Advertisement
10 ವರ್ಷಗಳಿಂದ ಸ್ವಯಂಪ್ರೇರಿತರಾಗಿ ಚುನಾವಣೆ ರಾಜಕೀಯದಿಂದ ದೂರ ಉಳಿದಿದ್ದ ಸಿಂಗ್, ಮುಂದಿನ ವರ್ಷ ನಡೆಯಲಿರುವ ಮಧ್ಯಪ್ರದೇಶ ಚುನಾವಣೆಗೆ ಸ್ಪರ್ಧಿ ಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರದಿಂದಲೇ “ನರ್ಮದಾ ಪರಿಕ್ರಮ’ ಯಾತ್ರೆ ಕೈಗೊಳ್ಳಲಿದ್ದಾರೆ. ಈ ವೇಳೆ ಮಧ್ಯಪ್ರದೇಶದ 100 ವಿಧಾನಸಭೆ ಕ್ಷೇತ್ರಗಳಲ್ಲಿ ಸಿಂಗ್ ಸಂಚರಿಸಲಿದ್ದಾರೆ. ಅವರ ಮನವಿಗೆ ಸ್ಪಂದಿಸಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರ, ಭದ್ರತೆ, ಆ್ಯಂಬುಲೆನ್ಸ್ ಒದಗಿಸುವುದಾಗಿ ಹೇಳಿದೆ. ಮುಖ್ಯ ಮಂತ್ರಿ ಆಗಿದ್ದ ಅವಧಿಯಲ್ಲೇ (1993-2003) ಯಾತ್ರೆಯ ಕನಸು ಕಂಡಿದ್ದಾಗಿ ತಿಳಿಸಿರುವ ಸಿಂಗ್, “ಯಾತ್ರೆಯಲ್ಲಿ ಕಾಂಗ್ರೆಸ್ ಬಾವುಟ, ಪೋಸ್ಟರ್‌ಗಳು, ಬ್ಯಾನರ್, ಕಾಂಗ್ರೆಸ್ ಘೋಷಣೆಗಳು ಇರುವುದಿಲ್ಲ,’ ಎಂದು ಸ್ಪಷ್ಟಪಡಿಸಿದ್ದಾರೆ. Advertisement
ಪಾದಯಾತ್ರೆಗೆ ಆ್ಯಂಬುಲೆನ್ಸ್ ಕೇಳಿದ ದಿಗ್ವಿಜಯ್ ಸಿಂಗ್
10:18 AM Sep 27, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.