Advertisement

Football ಸೂಪರ್‌ಸ್ಟಾರ್‌, ಹಾಲಿವುಡ್‌ ನಟ ಸಿಂಪ್ಸನ್‌ ನಿಧನ

12:29 AM Apr 12, 2024 | Team Udayavani |

ಲಾಸ್‌ ವೇಗಾಸ್‌: ಅಮೆರಿಕದ ಫುಟ್‌ಬಾಲ್‌ ಸೂಪರ್‌ ತಾರೆ ಮತ್ತು ಹಾಲಿವುಡ್‌ ನಟ ಒ.ಜೆ. ಸಿಂಪ್ಸನ್‌ (76) ಅವರು ಕ್ಯಾನ್ಸರ್‌ನೊಂದಿಗೆ ಹೋರಾಡಿ ಎ. 10ರ ರಾತ್ರಿ ನಿಧನ ಹೊಂದಿದರು. ತನ್ನ ಮಾಜಿ ಪತ್ನಿ ಮತ್ತು ಆಕೆಯ ಸ್ನೇಹಿತನನ್ನು ಕೊಂದ ಆರೋಪಗಳಿಂದ ಖುಲಾಸೆಗೊಂಡಿದ್ದ ಸಿಂಪ್ಸನ್‌ ಆಬಳಿಕ ಪ್ರತ್ಯೇಕ ಸಿವಿಲ್‌ ವಿಚಾರಣೆಯಲ್ಲಿ ಹೊಣೆಗಾರರಾಗಿದ್ದಾರೆಂದು ಸಾಬೀತಾಗಿತ್ತು. ಲಾಸ್‌ ವೇಗಾಸ್‌ನಲ್ಲಿ ಸಿಂಪ್ಸನ್‌ ಅವರು ಬುಧವಾರ ರಾತ್ರಿ ನಿಧನ ಹೊಂದಿರುವುದನ್ನು ಅವರ ವಕೀಲ ದೃಢಪಡಿಸಿದ್ದಾರೆ ಮಾತ್ರವಲ್ಲದೇ ಎಕ್ಸ್‌ ಖಾತೆಯಲ್ಲಿ ಸಂದೇಶವೊಂದನ್ನು ಪೋಸ್ಟ್‌ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next