Advertisement

ಕ್ಯಾಂಟೀನ್‌ಗಳಲ್ಲಿನ್ನು ತರಹೇವಾರಿ ಆಹಾರ

11:49 AM Feb 25, 2018 | |

ಬೆಂಗಳೂರು: ರಾಜಧಾನಿಯ ಜನತೆಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿರುವ ಇಂದಿರಾ ಕ್ಯಾಂಟೀನ್‌, ಮಾರ್ಚ್‌ 1ರಿಂದ ನಾನಾ ಬಗೆಯ ಸವಿರುಚಿಗಳನ್ನು ಉಣಬಡಿಸಲು ಸಜ್ಜಾಗಿದೆ.

Advertisement

ಕಳೆದ ಆಗಸ್ಟ್‌ 16ರಂದು ಆರಂಭವಾದ ಇಂದಿರಾ ಕ್ಯಾಂಟೀನ್‌ಗಳಿಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಈವರೆಗೆ ಸುಮಾರು 3 ಕೋಟಿ ಜನರು ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸಿದ್ದಾರೆ. ಒಂದೇ ರೀತಿಯ ಉಪಾಹಾರ, ಊಟ ವಿತರಣೆಯಿಂದಾಗಿ ಗ್ರಾಹಕರು ವಿಮುಖರಾಗದಂತೆ ತಡೆಯಲು ಬೆಳಗ್ಗಿನ ಉಪಾಹಾರ, ಮಧ್ಯಾಹ- ರಾತ್ರಿಯ ಊಟದ ಮೆನು ಬದಲಾವಣೆಗೆ ಸಿದ್ಧತೆ ಮಾಡಿಕೊಂಡಿದೆ.

ಬೆಳಗಿನ ತಿಂಡಿ ಬದಲಾಯಿಸಿ, ಮಧ್ಯಾಹ್ನದ ಊಟದೊಂದಿಗೆ ಪಾಯಸ ಇಲ್ಲವೇ ಸಿಹಿ ಪದಾರ್ಥ ನೀಡುವಂತೆ ಹಲವು ಮಂದಿ ಇಂದಿರಾ ಕ್ಯಾಂಟೀನ್‌ ಆ್ಯಪ್‌ ಹಾಗೂ ಕ್ಯಾಂಟೀನ್‌ಗಳಲ್ಲಿನ ಸಲಹಾ ಪೆಟ್ಟಿಗೆ ಮೂಲಕ ಮೂಲಕ ಮನವಿ ಮಾಡಿದ್ದಾರೆ. ಸಾಕಷ್ಟು ಮಂದಿ ಉಪ್ಪಿನಕಾಯಿ ನೀಡುವಂತೆ ಮನವಿ ಮಾಡಿದ್ದಾರೆ.

ಪಾಲಿಕೆಯ ವ್ಯಾಪ್ತಿಯ 198 ವಾರ್ಡ್‌ಗಳ ಪೈಕಿ ಈಗಾಗಲೇ 166 ವಾರ್ಡ್‌ಗಳ ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಣೆಯಾಗುತ್ತಿದೆ. ಇನ್ನು 12 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.  24 ವಾರ್ಡ್‌ಗಳಲ್ಲಿ ಸಂಚಾರಿ ಮೊಬೈಲ್‌ ಕ್ಯಾಂಟೀನ್‌ಗಳು ಆಹಾರ ಪೂರೈಕೆ ಆರಂಭಿಸಿದ್ದು, ಕ್ಯಾಂಟೀನ್‌ ಬಳಸುವವರ ನಿರೀಕ್ಷೆಯಂತೆ ಮಾರ್ಚ್‌ 1ರಿಂದ ಹೊಸ ಉಪಾಹಾರ, ಊಟ ಪರಿಚಯಿಸಲು ಮುಂದಾಗಿದೆ. 

ಸಾರ್ವಜನಿಕರ ಸಲಹೆಯಂತೆ ಪಾಯಾಸ, ಆಲೂ ಪಲಾವ್‌, ಆಲೂ ಕುರ್ಮ, ತಡ್ಕ ಇಡ್ಲಿ, ಮೊಸರು ಸಲಾಡ್‌, ಬಟಾಣಿ ಪಲಾವ್‌, ಪಾಲಾಕ್‌ ಇಡ್ಲಿ, ಸಾಬುದಾನ್‌ ಕೀರು, ವೆಜ್‌ ಪಲಾವ್‌, ಜೀರಾ ಆಲೂ ಪಲಾವ್‌, ಆಲೂ ಬಟಾಣಿ ಕರ್ರಿ ಸೇರಿದಂತೆ ಹೊಸ ತಿಂಡಿ-ಊಟದ ಮೆನು ಕೂಡ ಸಿದ್ಧವಾಗಿದೆ. 

