Advertisement

Football:ಏಷ್ಯನ್‌ ಕಪ್‌ನಿಂದ ಭಾರತ ನಿರ್ಗಮನ

11:57 PM Jan 23, 2024 | Team Udayavani |

ಅಲ್‌ ಖೋರ್‌ (ಕತಾರ್‌): ಭಾರತ ಏಷ್ಯನ್‌ ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಿಂದ ಹೊರಬಿದ್ದಿದೆ. ಮಂಗಳವಾರದ ನಿರ್ಣಾಯಕ ಪಂದ್ಯದಲ್ಲಿ ಸಿರಿಯಾ ವಿರುದ್ಧ ಎದುರಾದ ಏಕೈಕ ಗೋಲಿನ ಸೋಲು ಭಾರತಕ್ಕೆ ಕಂಟಕವಾಗಿ ಪರಿಣಮಿಸಿತು.

Advertisement

76ನೇ ನಿಮಿಷದಲ್ಲಿ ಬದಲಿ ಆಟಗಾರ ಒಮರ್‌ ಖರ್ಬಿನ್‌ ಬಾರಿಸಿದ ಗೋಲು ಸಿರಿಯಾಕ್ಕೆ ಗೆಲುವು ತಂದಿತ್ತಿತು.
ಮೂರೂ ಪಂದ್ಯಗಳಲ್ಲಿ ಒಂದೂ ಗೋಲು ಬಾರಿಸದೆ ಸೋಲನುಭವಿಸಿದ ಭಾರತ 4 ತಂಡಗಳ “ಬಿ’
ಗುಂಪಿನಲ್ಲಿ ಕೊನೆಯ ಸ್ಥಾನಿಯಾಯಿತು. ಇದಕ್ಕೂ ಮುನ್ನ 1984, 2011 ಮತ್ತು 2019ರಲ್ಲೂ ಭಾರತಕ್ಕೆ ಏಷ್ಯನ್‌ ಕಪ್‌ ಟಿಕೆಟ್‌ ತಪ್ಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next