Advertisement

ಡಾ|ಅಂಬೇಡ್ಕರ್ ಚಿಂತನೆ ಪಾಲಿಸಿ : ಮಹಾರಾಜನವರ

07:38 PM Apr 23, 2021 | Team Udayavani |

ಶಿರೂರ : ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಬದಲಾವಣೆ ಸಾಧ್ಯ ಎಂದು ಕರ್ನಾಟಕ ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.

Advertisement

ಗ್ರಾಮದ ಡಾ| ಬಿ.ಆರ್‌.ಅಂಬೇಡ್ಕರ್‌ ಯುವಕ ಸಂಘ ಹಮ್ಮಿಕೊಂಡಿದ್ದ ಡಾ| ಅಂಬೇಡ್ಕರ್‌ ಜಯಂತಿ ಹಾಗೂ ಸಾವಿತ್ರಿಬಾಯಿ ಫುಲೆ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ವಿಚಾರಧಾರೆ ಅರಿತುಕೊಳ್ಳಬೇಕು ಎಂದರು. ಡಾ| ಅಂಬೇಡ್ಕರ್‌ ಕೇವಲ ವ್ಯಕ್ತಿಯಲ್ಲ, ಶಕ್ತಿ, ಜ್ಞಾನದ ಸಮುದ್ರ. ಆ ಸಮುದ್ರದಲ್ಲಿನ ಒಂದಿಷ್ಟು ಜ್ಞಾನವನ್ನು ಪಡೆದು ಬದಲಾವಣೆ ಕಂಡುಕೊಳ್ಳಬೇಕು. ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಧನ್ನೂರ ಕಾಲೇಜಿನ ಉಪನ್ಯಾಸಕಿ ಪ್ರಿಯದರ್ಶಿನಿ ಅಮದಿಹಾಳ, ಅಂಬೇಡ್ಕರ್‌ ಚಿಂತನೆಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ಅವರನ್ನು ಆರಾ ಧಿಸುವುದಕ್ಕಿಂತ ಅವರ ಚಿಂತನೆ ಅನುಸರಿಸಿ ನಡೆಯಬೇಕು ಎಂದರು. ಗ್ರಂಥಾಲಯ ಉದ್ಘಾಟಿಸಿದ ಪಿಎಸ್‌ಐ ರೇಣುಕಾ ಹಳ್ಳಿ, ಪುಸ್ತಕಗಳನ್ನು ಓದಿ, ಜ್ಞಾನ ಸಂಪಾದಿಸಿ ಸಮಾಜಕ್ಕೆ ಮಾದರಿಯಾಗಿ, ಯುವಕರಿಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು. ಕರ್ನಾಟಕ ಭೀಮಸೇನಾ ಸಮಿತಿ ರಾಜ್ಯಾಧ್ಯಕ್ಷ ಬಿ.ಡಿ. ಮಾದರ ಮಾತನಾಡಿ, ಡಾ| ಅಂಬೇಡ್ಕರ್‌ ಚಿಂತನೆಗಳನ್ನು ಮನದಲ್ಲಿ ಬಿತ್ತಿಕೊಳ್ಳಬೇಕು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಬಿ.ಎಂ. ಚಲವಾದಿ ಮಾತನಾಡಿ, ಸಮಾಜದ ಯುವಕರು ಗ್ರಂಥಾಲಯ ಆರಂಭಿಸಿ ಓದುವ ಹವ್ಯಾಸ ಬೆಳೆಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ. ಗ್ರಂಥಾಲಯಕ್ಕೆ 50 ಸಾವಿರ ರೂ. ಬೆಲೆಯ ಪುಸ್ತಕಗಳನ್ನು ಕೊಡುವುದಾಗಿ ಹೇಳಿದರು. ಚಿಂತಕ ಶರಣಪ್ಪ ಅಮದಿಹಾಳ, ಗ್ರಾಪಂ ಅಧ್ಯಕ್ಷ ವೇಮರಡ್ಡಿ ಯಡಹಳ್ಳಿ, ತಾಪಂ ಮಾಜಿ ಸದಸ್ಯ ಬಿ.ಆರ್‌.ಯಡಹಳ್ಳಿ, ಆನಂದ ಜಾಲಗಾರ, ಯಮನಪ್ಪ ಗೊರಬಾಳ, ಸಿ.ಎನ್‌.ಬಾಳಕ್ಕನವರ, ಶ್ರೀನಿವಾಸ ದೊಡಮನಿ, ಪ್ರವೀಣ ಹೊನಕೇರಿ, ರಾಘವೇಂದ್ರ ಮುಗಳಖೋಡ, ಗ್ರಾಪಂ ಸದಸ್ಯರು, ಚಲವಾದಿ ಸಮಾಜದ ಹಿರಿಯರು ಅತಿಥಿಗಳಾಗಿ ಹಾಜರಿದ್ದರು. ಪರಶುರಾಮ ಅಚನೂರ ಸ್ವಾಗತಿಸಿದರು. ಜಗದೀಶ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್‌.ಬಿ .ಚಲವಾದಿ ಮತ್ತು ಕೆ.ಸಿ.ಚಲವಾದಿ ನಿರೂಪಿಸಿದರು. ರವಿ ಚಲವಾದಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next