Advertisement
“ಎಲ್ಲ ಭಾಷಿಕರೂ ಇರುವ ಗಾಂಧಿನಗರದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಚಾರಕ್ಕೆ ಬಂದರೆ, ಇಲ್ಲಿ ಎರಡು ದೊಡ್ಡ ಸಮಸ್ಯೆಗಳು ಕಂಡುಬರುತ್ತವೆ. ಒಂದು ವಲಸಿಗರ ಹಾವಳಿ, ಮತ್ತೂಂದು ಜಾಗತೀಕರಣದ ದಾಳಿ. ಇವುಗಳ ಮಧ್ಯೆ ಕನ್ನಡ ಉಳಿಸುವುದೇ ದೊಡ್ಡ ಸವಾಲಾಗಿದೆ,’ ಎಂದರು.
Related Articles
Advertisement
ಚಳವಳಿಗಾರರು ಒಟ್ಟಾಗಬೇಕುಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, “ಕನ್ನಡದ ಬಗ್ಗೆ ನಿರ್ಲಕ್ಷ್ಯ ಮತ್ತು ಇಂಗ್ಲಿಷ್ ವ್ಯಾಮೋಹ ಇವೆರಡರ ಎಡಬಿಡಂಗಿ ಬದುಕು ನಮ್ಮದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಉಳಿಯಬೇಕಾದರೆ, ಪ್ರತಿ ಮನೆಯಲ್ಲೂ ಒಬ್ಬ ಕನ್ನಡ ಕಾವಲು ಸಮಿತಿ ಅಧ್ಯಕ್ಷ ಹುಟ್ಟಬೇಕಿದೆ,’ ಎಂದರು. “ಕನ್ನಡಕ್ಕಾಗಿ ವಿವಿಧ ರೀತಿಯಲ್ಲಿ ಹೋರಾಟಗಳು ನಡೆಯತ್ತಿವೆ. ಆದರೆ, ಎಲ್ಲ ಚಳವಳಿಗಾರರು ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಆಗ ಮಾತ್ರ ಕನ್ನಡಕ್ಕೆ ಶಕ್ತಿ ಬರುತ್ತದೆ ಎಂದ ಅವರು, ಸಮ್ಮೇಳನಗಳು ನಿಂತ ನೀರಾಗದೆ, ನಿರಂತರವಾಗಬೇಕು,’ ಎಂದು ಆಶಿಸಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾ ಶೇಖರ್, ಸಾಹಿತಿ ಬೈರಮಂಗಲ ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ, ಗಾಂಧಿನಗರ ಕಸಾಪ ಅಧ್ಯಕ್ಷೆ ಮಂಜುಮಹಾದೇವಮ್ಮ, ಪಾಲಿಕೆ ಸದ್ಯಸರಾದ ಆರ್.ಸಿ. ಸತ್ಯನಾರಾಯಣ, ಲತಾ ಮತ್ತಿತರರು ಹಾಜರಿದ್ದರು. ಇದಕ್ಕೂ ಮುನ್ನ ಸಮ್ಮೇಳನದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಮಲ್ಲೇ ಶ್ವರದ ಕುವೆಂಪು ಪ್ರತಿಮೆ ಬಳಿ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ “ಮುಖ್ಯಮಂತ್ರಿ’ ಚಂದ್ರು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಮೆರವಣಿಗೆಗೆ ಚಾಲನೆ ನೀಡಿದರು.