Advertisement

ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

07:39 PM Apr 27, 2019 | Sriram |

ಮುಂದುವರಿದುದು– ಹದಿಹರೆಯದಲ್ಲಿ ಝಿಂಕ್‌ ಕೂಡ ಅತ್ಯಂತ ಮುಖ್ಯವಾದ ಪೌಷ್ಟಿಕಾಂಶಗಳಲ್ಲಿ ಒಂದಾಗಿದೆ. ಅದು ದೈಹಿಕ ಬೆಳವಣಿಗೆ ಮತ್ತು ಲೈಂಗಿಕ ಪ್ರೌಢತೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

Advertisement

ಹದಿಹರೆಯದಲ್ಲಿ ಉಂಟಾಗುವ ಕ್ಷಿಪ್ರ ಬೆಳವಣಿಗೆ ಮತ್ತು ಹಾರ್ಮೋನ್‌ ಬದಲಾವಣೆಗಳಿಗೆ ಸ್ಪಂದಿಸುವುದರಿಂದ ಸೀರಮ್‌ ಝಿಂಕ್‌ ಪ್ರಮಾಣವು ಕಡಿಮೆಯಾಗುತ್ತದೆ. 9ರಿಂದ 13 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರಿಗೆ ಶಿಫಾರಸು ಮಾಡಲಾದ ಝಿಂಕ್‌ ಸೇವನೆಯ ಪ್ರಮಾಣವು ದಿನಕ್ಕೆ 9 ಮಿ.ಗ್ರಾಂ ಆಗಿದೆ. 14ರಿಂದ 18 ವರ್ಷ ವಯೋಮಾನದ ಬಾಲಕಿಯರಿಗೆ ಶಿಫಾರಸು ಮಾಡಲಾದ ಝಿಂಕ್‌ ಸೇವನೆಯ ಪ್ರಮಾಣವು ದಿನಕ್ಕೆ 9 ಮಿ.ಗ್ರಾಂ ಆಗಿದೆ. ಕೆಂಪು ಮಾಂಸ, ಚಿಪ್ಪು ಮೀನು, ಇಡೀ ಧಾನ್ಯಗಳಲ್ಲಿ ಝಿಂಕ್‌ ಹೇರಳವಾಗಿರುತ್ತದೆ. ಅನೇಕ ಉಪಾಹಾರ ಸೀರಿಯಲ್‌ಗ‌ಳಲ್ಲಿ ಝಿಂಕ್‌ ಸೇರಿಸಿರಲಾಗುತ್ತದೆ. ಝಿಂಕ್‌ ಮತ್ತು ಕಬ್ಬಿಣಾಂಶಗಳು ದೇಹ ಹೀರಿಕೆಯ ಸಂದರ್ಭದಲ್ಲಿ ಪರಸ್ಪರ ಸ್ಪರ್ಧಿಸುತ್ತವಾದ್ದರಿಂದ ಒಂದನ್ನು ಹೆಚ್ಚು, ಇನ್ನೊಂದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಕಡಿಮೆ ಸೇವಿಸಿದ್ದರ ದೇಹ ಹೀರಿಕೆಯು ಕಡಿಮೆಯಾಗುವ ಸಾಧ್ಯತೆ ಇದೆ.

ಡಿಎನ್‌ಎ, ಆರ್‌ಎನ್‌ಎ ಮತ್ತು ಪ್ರೊಟೀನ್‌ ಸಂಯೋಜನೆಯಲ್ಲಿ ಫೊಲೇಟ್‌ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಹೀಗಾಗಿ, ವಯಸ್ಸಿಗೆ ಬರುವ ಸಂದರ್ಭದಲ್ಲಿ ಹದಿಹರೆಯದವರಿಗೆ ಫೊಲೇಟ್‌ನ ಅಗತ್ಯ ಸಾಕಷ್ಟಿರುತ್ತದೆ. ಸೇವನೆಗೆ ಸಿದ್ಧ ಸೀರಿಯಲ್‌ಗ‌ಳು, ಕಿತ್ತಳೆ, ಬ್ರೆಡ್‌, ಹಾಲು ಮತ್ತು ಒಣ ಬೀನ್ಸ್‌ ಯಾ ಬೇಳೆಗಳಲ್ಲಿ ಫೊಲೇಟ್‌ ಸಮೃದ್ಧ ಪ್ರಮಾಣದಲ್ಲಿರುತ್ತದೆ.

ನಾನೇನು ಸೇವಿಸಬೇಕು?
ದಿನಕ್ಕೆ ಮೂರು ನಿಯಮಿತ ಊಟಗಳು ಮತ್ತು ಕೆಲವು ಉಪಾಹಾರಗಳು ನಿಮ್ಮ ಪೌಷ್ಟಿಕಾಂಶ ಅಗತ್ಯಗಳನ್ನು ಪೂರೈಸುವುದಕ್ಕೆ ಸಾಕು. ಊಟ- ಉಪಾಹಾರಗಳನ್ನು ತಪ್ಪಿಸಿಕೊಳ್ಳುವುದರಿಂದ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಕಾಬೊìಹೈಡ್ರೇಟ್‌ಗಳು ಕೂಡ ತಪ್ಪಿ ಹೋಗಿ ನಿಮಗೆ ಶಕ್ತಿಯ ಕೊರತೆ ಅನುಭವಕ್ಕೆ ಬರಬಹುದು ಅಥವಾ ಏಕಾಗ್ರತೆ ಸಾಧಿಸುವುದು ಕಷ್ಟವಾಗಬಹುದು.

ನಿಮ್ಮ ಮಿದುಳು ಮತ್ತು ಸ್ನಾಯು ಗಳಿಗೆ ಶಕ್ತಿ ಒದಗಿಸುವ ಆಹಾರಗಳೆಂದರೆ ಬ್ರೆಡ್‌ಗಳು, ಕಾಳುಗಳು ಮತ್ತು ದ್ವಿದಳ ಧಾನ್ಯಗಳು. ಅವು ವಿಟಮಿನ್‌ ಬಿ ಮತ್ತು ನಾರಿನಂಶಗಳ ಸಮೃದ್ಧ ಮೂಲಗಳು ಕೂಡ ಆಗಿವೆ. ಸಾಕಷ್ಟು ಪ್ರಮಾಣದಲ್ಲಿ ಕಾಬೊìಹೈಡ್ರೇಟ್‌ ಹೊಟ್ಟೆ ಸೇರದೆ ಇದ್ದರೆ ದಣಿವು ಉಂಟಾಗುತ್ತದೆ. ಪ್ರತೀ ಊಟ – ಉಪಾಹಾರದಲ್ಲಿಯೂ ಕಾಬೊìಹೈಡ್ರೇಟ್‌ ಸೇರಿಸಿಕೊಳ್ಳಲು ಮರೆಯದಿರಿ.

Advertisement

-ಮುಂದುವರಿಯುವುದು

Advertisement

Udayavani is now on Telegram. Click here to join our channel and stay updated with the latest news.

Next