Advertisement

ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ; ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಅನುದಾನ: ಸಿದ್ದರಾಮಯ್ಯ

11:36 PM Jan 27, 2023 | Team Udayavani |

ಮೈಸೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಜಾನಪದ ಕಲೆ ಮತ್ತು ಕಲಾವಿದರಿಗೆ ವಿಶೇಷ ಅನುದಾನ ನೀಡಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಕನ್ನಡ ಜಾನಪದ ಪರಿಷತ್‌ ವತಿಯಿಂದ ಮಾನಸ ಗಂಗೋತ್ರಿಯ ಲಲಿತಕಲಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನಪದ ಕ್ಷೇತ್ರದ ಸಾಧಕರಿಗೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಜಾನಪದ ಪರಂಪರೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತೋಟೇಗೌಡ ಸಿದ್ಧನಕೊಪ್ಪಲು ಅವರ ಸೃಷ್ಟಿ, ಮೋಹನ್‌ ಪಾಳೇಗಾರ ಅವರ ಮದರಂಗಿ ಜಾನಪದ ಕಥೆಗಳು ಹಾಗೂ ವೆಂಕಟಗಿರಿ ಠಾವುಗೋಡ್ಲು ಅವರ ಅಪರೂಪದ ಒಡವೆ ಕೃತಿ ಬಿಡುಗಡೆ ಮಾಡಲಾಯಿತು.

ಪ್ರೊ| ಅಂಬಳಿಕೆ ಹಿರಿಯಣ್ಣ (ಶಿವಮೊಗ್ಗ), ಪೊ›| ನಂಜಯ್ಯ ಹೊಂಗನೂರು (ಮೈಸೂರು), ಡಾ| ಸಿ.ಬಿ. ಹೊನ್ನು ಸಿದ್ಧಾರ್ಥ (ಬೆಂಗಳೂರು ನಗರ), ಡಾ| ಕುರುವ ಬಸವರಾಜ್‌ (ರಾಮನಗರ), ಡಾ| ಚಲುವರಾಜು (ವಿಜಯನಗರ), ಕಂಸಾಳೆ ಮಾದೇವ (ಮೈಸೂರು), ಸೋಬಾನೆ ಕೃಷ್ಣೇಗೌಡ (ಮಂಡ್ಯ), ತಾರಾಬಾಯಿ (ಕಲಬುರಗಿ), ನಂದಿಧ್ವಜ ಮಹಾದೇವಪ್ಪ (ಮೈಸೂರು), ಬಸವರಾಜ್‌ (ಚಾಮರಾಜನಗರ), ಬಸವರಾಜ್‌ ನೆಲದಾಳ್‌ (ರಾಯಚೂರು), ಮೌಲಾಸಾಬ ನಾನಾಸಾನಬ ಜಹಗೀರ್ದಾರ (ವಿಜಯಪುರ), ಸುಳ್ಳಿಮಾಡ ಗೌರಿ ನಂಜಪ್ಪ (ಕೊಡಗು), ಕನರಾಡಿ ವಾದಿರಾಜ ಭಟ್‌ (ಉಡುಪಿ), ಜಾಲಮರ ಸುಬ್ರಾಯ (ಚಿಕ್ಕಮಗಳೂರು) ದೊಡ್ಡಕ್ಕ (ತುಮಕೂರು), ಮುನಿವೆಂಕಟಮ್ಮ (ಕೋಲಾರ), ಮÇÉೇಶಪ್ಪ ಬಸವಣ್ಣೆಪ್ಪ ಜೋಗಿ (ಉತ್ತರ ಕನ್ನಡ), ಭೀಮಶಿ ಘಂಟಿ ಸಾ.ಶಿರೂರ (ಬಾಗಲಕೋಟೆ), ಸುರೇಶ್‌ ಶೆಟ್ಟಿ ಯೆಯ್ನಾಡಿ (ಮಹಾರಾಷ್ಟ್ರ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next