Advertisement

ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ಈ ಸಲಹೆಗಳನ್ನು ಪಾಲಿಸಿ

11:26 PM Feb 17, 2020 | Sriram |

ಮಗುವಿಗೆ ತಾಯಿಯ ಹಾಲು ಶ್ರೇಷ್ಠವಾದರೂ ಅದನ್ನು ಆರು ತಿಂಗಳವರೆಗೆ ಮಾತ್ರ ಕೊಡಬೇಕು. ಅನಂತರ ಮಗುವಿಗೆ ಹೆಚ್ಚಿನ ಆಹಾರದ ಆವಶ್ಯಕತೆ ಇರುವುದರಿಂದ ಎದೆ ಹಾಲಿನೊಂದಿಗೆ ಕೆಲವು ಲಘು ಆಹಾರವನ್ನು ನೀಡಲು ಪ್ರಾರಂಭಿಸಿದ್ದರೆ ಒಳಿತು. ಆದರೆ ಇದಕ್ಕಿಂತ ಮೊದಲು ಯಾವ ಆಹಾರ ಪದಾರ್ಥಗಳನ್ನು ನೀಡಬೇಕು, ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಉತ್ತಮ. ಹಾಗಾಗಿ ಮಗುವಿಗೆ ನೀಡಬಹುದಾದ ಆಹಾರ ಕ್ರಮದ ಮಾಹಿತಿ ಇಲ್ಲಿದೆ.

Advertisement

ಅಕ್ಕಿ ಗಂಜಿ
ಅಕ್ಕಿಯನ್ನು ಹುರಿದು ಮೂರರಿಂದ ನಾಲ್ಕು ಗಂಟೆ ನೆನೆಸಿ ಅನ್ನ ಮಾಡಿ ಅದರ ಮೇಲೆ ಬರುವ ಗಂಜಿಗೆ ಹಾಲು ಮತ್ತು ತುಪ್ಪ ಸೇರಿಸಿ ಎರಡು ಮೂರು ಚಮಚೆಯಷಮಗುವಿಗೆ ಆಹಾರ ಕೊಡಲು ಆರಂಭಿಸಿ. ಕ್ರಮೇಣ ಆಹಾರದ ಪ್ರಮಾಣ ಮತ್ತು ಅವಧಿಯನ್ನು ಹೆಚ್ಚಿಸುತ್ತ ಹೋಗಬೇಕೇ ವಿನಾ ದಿಢೀರ್‌ ಅಂತ ಹೆಚ್ಚು ಆಹಾರ ನೀಡಬಾರದು. ಇದಾದ ಒಂದು ವಾರದ ನಂತರ ರಾಗಿ ಆಹಾರ ಕೊಡಲು ಆರಂಭಿಸಿ.

ರಾಗಿ ಗಂಜಿ
ರಾಗಿಯನ್ನು ಚೆನ್ನಾಗಿ ತೊಳೆದು ಏಳೆಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಬಟ್ಟೆಯಲ್ಲಿ ಕಟ್ಟಿಡಿ. ಚೆನ್ನಾಗಿ ಮೊಳಕೆ ಬಂದ ರಾಗಿಯನ್ನು ಹತ್ತಿಯ ಬಟ್ಟೆಯಿಂದ ಮುಚ್ಚಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ ಬಟ್ಟೆಯಲ್ಲಿ ಸೋಸಿ ಡಬ್ಬದಲ್ಲಿ ತೆಗೆದಿಡಿ. ಈ ಹಿಟ್ಟನ್ನು ಹಾಲಿಗೆ ಬೆರೆಸಿ ಗಂಜಿ ಮಾಡಿ ಕೊಡಿ.

ಉತ್ತತ್ತಿ ಮತ್ತು ಬಾದಾಮ್‌
ಮಗುವಿಗೆ 8 ತಿಂಗಳಾದಾಗ ಉತ್ತತ್ತಿ, ನೆನಸಿದ ಬಾದಾಮ್‌ ಮತ್ತು ಹಾಲಿನ ಪೇಸ್ಟನ್ನು ಅನಂತರ ಕ್ರಮೇಣ ಸೊಪ್ಪು ಕುದಿಸಿದ ನೀರು, ಬೇಳೆಯ ಗಂಜಿಯನ್ನು ಮೆದು ಅನ್ನದೊಂದಿಗೆ ಕೊಡಿ.

ತರಕಾರಿ ಮತ್ತು ಹಣ್ಣು
9 ತಿಂಗಳ ಮಗುವಿಗೆ ಗಜ್ಜರಿ, ಕೆಂಪು ಗೆಡ್ಡೆ, ಸೇಬು ಹಣ್ಣನ್ನು ಹಬೆಯಲ್ಲಿ ಬೇಯಿಸಿ ಕೊಡಿ.10 ತಿಂಗಳಿಗೆ ಗೋಧಿ, ತೊಗರಿ, ಹೆಸರುಬೇಳೆ ನೆನೆಸಿ ಒಣಗಿಸಿದ ಪುಡಿಯನ್ನು ಗಂಜಿಯೊಂದಿಗೆ ಬೇಯಿಸಿ ಕೊಡಿ.

Advertisement

-ಮಗುವಿಗೆ ಬೇಸಗೆಯಲ್ಲಿ ಹಣ್ಣಿನ ರಸ ಮತ್ತು ಎಳನೀರು ಕೊಡಿ.
-ಶಿಶುವಿನ ದೈಹಿಕ ಪಚನಕ್ರಿಯೆಗೆ ಅನುಸಾರವಾದ ಆಹಾರ ನೀಡಿ.
-ಶೀತ, ಉಷ್ಣ, ಪಿತ್ತಕಾರಕ ಆಹಾರ ಕೊಡಬೇಡಿ.
-ಇಡ್ಲಿ, ದೋಸೆ, ರೊಟ್ಟಿಯನ್ನು
-ಹಾಲಿನೊಂದಿಗೆ ಮೆತ್ತಗೆ ಮಾಡಿ ಕೊಡಿ.
-ಆಯಾ ಕಾಲಕ್ಕೆ ಲಭ್ಯವಿರುವ ಹಣ್ಣುಗಳನ್ನು ಮಾತ್ರ ಕೊಡಿ.
-ಉಪ್ಪು, ಸಿಹಿಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿ.
-ಮಗುವಿಗೆ ಶೀತವಾಗುವ, ಪಚನವಾಗದ ಮತ್ತು ಹುಳಿ ಆಹಾರ ನೀಡಬೇಡಿ.
-ಬೇಕರಿ ತಿಂಡಿ, ಬಿಸ್ಕಿಟ್‌, ಜಂಕ್‌ ಫ‌ುಡ್‌ಗಳನ್ನು ಕೊಡಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next