Advertisement

ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ರೆಡ್ ಕ್ರಾಸ್ ಸಂಸ್ಥೆ ನಿಂದ ಫುಡ್ ಕಿಟ್ ವಿತರಣೆ

07:19 PM Jan 08, 2022 | Team Udayavani |

ಕುಷ್ಟಗಿ: ಕೋವಿಡ್ ಎರಡನೇ ಅಲೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುಡ್ ಕಿಟ್ ಹಾಗೂ ಹೊಲಿಗೆಯಂತ್ರಗಳನ್ನು ವಿತರಿಸಲಾಯಿತು.

Advertisement

ಕುಷ್ಟಗಿಯ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸರಳ  ಕಾರ್ಯಕ್ರಮದಲ್ಲಿ ಕೋವಿಡ್ ನಿಂದ ಮೃತ ಕುಟುಂಬಗಳ ಪೈಕಿ 10 ಜನರಿಗೆ ಪುಡ್ ಕಿಟ್, 5 ಜನರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ತಾಲೂಕಾ ಸರ್ಕಾರಿ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ಕೆಎಸ್.ರಡ್ಡಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಯುದ್ದ ಕಾಲದಲ್ಲಿ ಗಾಯಗೊಂಡವರ ಚಿಕಿತ್ಸೆ ಆರೈಕೆಗಾಗಿ ಹುಟ್ಟಿಕೊಂಡ ಸಂಸ್ಥೆ ಇದೀಗ ಮಾನವೀಯ ಸೇವೆಯಲ್ಲಿ ವಿಶ್ವವ್ಯಾಪಿಯಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲೂ ಕಾರ್ಯನಿರ್ವಹಿಸಿದ ಈ ಸಂಸ್ಥೆ ಕೋವಿಡ್ ನಿಂದ ಮೃತ ಕುಟುಂಬಗಳ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು. ಓಮಿಕ್ರಾನ್ ಬಹುಬೇಗ ಹರಡುವ ಸಾದ್ಯತಗಳಿದ್ದು ಮುನ್ನೆಚ್ಚರಿಕ್ರಮಗಳ ಜಾಗ್ರತೆವಹಿಸಬೇಕೆಂದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಡಾ. ವಿಜಯಕುಮಾರ ಬಿರಾದಾರ, ಡಾ. ರವಿಕುಮಾರ ದಾನಿ, ಡಾ.ಬಸವರಾಜ ವಸ್ತ್ರದ್, ಡಾ.ಮಂಜುನಾಥ ಗೊಂಡಬಾಳ, ಮಹಾಂತಯ್ಯ ಅರಳಲಿಮಠ,ಅಪ್ಪಣ್ಣ ನವಲೆ, ಮಲ್ಲಿಕಾರ್ಜುನ ಬಳಿಗಾರ, ಬಾಲಾಜಿ ಬಳಿಗಾರ, ಸುಬಾನಿ ಆರ್.ಟಿ. ಮತ್ತೀತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next