Advertisement

ಬೆಳಗಿನ ಉಪಹಾರ
ಸೋಮವಾರ: ಇಡ್ಲಿ ಅಥವಾ ಪೊಂಗಲ್‌, ಸಾಂಬರ್‌
ಮಂಗಳವಾರ: ಪಾಲಾಕ್‌ ಇಡ್ಲಿ ಅಥವಾ ಅವರೆಕಾಳು ಅವಲಕ್ಕಿ, ಕೆಂಪು ಚಟ್ನಿ
ಬುಧವಾರ: ಇಡ್ಲಿ ಅಥವಾ ಬಿಸಿಬೇಳೆಬಾತ್‌, ಚಟ್ನಿ
ಗುರುವಾರ: ಇಡ್ಲಿ ಅಥವಾ ವಾಂಗಿಬಾತ್‌, ತೆಂಗಿನಕಾಯಿ ಚಟ್ನಿ
ಶುಕ್ರವಾರ: ತಡ್ಕ ಇಡ್ಲಿ, ಬಿಸಿಬೇಳೆ ಬಾತ್‌, ಪುದಿನಾ ಚಟ್ನಿ
ಶನಿವಾರ: ಇಡ್ಲಿ ಅಥವಾ ವೆಜ್‌ ಪಲಾವ್‌, ಟೊಮೆಟೊ ಚಟ್ನಿ
ಭಾನುವಾರ: ಖಾರಾಬಾತ್‌, ಕೇಸರಿಬಾತ್‌, ಕೊಬ್ಬರಿ ಚಟ್ನಿ

ಮಧ್ಯಾಹ್ನದ ಊಟ (ಉಪ್ಪಿನಕಾಯಿ ಎಲ್ಲ ದಿನ ಇರುತ್ತದೆ)
ಅನ್ನ, ತರಕಾರಿ ಸಾಂಬರ್‌ ಅಥವಾ ಬಟಾಣಿ ಪಲಾವ್‌ 
ಅನ್ನ, ತರಕಾರಿ ಸಾಂಬರ್‌, ಪಾಯಸ ಅಥವಾ ಚಿತ್ರಾನ್ನ, ಪಾಯಸ
ಜೀರಾ ರೈಸ್‌, ಆಲೂ ಕುರ್ಮ, ಮೊಸರನ್ನ ಅಥವಾ ವೆಜ್‌ ಪಲಾವ್‌, ಮೊಸರನ್ನ
ಅನ್ನ, ತರಕಾರಿ ಸಾಂಬರ್‌, ಅಕ್ಕಿ ಕೀರು ಅಥವಾ ಪುಳಿಯೊಗರೆ, ಅಕ್ಕಿ ಕೀರು
ಅನ್ನ, ಪಾಲಾಕ್‌ ಸಾಂಬರ್‌, ಸಾಬುದಾನ್‌ ಕೀರು ಅಥವಾ ಟೊಮೊಟೊ ಬಾತ್‌, ಸಾಬುದಾನ್‌ ಕೀರು
ಅನ್ನ, ಆಲುಗಡ್ಡೆ-ಬಟಾಣಿ ಕರ್ರಿ ಮೊಸರನ್ನ ಅಥವಾ ವಾಂಗಿಬಾತ್‌, ಮೊಸರನ್ನ
ಅನ್ನ, ವೆಜ್‌ ಕುರ್ಮ, ಮೊಸರನ್ನ ಅಥವಾ ಮಿಕ್ಸ್‌ ವೆಜ್‌ ಪಲಾವ್‌, ಮೊಸರನ್ನ 

ರಾತ್ರಿಯ ಊಟ 
ಮೊದಲ ಆಯ್ಕೆ 
ಪ್ರತಿದಿನ: ಅನ್ನ, ತರಕಾರಿ ಸಾಂಬರ್‌  ಅಥವಾ ಎರಡನೇ ಆಯ್ಕೆ
ಟೊಮೊಟೊ ಬಾತ್‌
ವಾಂಗಿಬಾತ್‌, ಟೊಮೊಟೊ ಚಟ್ನಿ
ಬಟಾಣಿ ಪಲಾವ್‌
ವೆಜ್‌ ಪಲಾವ್‌, ಟೊಮೆಟೊ ಚಟ್ನಿ
ಆಲೂ ಪಲಾವ್‌
ಬಿಸಿಬೇಳೆ ಬಾತ್‌
ಜೀರಾ ಆಲೂ ಪಲಾವ್‌

ಸಾರ್ವಜನಿಕರ ಸಲಹೆಯಂತೆ ಬೆಳಗಿನ ಉಪಾಹಾರಕ್ಕೆ ಹಲವಾರು ಹೊಸ ತಿಂಡಿಗಳನ್ನು ಸೇರಿಸಲಾಗಿದ್ದು, ಮಧ್ಯಾಹ್ನದ ಊಟದೊಂದಿಗೆ ಪಾಯಸ, ಕೀರು ನೀಡಲು ಮುಂದಾಗಿದ್ದೇವೆ. ಆದರೆ, ಹೊಸ ತಿಂಡಿ ತಯಾರಿಗೆ ಗುತ್ತಿಗೆದಾರರಿಗೆ ಹೆಚ್ಚುವರಿ ಹಣ ನೀಡಲಾಗುವುದಿಲ್ಲ. ಬದಲಿಗೆ ಅವರಿಗೆ ನಿಗದಿಪಡಿಸಿರುವ ಮೊತ್ತದಲ್ಲಿಯೇ ಪೂರೈಸಬೇಕು. ಮಾರ್ಚ್‌ 1 ರಿಂದ ಹೊಸ ಮೆನು ಜಾರಿಗೆ ಬರಲಿದೆ.
-ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next