– ಆರೋಗ್ಯಯುತ ತಿಂಡಿತಿನಿಸುಗಳ ಸಹಿತ ದಿನಕ್ಕೆ ಮೂರು ಬಾರಿ ಊಟ ಮಾಡಿ.
– ಸಮತೋಲಿತ ಆಹಾರವನ್ನು ಸೇವಿಸಿ.
– ಆಹಾರದಲ್ಲಿ ನಾರಿನಂಶ ಹೆಚ್ಚಿರಲಿ, ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ.
– ಬೊಜ್ಜು ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ಸರಿಯಾದ ಪ್ರಮಾಣದಲ್ಲಿ ಸಮತೋಲಿತ ಪೌಷ್ಟಿಕಾಂಶಯುಕ್ತ ಆಹಾರವನ್ನುಸೇವಿಸಬೇಕು.
– ಮಕ್ಕಳ ಬೆಳವಣಿಗೆಗೆ ಮನೆಯಲ್ಲಿ ತಯಾರಿಸಿದ ಆಹಾರಗಳೇ ಶ್ರೇಷ್ಠ.
– ಉಪಾಹಾರವಾಗಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ.
– ದಿನದ ಯಾವುದೇ ಹೊತ್ತಿನ ಊಟ- ಉಪಾಹಾರವನ್ನು ತಪ್ಪಿಸಬೇಡಿ. ಹದಿಹರೆಯ ಎಂಬುದು ಸಕ್ರಿಯ ಜೀವನದ ಒಂದು ಅವಧಿ. ಜಂಕ್ ಆಹಾರಗಳನ್ನು ವರ್ಜಿಸಿ.
– ಆಹಾರಗಳು ವರ್ಣಮಯವಾಗಿದ್ದು, ಆಕರ್ಷಕವಾಗಿರಬೇಕು.
– ಕಾಬೊìನೇಟೆಡ್ ಪಾನೀಯಗಳಂತಹ ಬರೇ ಕ್ಯಾಲೊರಿಯುಳ್ಳ ಪಾನೀಯ, ಆಹಾರಗಳನ್ನು ವರ್ಜಿಸಿ.
– ವಿಟಮಿನ್, ಕ್ಯಾಲ್ಸಿಯಂ ಮತ್ತು ನಾರಿನಂಶದ ಅಗತ್ಯವನ್ನು ಪೂರೈಸಿಕೊಳ್ಳಲು ಎಲ್ಲ ವಿಧವಾದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
– ಯಾವುದೇ ಭಾವನೆಗಳು-ಇಷ್ಟಾನಿಷ್ಟಗಳ ಹಂಗಿಲ್ಲದೆ ಆಹಾರ ಸೇವಿಸಿ.
– ತೆಳು ಮಾಂಸ, ಕೋಳಿಮಾಂಸ, ಮೀನು, ಮೊಟ್ಟೆಗಳು, ಹಾಲು, ಯೋಗರ್ಟ್, ಚೀಸ್‌ನಂತಹ ಹೈನು ಉತ್ಪನ್ನಗಳು, ಬೀಜಗಳು ಮತ್ತು ಕಾಳುಗಳು, ದ್ವಿದಳ ಧಾನ್ಯಗಳು, ಸೋಯಾ ಉತ್ಪನ್ನಗಳು ಇತ್ಯಾದಿಯಾಗಿ ಕ್ಯಾಲೊರಿ ಮತ್ತು ಪ್ರೊಟೀನ್ ಸಮೃದ್ಧ ಆಹಾರವನ್ನು ಸೇವಿಸಿ.
– ಹೆಚ್ಚು ಕೋಳಿಮಾಂಸ ಮತ್ತು ಮೀನು ಸೇವಿಸಿ. ಕೆಂಪು ಮಾಂಸದ ಸೇವನೆ ಕಡಿಮೆ ಮಾಡಿ.
– ಎಲುಬಿನ ಸಾಂದ್ರತೆಯನ್ನು ಹೆಚ್ಚಿಸಿಕೊಳ್ಳಲು ಹದಿಹರೆಯದ ಬಾಲಕಿಯರು ಹೆಚ್ಚು ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ಸೇವಿಸಬೇಕು. ಇದರಿಂದ ಭವಿಷ್ಯದಲ್ಲಿ ಆಸ್ಟಿಯೊಪೊರೊಸಿಸ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
– ಹಸಿರು ಸೊಪ್ಪು ತರಕಾರಿಗಳು, ಬೀನ್ಸ್, ಕಾಳುಗಳು, ಧಾನ್ಯಗಳು, ಬಟಾಣಿ, ಮೊಳಕೆಯೊಡೆಯಿಸಿದ ಹೆಸರು, ಕಡಲೆ ಇತ್ಯಾದಿ, ಬೆಲ್ಲ, ಬೇಳೆಗಳು, ಒಣ ಹಣ್ಣುಗಳು, ರಾಗಿ, ಮೀನು ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿಕೊಂಡರೆ ರಕ್ತ ಹೀನತೆಯನ್ನು ತಡೆಗಟ್ಟಬಹುದು.
– ನೀರು ಕುಡಿಯಿರಿ. ಹೆಚ್ಚು ಸಕ್ಕರೆ ಇರುವ ಆಹಾರಗಳನ್ನು ಕಡಿಮೆ ಮಾಡಿ. ಹಣ್ಣುಗಳ ಜ್ಯೂಸ್‌ನಲ್ಲಿ ಹೆಚ್ಚು ಕ್ಯಾಲೊರಿ ಇರಬಹುದಾದ್ದರಿಂದ ಮಿತವಾಗಿ ಸೇವಿಸಿ. ಇಡಿಯಾದ ತಾಜಾ ಹಣ್ಣುಗಳು ಹೆಚ್ಚು ಯೋಗ್ಯ ಆಯ್ಕೆ.
– ಮನೆಯಲ್ಲಿಯೇ ಪೌಷ್ಟಿಕಾಂಶಯುಕ್ತ ಆಹಾರವನ್ನು ರುಚಿಯಾಗಿ ಅಡುಗೆ ಮಾಡಿ ಉಣ್ಣುವಂತೆ ಹೆತ್ತವರು ಮಕ್ಕಳನ್ನು ಪ್ರೋತ್ಸಾಹಿಸಬೇಕು.
– ವ್ಯಾಯಾಮ ಮಾಡಬೇಕು, ಹೊರಾಂಗಣ ಆಟಗಳನ್ನು ಆಡಬೇಕು ಮತ್ತು ಪ್ರತಿದಿನವೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು. ವ್ಯಾಯಾಮದಿಂದ ಹಸಿವು ನಿಯಮಿತವಾಗಿ ಉತ್ತಮ ಆಹಾರ ಯೋಜನೆ ಅನುಸರಿಸಲು ಸಾಧ್ಯವಾಗುತ್ತದೆ.
Advertisement