Advertisement

Football ಯೂರೋ ಕಪ್‌: ಇಂಗ್ಲೆಂಡ್‌-ನೆದರ್ಲೆಂಡ್ಸ್‌ ಸೆಮಿ ಸೆಣಸಾಟ

12:45 AM Jul 08, 2024 | Team Udayavani |

ಡುಸೆಲ್‌ಡಾರ್ಫ್/ಬರ್ಲಿನ್‌: ಇಂಗ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ತಂಡಗಳು ಯೂರೋ ಕಪ್‌ ಫ‌ುಟ್‌ಬಾಲ್‌ ಸೆಮಿಫೈನಲ್‌ನಲ್ಲಿ ಪರಸ್ಪರ ಸೆಣಸಾಡಲಿವೆ.

Advertisement

ಡುಸೆಲ್‌ಡಾರ್ಫ್ ನಲ್ಲಿ ಸಾಗಿದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಜರ್ಲೆಂಡ್‌ಗೆ 5-3 ಗೋಲು ಗಳ ಸೋಲುಣಿಸಿತು. ಹೆಚ್ಚು ವರಿ ಅವಧಿಯಲ್ಲಿ ಪಂದ್ಯ 1-1 ಸಮಬಲದಲ್ಲಿತ್ತು.

ಬರ್ಲಿನ್‌ನಲ್ಲಿ ನಡೆದ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ 2-1 ಗೋಲುಗಳಿಂದ ಟರ್ಕಿಯನ್ನು ಮಣಿಸಿತು.

ಐದರಲ್ಲೂ ಇಂಗ್ಲೆಂಡ್‌ಗೆ ಯಶಸ್ಸು
ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್‌ನ‌ ಐದೂ ಹೊಡೆತಗಳು ಗುರಿ ಸೇರಿದವು. ಟ್ರೆಂಟ್‌ ಅಲೆಕ್ಸಾಂಡರ್‌ ಅರ್ನಾಲ್ಡ್‌, ಬುಕಾಯೊ ಸಕಾ, ಕೋಲ್‌ ಪಾಮರ್‌, ಜೂಡ್‌ ಬೆಲ್ಲಿಂಗ್‌ಹ್ಯಾಮ್‌ ಮತ್ತು ಇವಾನ್‌ ಟೋನಿ ಗೋಲುವೀರರಾಗಿದ್ದರು.

ನಿಗದಿತ ಅವಧಿಯಲ್ಲಿ ಎರಡೂ ತಂಡ ಗಳು ಗೋಲ್‌ ಲೆಸ್‌ ಡ್ರಾದತ್ತ ಮುಖ ಮಾಡುವ ಸಾಧ್ಯತೆ ನಿಚ್ಚಳವಾಗಿತ್ತು. ಆದರೆ ಪಂದ್ಯದ ಮುಕ್ತಾಯಕ್ಕೆ 15 ನಿಮಿಷ ಇರು ವಾಗ ಬ್ರಿàಲ್‌ ಎಂಬೊಟೊ ಸ್ವಿಸ್‌ಗೆ ಮುನ್ನಡೆ ಒದಗಿಸಿದರು. ಐದೇ ನಿಮಿಷದಲ್ಲಿ ಬುಕಾಯೊ ಸಕಾ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು.

Advertisement

ಟರ್ಕಿಗೆ ಸ್ವ-ಗೋಲು ಶಾಪ!
ನೆದರ್ಲೆಂಡ್ಸ್‌ ಎದುರಿನ ಕ್ವಾರ್ಟರ್‌ ಫೈನಲ್‌ ನಲ್ಲಿ ಟರ್ಕಿಗೆ ನಸೀಬು ಸಂಪೂರ್ಣ ಕೈಕೊಟ್ಟಿತು. ಸಮೆಟ್‌ ಅಕಾಯ್ದಿನ್‌ 35ನೇ ನಿಮಿಷ ದಲ್ಲೇ ಗೋಲು ಸಿಡಿಸಿ ಟರ್ಕಿಗೆ ಮುನ್ನಡೆ ಒದಗಿಸಿದ್ದರು. ಪಂದ್ಯವನ್ನು ಸಮಬಲಕ್ಕೆ ತರಬೇಕಾದರೆ ಡಚ್ಚರ ಪಡೆ 70ನೇ ನಿಮಿಷದ ತನಕ ಕಾಯಬೇಕಾಯಿತು. ಆಗ ಸ್ಟೀಫ‌ನ್‌ ಡಿ ವಿಜ್‌ ಅವರಿಂದ ಗೋಲು ಸಿಡಿಯಲ್ಪಟ್ಟಿತು.

ಆದರೆ ಇಲ್ಲಿಂದಾಚೆ ಟರ್ಕಿ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿತು. 76ನೇ ನಿಮಿಷ ದಲ್ಲಿ ಮರ್ಟ್‌ ಮುಲ್ಡರ್‌ ಸ್ವ-ಗೋಲೊಂದನ್ನು ಬಾರಿಸಿ ನೆದರ್ಲೆಂಡ್ಸ್‌ಗೆ ಉಡುಗೊರೆ ನೀಡಿದರು. ಈ ಗೋಲು ಡಚ್ಚರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

Advertisement

Udayavani is now on Telegram. Click here to join our channel and stay updated with the latest news.

Next