Advertisement

ಕಣ್ಮರೆಯಾಗುತ್ತಿರುವ ಜನಪದ ಉಳಿವಿಗಾಗಿ ಶ್ರಮಿಸಬೇಕಾಗಿದೆ; ಜೀವನಸಾಬ್ ಬಿನ್ನಾಳ

10:01 AM Nov 28, 2022 | Team Udayavani |

ದೋಟಿಹಾಳ: ಜೀವನದ ಮೌಲ್ಯಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಪಸರುವಂತೆ ಮಾಡುತ್ತಿದ್ದ ಜಾನಪದ ಕಲೆ ಮತ್ತು ಗೀತೆಗಳು ಇಂದಿನ ಜಾಗತೀಕರಣದ ಪ್ರಭಾವದಿಂದಾಗಿ ಕಣ್ಮರೆಯಾಗುತ್ತಿವೆ ಎಂದು ಜಾನಪದ ಗಾಯಕ ಜೀವನಸಾಬ್ ವಾಲಿಕರ್ ಬೇಸರ ವ್ಯಕ್ತಪಡಿಸಿದರು.

Advertisement

ಇತ್ತೀಚಿಗೆ ಗೋತಗಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅಲ್ಲಿಯ ಜನಪದ ಹಾಗೂ ಒಡವು ಹೇಳುವ ಮಹಿಳೆಯರನ್ನು ಸೇರಿಸಿ ಅವರಿಂದ ನಶಿಸಿ ಹೋಗುವ ಜನಪದ ಗೀತೆಗಳನ್ನು ಹಾಗೂ ಒಡಪುಗಳನ್ನು ಸಂಗ್ರಹಿಸಿಕೊಂಡರು. ಈ ವೇಳೆ ಗ್ರಾಮದ ಮಹಿಳೆಯರು ತಮ್ಮ ಹಳ್ಳಿಯ ಜನಪದ ಗೀತೆಗಳನ್ನು ಹಾಗೂ ಒಡಪುಗಳನ್ನು ಹೇಳಿ ತಮ್ಮ ಮುಂದಿನ ಪೀಳಿಗೆಗಳಿಗೆ ಇವು ಉಪಯುಕ್ತವಾಗಲೆಂದು ತಿಳಿಸಿದರು.

ದೂರದರ್ಶನ, ರೇಡಿಯೊ, ಎಫ್.ಎಂ. ಮುಂತಾದ ಮಾಧ್ಯಮಗಳಲ್ಲಿ ಪಾಶ್ಚಿಮಾತ್ಯ ಸಂಗೀತ, ಚಲನಚಿತ್ರ ಗೀತೆಗಳು, ಧಾರಾವಾಹಿಗಳೇ ಹೆಚ್ಚು ಪ್ರಸಾರವಾಗುತ್ತಿವೆ. ಇವುಗಳ ನಡುವೆ ನಮ್ಮ ಮೂಲ ಸಂಸ್ಕೃತಿಯಾದ ಜಾನಪದ ಗೀತೆಗಳು ಕ್ಷೀಣಿಸುತ್ತಿವೆ. ಸಂಘ ಸಂಸ್ಥೆಗಳ ಸದಸ್ಯರು ಜಾನಪದ ಗೀತೆಗಳ ಕಲಾವಿದರನ್ನು ಗೌರವಿಸಿದಾಗ ಜಾನಪದ ಸಂಪತ್ತು ಉಳಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಜಾನಪದ ಕಲೆಯನ್ನು ಕಲಿತು ಹಾಡು, ಕುಣಿತ ಮಾಡುವುದರಿಂದ ಉಳಿಸಬಹುದು. ಕಲಿಯುವುದು ಕಷ್ಟ ಎಂಬ ಭಾವನೆ ಇದ್ದರೆ ಜಾನಪದ ಗೀತೆಗಳು ಉಳಿಯುವುದಿಲ್ಲ. ಯುವಕರು ಆಸಕ್ತಿಯಿಂದ ಜಾನಪದ ಸಾಹಿತ್ಯ ಹಾಗೂ ಗೀತೆಗಳನ್ನು ಕಲಿತು ಮುಂದಿನ ಜನಾಂಗಕ್ಕೆ ವರ್ಗಾಯಿಸಬೇಕಾಗಿದೆ ಎಂದರು.

ಭಾವಗೀತೆಗಳು ಕವಿ ಹಾಗೂ ಸಾಹಿತಿಗಳ ಮನಸ್ಸಿನ ಅಂತರಾಳದ ಭಾವನೆಗಳಿಂದ ಹುಟ್ಟಿದರೆ, ಜನಪದ ಗೀತೆಗಳು ಗ್ರಾಮೀಣ ಪ್ರದೇಶದ ಜನಪದ ಸಾಹಿತ್ಯಗಳಿಂದ ಹುಟ್ಟುತ್ತವೆ. ಗ್ರಾಮೀಣ ಪ್ರದೇಶದ ಜಾನಪದ ಸೊಬಗನ್ನು ಜನರಲ್ಲಿ ಪರಿಚಯಿಸುತ್ತದೆ. ಹಾಗಾಗಿ ಹೆಚ್ಚು ಹೆಚ್ಚು ಜನಪದ ಹಾಡುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

Advertisement

ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಅಳಿವಿನಿಂದಾಗಿ ನಮ್ಮ ಕಲೆ, ಸಂಸ್ಕೃತಿ ಬಿಂಬಿಸುವಂತರಹ ಜನಪದ ಗೀತೆಗಳು ಕಣ್ಮರೆಯಾಗುತ್ತಿವೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಬೇಕೆನ್ನುವ ಉದ್ದೇಶದಿಂದ ಕಳೆದ 3-4 ವರ್ಷಗಳಿಂದಲೂ ಅನೇಕ ಜಿಲ್ಲೆಗಳಲ್ಲಿ ಇರುವ ಇಂತಹ ಜನಪದ ಕಲಾವಿದರು ಹುಡುಕಿ ಅವರಿಂದ ಜನಪದ ಸಂಗ್ರಹವನ್ನು ಮಾಡುವ ಕಾರ್ಯವನ್ನು ಮಾಡುತ್ತಿದ್ದೇನೆ. ಈಗಾಗಲೇ ಸುಮಾರು ಸಾವಿರಕ್ಕೂ ಹೆಚ್ಚು ಜಾನಪದಗಳ ಹಾಗೂ ಒಡಪುಗಳ ಸಂಗ್ರಹವನ್ನು ಮಾಡಿದ್ದು, ಜನಪದ ಕಲೆಯಲ್ಲಿ ಪಿ.ಎಚ್.ಡಿ. ಅಧ್ಯಯನ ಮಾಡುತ್ತಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next