Advertisement

ಚಾಮುಂಡೇಶ್ವರಿಗೆ ನಾನು, ವರುಣಕ್ಕೆ ನಮ್ಮ ಹುಡುಗ

11:29 AM Jul 15, 2017 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸ್ವಕ್ಷೇತ್ರ ವರುಣ ವಿಧಾನಸಭಾ ಕ್ಷೇತ್ರದ ಪ್ರವಾಸದ ವೇಳೆ ಸಂಪೂರ್ಣವಾಗಿ ಚುನಾವಣೆ ಗುಂಗಿನಲ್ಲಿದ್ದರು, ಹೋದಲ್ಲೆಲ್ಲ ಚಾಮುಂಡೇಶ್ವರಿಯಿಂದ ನಾನು, ವರುಣದಲ್ಲಿ ನಮ್ಮ ಹುಡುಗ (ಡಾ.ಯತೀಂದ್ರ)ನಿಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

Advertisement

ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಹೊಸಕೋಟೆ ಗ್ರಾಮದ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ ಹಾಗೂ ವಸತಿ ಗೃಹ ನಿರ್ಮಾಣ ಮಾಡುವ 2.96 ಕೋಟಿ ರೂ.ಗಳ ಅಂದಾಜು ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸುತ್ತೂರು ಗ್ರಾಮದಲ್ಲಿ 23 ಕೋಟಿ ರೂ.ಗಳ ವೆಚ್ಚದಲ್ಲಿ ಕೆರೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಭೂಮಿ ಪೂಜೆ ನೆರವೇರಿಸಿದರು. ಇದೇ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ 84-ಎ ರಸ್ತೆಯಲ್ಲಿ ಗ್ರಾಮದ ಪರಿಮಿತಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಂಜನಗೂಡು ತಾಲೂಕು ಕೊಂತಯ್ಯನಹುಂಡಿ ಗ್ರಾಮದಲ್ಲಿ 14 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಉದ್ಘಾಟಿಸಿದರು. ತಗಡೂರು ಗ್ರಾಮದಲ್ಲಿ ಸುಮಾರು 3 ಕೋಟಿ ರೂ.ಗಳ ವೆಚ್ಚದಲ್ಲಿ ಎಸ್‌.ಸಿ., ಎಸ್‌.ಟಿ. ಕಾಲೋನಿಯಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸಣ್ಣ ನೀರಾವರಿ ಇಲಾಖೆ ವತಿಯಿಂದ ತಗಡೂರು ಗ್ರಾಮದ ಕೊಮ್ಮಗೆರೆ ಕೆರೆ ನೀರು ತುಂಬಿಸುವ ಯೋಜನೆಗೂ ಗುದ್ದಲಿ ಪೂಜೆ ನೆರವೇರಿಸಿದರು. ವರುಣ ಕ್ಷೇತ್ರದಲ್ಲಿ ಮುಖ್ಯಮಂತ್ರಿಯವರು ಹೋದೆಡೆಯೆಲ್ಲಾ ಜನರು ಬಸ್‌ ಬರುತ್ತಿಲ್ಲ, ಆಸ್ಪತ್ರೆಗೆ ಡಾಕುó ಬರುತ್ತಿಲ್ಲ ಎಂದು ಮನವಿ ಮಾಡುತ್ತಿದ್ದರು,

Advertisement

ಎಲ್ಲರ ಮನವಿಗೂ ಆಸ್ತು ಎನ್ನುತ್ತಿದ್ದ ಸಿದ್ದರಾಮಯ್ಯ ಇನ್ನು 9 ತಿಂಗಳಿಗೆ ಎಲೆಕ್ಷನ್‌ ಬರುತ್ತೆ ಅಷ್ಟರೊಳಗೆ ಎಲ್ಲಾ ಮಾಡಿಸಿಕೊಡ್ತೇನೆ, ನಿಮ್ಮ ಹಳ್ಳಿಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ನಮ್ಮ ಹುಡುಗ (ಡಾ.ಯತೀಂದ್ರ) ಹಾಗೂ ರಾಮಯ್ಯನಿಗೆ ಹೇಳಿ ಎರಡು ತಿಂಗಳಲ್ಲಿ ಮಾಡಿಸಿಕೊಡುತ್ತಾರೆ ಎಂದು ಭರವಸೆ ನೀಡಿದರು.

ತಗಡೂರು ಗ್ರಾಮಕ್ಕೆ ಐಟಿಐ ಕಾಲೇಜು, ಬಸ್‌ ನಿಲ್ದಾಣ, ನೆಮ್ಮದಿ ಕೇಂದ್ರ ಮಂಜೂರಾತಿ, ಕೊಂತಯ್ಯನಹುಂಡಿಗೆ ಬಸ್‌ ವ್ಯವಸ್ಥೆ, ತಗಡೂರಿನ ಆಂಬೇಡ್ಕರ್‌ ಭವನದ ಅಭಿವೃದ್ಧಿ ಮಾಡಿಸಿಕೊಡುವುದಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ಹಾಕಿಸಿಕೊಡುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಸಿಎಂ ಹಸ್ತಾಕ್ಷರ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಂಜನಗೂಡು ತಾಲೂಕು ಕೊಂತಯ್ಯನಹುಂಡಿ ಗ್ರಾಮದಲ್ಲಿ ನಿರ್ಮಿಸಿರುವ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಫ‌ಲಕದ ಮೇಲೆ ಕನ್ನಡದಲ್ಲಿ ಬರೆದಿದ್ದು ಗಮನಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next