Advertisement
ಬೇಸಿಗೆಯ ಧಗೆ ವಿಪರೀತವಾದಾಗ ಆರೋಗ್ಯಕ್ಕೂ ಅಪಾಯ ಸಹಜ. ಬಿಸಿ ಗಾಳಿ ಸೇರಿದಂತೆ ಅನೇಕ ರೀತಿಯ ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಹಾಗಾಗಿ ಬೇಸಿಗೆ ಮುಗಿಯುವವರೆಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸೋದು ಮುಖ್ಯ.
Related Articles
ಎಳನೀರು: ಸುಡುವ ಬಿಸಿಲಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ಉಷ್ಣತೆ ಏರುತ್ತದೆ ಇಂತಹ ಸಂದರ್ಭದಲ್ಲಿ ಎಳನೀರು ಬಹಳ ಉಪಯೋಗಿ.
ಹಲಸಿನ ಹಣ್ಣು: ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.
ಕಲ್ಲಂಗಡಿ ಹಣ್ಣು: ಈ ಹಣ್ಣಿನಲ್ಲಿ 92%ದಷ್ಟು ನೀರಿನಂಶ ತುಂಬಿದೆ. ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ.
ಪಪ್ಪಾಯಿ ಹಣ್ಣು: ಇದರ ಸೇವನೆಯಿಂದ ದೇಹವನ್ನು ತಂಪಾಗಿಟ್ಟು, ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ.
ಕರಬೂಜ ಹಣ್ಣು: ಕಲ್ಲಂಗಡಿಯಂತೆಯೇ ಈ ಹಣ್ಣಿನ ಸೇವನೆಯಿಂದಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ನೀರಿನಂಶ ಧಾರಾಳವಾಗಿರುವ , ದೇಹವನ್ನು ಸದಾ ತಂಪಾಗಿ ಇಡುವ ಕರಬೂಜ ಹಣ್ಣಿನ ಜ್ಯೂಸ್ ಬಾಯಾರಿಕೆ ನೀಗಿಸುವುದಷ್ಟೇ ಅಲ್ಲದೇ ಹೊಟ್ಟೆ ಉರಿಗೂ ರಾಮಾಬಾಣವಾಗಿದೆ.
ಅನಾನಸು ಹಣ್ಣು: ಇದರಲ್ಲಿ ವಿಟಮಿನ್ “ಎ” ಮತ್ತು ಬೆಟಾ ಕ್ಯಾರೋಟಿನ್ ಅಂಶಗಳಿವೆ. ಅನಾನಸು ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು. ಇದರಲ್ಲಿರುವ ನಾರಿನಾಂಶದಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವುದು.
ಮಾವಿನಹಣ್ಣು: ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನ ಹಣ್ಣಿನಲ್ಲಿ ಕಬ್ಬಿಣದಂಶ ಹಾಗೂ ಸೆಲೆನಿಯಮ್ ಅಧಿಕ ಪ್ರಮಾಣದಲ್ಲಿದೆ. ಈ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ನಿಂಬೆ ಹುಣ್ಣು: ಬಾಯಾರಿಕೆಯಾದಾಗ ನಿಂಬು ಪಾನೀಯ ಮಾಡಿ ಕುಡಿದರೆ ಬಾಯಾರಿಕೆ ಕಡಿಮೆಯಾಗುವುದು ಹಾಗೂ ದೇಹವನ್ನು ತಂಪಾಗಿಡುತ್ತದೆ.
ನೆಲ್ಲಿಕಾಯಿ: ಇದರಲ್ಲಿ ವಿಟಮಿನ್ ಸಿ, ಕಬ್ಬಿಣದಂಶ ಹಾಗೂ ರಂಜಕದಂಶ ಅಧಿಕವಾಗಿದೆ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬಿನಾಂಶ ಕರಗುತ್ತದೆ.
Advertisement
ಇಷ್ಟೇ ಅಲ್ಲದೇ ಕೀವಿ ಹಣ್ಣು, ಅಂಜೂರ, ದ್ರಾಕ್ಷಿ, ಬಾಳೆಹಣ್ಣು, ನೇರಳೆ ಹಣ್ಣು ವಿವಿಧ ಹಣ್ಣು ಹಾಗೂ ಅದರ ಪಾನೀಯ ಸೇವನೆಯಿಂದ ಬೇಸಿಗೆಯಲ್ಲಿ ಆರೋಗ್ಯದ ಮೇಲಾಗಬಹುದಾದ ಪರಿಣಾಮಗಳಿಂದ ರಕ್ಷಣೆ ಪಡೆಯಬಹುದಾಗಿದೆ.