Advertisement

ಪ್ರಸಾದ ಭೋಜನದಿಂದ ಅನಾರೋಗ್ಯ ; 50 ದಾಟಿದ ಒಳರೋಗಿಗಳ ಸಂಖ್ಯೆ

08:54 PM Nov 14, 2021 | Team Udayavani |

ಸಾಗರ: ಇಲ್ಲಿನ ವಿನೋಬಾನಗರದಲ್ಲಿನ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶುಕ್ರವಾರ ನಡೆದ ವರ್ಧಂತಿ ಉತ್ಸವದ ವೇಳೆ ಪ್ರಸಾದ ಭೋಜನ ಸ್ವೀಕರಿಸಿದವರ ಕೆಲವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಒಳರೋಗಿಗಳ ಆರೋಗ್ಯವನ್ನು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಎಚ್.ಹಾಲಪ್ಪ ಹರತಾಳು ಶನಿವಾರ ತಡರಾತ್ರಿ ಭೇಟಿಯಾಗಿ ವಿಚಾರಿಸಿದರು. ಈ ನಡುವೆ ಶನಿವಾರ ದಾಖಲಾದವರಿಗೆ ಚಿಕಿತ್ಸೆ ಮುಂದುವರಿದ್ದು, ಭಾನುವಾರ ಸಹ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸಾದ ಭೋಜನ ಸ್ವೀಕರಿಸಿದ ಮೂರ್ತಿ, ಪ್ರೇಮಾ ದೇವಿದಾಸ್, ಆಶಾ ಕಾರ‍್ಯಕರ್ತೆ ಆಶಾ, ಜಗದೀಶ, ಸವಿತಾ ಸೇರಿದಂತೆ 50ಕ್ಕೂ ಹೆಚ್ಚು ಜನರು ಒಳರೋಗಿಗಳಾಗಿ ದಾಖಲಾಗಿದ್ದಾರೆ.

Advertisement

ಈ ಕುರಿತು ಶಾಸಕ ಹಾಲಪ್ಪ ಮಾತನಾಡಿ, ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಹಾರ ಸ್ವೀಕರಿಸಿದ ಹಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಾಲೂಕಿನ ಗ್ರಾಮಾಂತರದಲ್ಲಿ ಸಹ ಖಾಸಗಿ ಕಾರ‍್ಯಕ್ರಮದಲ್ಲಿ ಆಹಾರ ಸೇವಿಸಿದವರಲ್ಲಿ ಸಮಸ್ಯೆ ಕಾಣಿಸಿಕೊಂಡ ಮಾಹಿತಿ ಇದೆ. ಅನಾರೋಗ್ಯ ಸಮಸ್ಯೆಗೆ ಕಾರಣ ಶೋಧವಾಗಬೇಕು ಎಂದರು.

ಕಾಯಿಲೆ ಕಾಣಿಸಿಕೊಂಡರೆ ಮನೆಯಲ್ಲಿಯೇ ಇರುವ ಬದಲು, ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳಬೇಕು. ನೀರಿನ ಸಮಸ್ಯೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಆದರೆ ಜಿಲ್ಲೆಯಾದ್ಯಂತ ಮೊಸರು, ಮಜ್ಜಿಗೆ ಸಮಾನವಾಗಿ ಪೂರೈಕೆಯಾಗಿದೆ. ಜತೆಗೆ ಮಜ್ಜಿಗೆ, ಮೊಸರು ಸೇವಿಸದವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿಲ್ಲ ಎಂದು ಹೇಳಲಾಗುತ್ತಿದೆ. ಮಾದರಿ ಸಂಗ್ರಹಿಸಿ, ಪರಿಶೀಲನೆಗೆ ಕಳಿಸಲು ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ : ಕಳಪೆ ಕಾಮಗಾರಿ ಹಿನ್ನಲೆ : ತಾಟಗೇರಾದಲ್ಲಿ ಕಿರು ಸೇತುವೆ ಕಾಮಗಾರಿ ಸ್ಥಗಿತ

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಪ್ರಕಾಶ್ ಭೋಸ್ಲೆ, ಡಾ. ಕಾವ್ಯ, ನಗರಸಭಾಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಳೀಯ ವಾರ್ಡ್ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್, ಶ್ರೀಧರಭಟ್ಟ, ಆರೋಗ್ಯ ಇಲಾಖೆ ಸಿಬ್ಬಂದಿ ಮುಂತಾದವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next