತಂಡ ಪಾಕಿಸ್ಥಾನಕ್ಕೆ ತೆರಳಲಿದೆ. ಸೆ. 14-15ರಂದು ಇಸ್ಲಮಾಬಾದ್‌ನಲ್ಲಿ ಪಾಕ್‌ ತಂಡವನ್ನು ಎದುರಿಸಲಿದೆ.

Advertisement

ಡೇವಿಸ್‌ ಕಪ್‌ ವಿಶ್ವ ಮಟ್ಟದ ಕೂಟವಾಗಿರುವುದರಿಂದ ಯಾವುದೇ ತಂಡಕ್ಕೆ ಇದರಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಆ ತಂಡ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ. ಇದೇ ಕಾರಣದಿಂದ ಪಾಕಿಸ್ಥಾನದಲ್ಲಿ ಡೇವಿಸ್‌ ಕಪ್‌ ಆಡಲು ಭಾರತ ಮುಂದಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next