Advertisement

Terrorism: ಉಗ್ರರಿಗೆ ಅಂತಾರಾಷ್ಟ್ರೀಯ ಸಹಕಾರ- ತನಿಖೆಗೆ ಸಮಿತಿ

11:30 PM Nov 29, 2023 | Pranav MS |

ನವದೆಹಲಿ: ಅಪರಾಧಿಗಳು, ಭಯೋತ್ಪಾದಕರು, ಬಂದೂಕು ಮಾರಾಟಗಾರರ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ರಮ ಬಾಂಧವ್ಯ ಇರುವ ಬಗ್ಗೆ ಅಮೆರಿಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ. ಈ ಬಗ್ಗೆ ತನಿಖೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

Advertisement

ಎರಡೂ ದೇಶಗಳ ನಡುವೆ ಭದ್ರತೆಗೆ ಸಂಬಂಧಿಸಿದ ಮಾತುಕತೆ ವೇಳೆ ಈ ಬಗ್ಗೆ ಪ್ರಸ್ತಾಪವಾಗಿದೆ. ತನಿಖಾ ಸಮಿತಿ ನೀಡುವ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಕೆಲದಿನಗಳ ಹಿಂದಷ್ಟೇ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಎಂಬಾತನನ್ನು ಅಮೆರಿಕದಲ್ಲಿಯೇ ಕೊಲ್ಲುವ ನಿಟ್ಟಿನಲ್ಲಿ ಸಂಚು ನಡೆದಿತ್ತು. ಅದನ್ನು ಅಮೆರಿಕ ಸರ್ಕಾರ ತಡೆಯುವಲ್ಲಿ ಯಶಸ್ವಿಯಾಗಿತ್ತು ಎಂದು “ಪೈನಾನ್ಶಿಯಲ್‌ ಟೈಮ್ಸ್‌’ನಲ್ಲಿ ಪ್ರಕಟಗೊಂಡ ವರದಿಯಲ್ಲಿ ಉಲ್ಲೇಖೀಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗಚಿ ಅಪರಾಧಿಗಳು, ಬಂದೂಕು ವ್ಯಾಪಾರಿಗಳು, ಭಯೋತ್ಪಾದಕರ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಅಕ್ರಮ ಸಂಪರ್ಕದ ಬಗ್ಗೆ ಅಮೆರಿಕ ಮಾಹಿತಿ ನೀಡಿದೆ. ಅದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಏಕೆಂದರೆ ಅದು ನಮ್ಮ ದೇಶದ ಏಕತೆ, ಭದ್ರತೆಗೆ ಧಕ್ಕೆಯಾಗುವ ಅಂಶ ಎಂದು ಹೇಳಿದ್ದಾರೆ. ಕೆನಡಾದಲ್ಲಿ ಸಕ್ರಿಯವಾಗಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಅಮೃತಸರ ಮೂಲದವನು. ಅಮೆರಿಕ ಪ್ರಜೆಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next