Advertisement

ಡಾ.ಅಂಬೇಡ್ಕರ್‌ ತತ್ವ  ಆದರ್ಶ ಪಾಲಿಸಿ

04:45 PM May 16, 2022 | Team Udayavani |

ಕೊಳ್ಳೇಗಾಲ: ಮನುಷ್ಯ ಮನುಷ್ಯನನ್ನು ಪ್ರೀತಿಸುವ ಗುಣ ಬೆಳೆಸಿಕೊಂಡಾಗ ಮಾತ್ರಭಾವೈಕ್ಯತೆ ಮೂಡಲು ಸಾಧ್ಯ ಎಂದುಮೈಸೂರಿನ ಉರಿಲಿಂಗಿ ಪೆದ್ದಿಮಠದ ಡಾ. ಜ್ಞಾನಪ್ರಕಾಶ್‌ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಹಳೇ ಅಣಗಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಮುಂಭಾಗ ಏರ್ಪಡಿಸಿದ್ದ “ಒಂದಾಗಿ ಬಾಳ್ಳೋಣ ಭಾವೈಕ್ಯತೆ’ ಕಾರ್ಯಕ್ರಮಉದ್ಘಾಟಿಸಿ ಬಳಿಕ ಗ್ರಾಮದ ನಾಟಕ ಕಲಾವಿದರು, ನಿವೃತ್ತ, ಹಾಲಿ ನೌಕರರು, ಎಸ್ಸೆಸ್ಸೆಲ್ಸಿ,ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವಆದರ್ಶವನ್ನು ಪ್ರತಿಯೊಬ್ಬರು ಪಾಲನೆ ಮಾಡಿಗ್ರಾಮಕ್ಕೆ ಕೀರ್ತಿ ತರಬೇಕೆಂದು ತಿಳಿಸಿದರು.12ನೇ ಶತಮಾನದಲ್ಲಿ ಬಸವಣ್ಣನವರುಸಮಾನತೆ ಬೀಜ ಬಿತ್ತಿ ಕ್ರಾಂತಿ ಮಾಡಿದ್ದರು.ಬುದ್ಧನ ಶಾಂತಿಯ ದೀಪ, ಬಸವಣ್ಣನವರ ಕ್ರಾಂತಿಯ ದೀಪ, ಅಂಬೇಡ್ಕರ್‌ ಅವರ ಜ್ಞಾನದದೀಪ ಆರದಂತೆ ಗ್ರಾಮದ ಪ್ರತಿಯೊಬ್ಬರುಕಾಪಾಡಿಕೊಳ್ಳಬೇಕು. ನಾವೆಲ್ಲರೂ ಸಾಮರಸ್ಯದಿಂದ ಬದುಕಿ, ಮನುಷ್ಯ, ಮನುಷ್ಯರ ನಡುವೆಕಂದಕ ಇಟ್ಟುಕೊಳ್ಳಬಾರದು ಎಂದು ವಿವರಿಸಿದರು. ಬೆಂಗಳೂರಿನ ಕೆಎಸ್‌ಐಡಿಸಿಎಲ್‌

ಪ್ರಧಾನ ವ್ಯವಸ್ಥಾಪಕ ಹಾಗೂ ಚಾಮರಾಜನಗರ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮಾತನಾಡಿ, ಸಮಾಜದಲ್ಲಿ ಬುದ್ಧಿವಂತರು, ವಿದ್ಯಾವಂತರು ಹೆಚ್ಚಾಗಿದ್ದಾರೆ. ಆದರೆ, ಅವರಲ್ಲಿ ಹೃದಯವಂತಿಕೆ ಕ್ಷಿಣೀಸುತ್ತಿದೆ. ವಿದ್ಯೆ ಕಲಿತವರು ಸ್ವಾರ್ಥಿಗಳಾಗುತ್ತಿದ್ದಾರೆ. ವಿದ್ಯೆ ವಿನಯ ಕಲಿಸುವ ಸಾಧನ.ಆದರೆ, ನಾವು ಅಹಂಕಾರ, ಸ್ವಪ್ರತಿಷ್ಠೆ, ಒಣ ಪ್ರತಿಷ್ಠೆಗೆ ದಾಸರಾಗುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎನ್‌.ಮಹೇಶ್‌, ಜಿಲ್ಲಾ ಪೊಲೀಸ್‌ ಅಪರ ವರಿಷ್ಠಾಧಿಕಾರಿ ಸುಂದರರಾಜು, ಬೆಂಗಳೂರು ವಾಣಿಜ್ಯ ತೆರಿಗೆ ಅಧಿಕಾರಿ ಎಂ.ನಂಜುಂಡಸ್ವಾಮಿ, ಚಾಮರಾಜನಗರ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ, ನಿವೃತ್ತ ಪ್ರಾಂಶುಪಾಲ ಕೆಂಪರಾಜು, ಮುಖಂಡರಾದ ಕೃಷ್ಣಮೂರ್ತಿ, ರμಕ್‌ಅಹಮ್ಮದ್‌, ಛಲವಾದಿ ಮಹಾಸಭಾದ ಅಧ್ಯಕ್ಷಅಣಗಳ್ಳಿ ಬಸವರಾಜು, ಬಸವಣ್ಣ, ಆರ್‌ಟಿಐಕಾರ್ಯಕರ್ತ ದಶರಥ್‌, ಕಾಂತರಾಜು, ರವಿ, ಲೋಕೇಶ್‌, ಬಾಬು, ಕಾಶಿ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next